ಹಾವೇರಿ ; ಆಸ್ತಿಗಾಹಿ ಎರಡೂ ಕುಟುಂಬಗಳು ಕೆಸರು ಗದ್ದೆಯಲ್ಲೇ ಬಡಿದಾಡಿಕೊಂಡ ಘಟನೆಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲೂಕಿನ ನದಿಹರಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಕೋಟೆಗೌಡ್ರು ಮತ್ತು ಚನ್ನನಗೌಡ್ರ ಕುಟುಂಬದ ಮಧ್ಯೆ ಕಾಳಗ ನಡೆದಿದ್ದು
ಸುಮಾರು 08 ಎಕರೆ ಆಸ್ತಿ ವಿಚಾರಕ್ಕೆ ಗುದ್ದಾಟ ನಡೆದಿದೆ.
ಕೆಸರು ಗದ್ದೆಯಲ್ಲಿ ಎರಡೂ ಫ್ಯಾಮಿಲಿಗಳು ಮನಬಂದಂತೆ ಬಡಿದಾಡಿಕೊಂಡಿದ್ದು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಮಾರಪಟ್ಟಣಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ವಿವರ ಪಡೆದಿದ್ದಾರೆ.


