Tuesday, March 17, 2026
Flats for sale
Homeರಾಜ್ಯಹಾವೇರಿ : ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ: 22 ಮಂದಿ ವಿರುದ್ಧ ಎಫ್‌ಐಆರ್ ದಾಖಲು.

ಹಾವೇರಿ : ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ: 22 ಮಂದಿ ವಿರುದ್ಧ ಎಫ್‌ಐಆರ್ ದಾಖಲು.

ಹಾವೇರಿ : ಜಿಲ್ಲೆಯ ಸವಣೂರು ಪಟ್ಟಣದಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನೆಲೆಯಲ್ಲಿ ಶಿಕ್ಷಕನಿಗೆ ಚಪ್ಪಲಿ ಹಾರ ಹಾಕಿ ಮೆರವಣಿಗೆ ನಡೆಸಿದ ಪ್ರಕರಣದಲ್ಲಿ 22 ಮಂದಿ ವಿರುದ್ಧ ಎಫ್‌ ಐಆರ್ ದಾಖಲಾಗಿದೆ.

ಡಿಸೆಂಬರ್ 10ರಂದು ಶಾಲೆಯ ಮುಖ್ಯ ಶಿಕ್ಷಕ ರಾಜೇಸಾಬ ಖುದಾನಸಾಬ ಸಂಕನೂರ ನೀಡಿದ ದೂರಿನ ಮೇರೆಗೆ ಶಿಕ್ಷಕ ‘ಜಗದೀಶ ವಗ್ಗಣ್ಣನವರ ವಿರುದ್ಧಮೊದಲು ಪ್ರಕರಣ ದಾಖಲಾಗಿತ್ತು ಬಳಿಕ ಜಗದೀಶ ಸಹ ದೂರು ನೀಡಿದ್ದು, ಶಾಲೆಯಲ್ಲಿ ತನ್ನನ್ನು ಥಳಿಸಿ ಅಪಮಾನ ಮಾಡಿ ಜೀವ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿದ್ದಾರೆ.

ವಿಡಿಯೋ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಿ ಸವಣೂರಿನ ನಿವಾಸಿಗಳಾದ ಸಾದಿಕ್ ಮನಿಯಾರ್, ಜಿಶನ್ ನಾಗದ, ಅಬ್ದುಲಗನಿ ಪರಾಸ್, ಫಾಜಿಲ್ ಅಹ್ಮದ್ ಮನಿಯಾರ್,

ಅತ್ತಾವುಲ್ಲ ಖಾನ್ ಭಕ್ಷಿ, ಸುಲೇದ್ ಮನಿಯಾರ್, ಮೋಷಿಕ ಖತೀಬ್, ಆಸಿಫ್ ದುಖಂದರ್, ಇಮ್ರಾನ್ ಖಾಂರ್ಜಾ ಮಹಮ್ಮದ್ ಆಸಂತೆಲಾರ್, ಅಮಿರಾಖಾನ್ ಗುತ್ತಲ, ಅಹ್ಮದ್ ಖಾನ್ ಖಾಂಜಾಡೆ, ಅಲ್ಲಾಭಕ್ಷ ಚೋಪದಾರ್, ದಾದಾಪೀರ ಮೊಹಮ್ಮ ಅಸೀಮ್ ಕಿಲ್ಲೇದಾರ, ಆಶೋಕ ಮನ್ನಂಗಿ, ಮಹಮ್ಮದ ಫೀಕ್ ಚುಡಿಗಾರ, ಆಸಿಫ್ ಅಹ್ಮದ್ ದುಖಾಂದಾರ್, ಅಲಾ ಮಕಾಂನದಾರ, ಮಹಮ್ಮದ್ ಹಷತ್ ಕಿಲ್ಲೇದಾರ, ಮಹ ಸಾದಿಕ್ ಚೋಪದಾರ್, ದಾದಾಪೀರತಂಬುಳಿ, ಮಹಮ್ಮದ್ ಹನಿಯ ದುಖಾಂದಾರ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿ ಈವರೆಗೂ ವಿದ್ಯಾರ್ಥಿನಿಯರು ಲೈಂಗಿಕ ಕಿರುಕುಳದ ಬಗ್ಗೆ ಯಾವ ದೂರು ನೀಡಿಲ್ಲ ಶಾಲೆ ಶಿಕ್ಷಕರ ನಡುವೆ ವೈಮನಸ್ಸು ಹಿನ್ನೆಲೆ ಈ ಮಾಡಿದ್ದಾರೆ ಎನ್ನುವ ಶಂಕೆ ವ್ಯಕ್ತವಾಗಿದ್ದು, ಸವಣೂರು ಪೊಲೀ” ತನಿಖೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular