Friday, March 13, 2026
Flats for sale
Homeರಾಜ್ಯಸೋಮವಾರಪೇಟೆ : ಬಸ್ಸೊಳಗೆ ಕಾಣಿಸಿಕೊಂಡ ಹಾವು,ಆತಂಕಕ್ಕೆ ಒಳಗಾದ ಪ್ರಯಾಣಿಕರು.

ಸೋಮವಾರಪೇಟೆ : ಬಸ್ಸೊಳಗೆ ಕಾಣಿಸಿಕೊಂಡ ಹಾವು,ಆತಂಕಕ್ಕೆ ಒಳಗಾದ ಪ್ರಯಾಣಿಕರು.

ಸೋಮವಾರಪೇಟೆ : ಬಸ್ಸೋಳಗೆ ಹಾವೊಂದು ಸೇರಿಕೊಂಡು ಆತಂಕ ಸೃಷ್ಟಿಸಿದ ಘಟನೆ ಇಂದು ಮಧ್ಯಾಹ್ನ ಖಾಸಗಿ ಬಸ್ಸ್ ನಿಲ್ದಾಣದಲ್ಲಿ ನಡೆದಿದೆ.

ಕೂಡ್ಲಿಪೇಟೆಯಿಂದ ಸೋಮವಾರಪೇಟೆ ಮಾರ್ಗವಾಗಿ ವಿರಾಜಪೇಟೆಗೆ ತೆರಳುವ ಪಶುಪತಿ ಬಸ್ಸು ಇಂದು ಮಧ್ಯಾಹ್ನ ಪಟ್ಟಣಕ್ಕೆ ಬಂದ ಸಂದರ್ಭ ಇಂಜಿನ್ ಸಮೀಪ ಹಾವೊಂದು ಕಾಣಿಸಿಕೊಂಡಿತು ಇದರಿಂದ ಕೆಲಕಾಲ ಪ್ರಯಾಣಿಕರು ಆತಂಕಕ್ಕೆ ಒಳಗಾಗಿದ್ದರು. ಈ ಸಂದರ್ಭ ಸ್ಥಳಕ್ಕಾಗಮಿಸಿದ ಸ್ನೇಕ್ ರಘು ಹಾವನ್ನುಹಿಡಿದು ಪ್ರಯಾಣಿಕರ ಆತಂಕ ದೂರಮಾಡಿದರು. ಹಿಡಿದಿರುವ ಹಾವು ಕೆರೆ ಹಾವಾಗಿದ್ದು ಬಸ್ಸು ನಿಲ್ಲಿಸಿರುವಾಗ ಸೇರಿಕೊಂಡಿರುವ ಸಾದ್ಯತೆ ಇದೆ ವಿನಾ ಕಾರಣ ಈ ಹಾವಿನಿಂದ ಯಾವುದೇ ತೊಂದರೆ ಆಗುವುದಿಲ್ಲ ನನ್ನ ಸೇವೆಯ ಅಗತ್ಯವಿದ್ದರೆ ಈ ಪೋನ್ ನಂ ಸಂಪರ್ಕಿಸಿ 9844558693 ಎಂದು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular