Friday, March 13, 2026
Flats for sale
Homeರಾಜ್ಯಸೋಮವಾರಪೇಟೆ ; ಬಸವಣ್ಣ ಈ ನಾಡಿನ ಸಾಂಸ್ಕೃತಿಕ ಅಡಿಪಾಯದ ಬುನಾದಿ ಕಟ್ಟಿದ ಮಹಾನ್ ಪುರುಷ :...

ಸೋಮವಾರಪೇಟೆ ; ಬಸವಣ್ಣ ಈ ನಾಡಿನ ಸಾಂಸ್ಕೃತಿಕ ಅಡಿಪಾಯದ ಬುನಾದಿ ಕಟ್ಟಿದ ಮಹಾನ್ ಪುರುಷ : ಕಿರಿಕೊಡ್ಲಿ ಮಠದ ಶ್ರೀ.ಸದಾಶಿವ ಸ್ವಾಮೀಜಿ.

ಸೋಮವಾರಪೇಟೆ ; ಈ ರಾಷ್ಟ್ರದ ಸಾಂಸ್ಕೃತಿಕ ನಾಯಕನಾಗಬೇಕು ಎಂದು ಸರ್ವಧರ್ಮ ಗುರುಗಳು ಬಣ್ಣಿಸಿದರು. ಇಲ್ಲಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ,891ಬಸವ ಜಯಂತಿ ಅಂಗವಾಗಿ ಪಟ್ಟಣದ ಕಕ್ಕೆಹೊಳೆ ಬಳಿಯಲ್ಲಿರುವ ಬಸವೇಶ್ವರ ಸರ್ವದರ್ಮೀಯರು ಸೇರಿ ಪ್ರತಿಮೆಗೆ ಮಾಲಾರ್ಪಣೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ಸಲ್ಲಿಸಿದರು.

ಕರ್ನಾಟಕ ರಾಜ್ಯ ಸರ್ಕಾರ ಬಸವೇಶ್ವರರನ್ನು ರಾಜ್ಯದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಮೊದಲ ಬಸವ ಜಯಂತಿ ಕಾರ್ಯಕ್ರಮದಲ್ಲಿ ಹಿಂದೂ,ಕ್ರೈಸ್ತ,ಮುಸಲ್ಮಾನ ಧರ್ಮಗುರುಗಳು ಸೇರಿದಂತೆ ಎಲ್ಲಾ ಜನಾಂಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಭಾವೈಕ್ಯತೆ ಮೆರೆದಿದ್ದು ವಿಶೇಷವಾಗಿತ್ತು.ಕಿರಿಕೊಡ್ಲಿ ಮಠದ ಶ್ರೀ.ಸದಾಶಿವ ಸ್ವಾಮೀಜಿ ಮಾತನಾಡಿ 12 ನೆ ಶತಮಾನದಲ್ಲಿಯೇ ಬಸವಣ್ಣನವರು ಜಾತಿ,ಮತ,ಬೇಧ ತೊಡೆದು ಎಲ್ಲಾರೂ ಒಂದೇ ಎಂದು ಸಮಾನತೆ ಸಾರಿದ ಮಹಾನ್ ಪುರುಷ,ಅವರ ತತ್ವ ಆದರ್ಶಗಳನ್ನು ಇಂದಿನ ಜನಾಂಗ ಅವುಗಳನ್ನು ಅನುಸರಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣ ವಾಗುತ್ತದೆ ಎಂದರು. ಹಟ್ಟಿಹೊಳೆ ಚರ್ಚ್ ನ ಧರ್ಮ ಗುರುಗಳಾದ ಶ್ರೀ.ಗಿಲ್ಬರ್ಟ್ ಡಿಸಿಲ್ವ ರವರು ಮಾತನಾಡಿ ಬಸವಣ್ಣ ಈ ನಾಡಿನ ಸಾಂಸ್ಕೃತಿಕ ನಾಯಕ ಸಾಂಸ್ಕೃತಿಕ ಅಂದರೆ ನಮ್ಮ ಸಂಸ್ಕೃತಿ ಅದರ ಮೂಲ ಆಶಯವನ್ನು ಈಡೇರಿಸಿದವರು ಅಂತಹ ಮಹಾನ್ ವ್ಯಕ್ತಿಯ ಸ್ಮರಣೆ ಮಾಡಬೇಕಾಗಿದ್ದು ನಮ್ಮೆಲ್ಲರ ಜವಾಬ್ದಾರಿ ಯಾಗಿದೆ ಎಂದು ಅವರು ಸಮಾನತೆ ಸಾರಿದ್ದರಿಂದಲೇ ಇಂದು ನಾವೆಲ್ಲಾ ಒಟ್ಟಿಗೆ ಸೇರುವಂತಾಗಿದೆ ಎಂದರು.

ಪಟ್ಟಣದ ಜಲಾಲಿಯಾ ಮಸೀದಿಯ ಧರ್ಮಗುರು ಹಮೀದ್ ಸಖಾಫಿ ಮಾತನಾಡಿ 900 ವರ್ಷಗಳ ಹಿಂದೆಯೇ ಬಸವೇಶ್ವರರು ಸಮಾನತೆಯ ಮೂಲಕ ಸುಭಿಕ್ಷಾ ಸಮಾಜದ .ಕಂದಾಚಾರ,ಜಾತೀಯತೆ ಸಮಾಜಕ್ಕೆ ಮಾರಕವೆಂದು ತಿಳಿಹೇಳಿದವರು ಎಂದರು.ಕಳಬೇಡ,ಕೊಲಬೇಡ ಎಂಬ ಸಪ್ತ ತತ್ವಗಳನ್ನು ಬೋದಿಸಿದವರು ಈ ತತ್ವವನ್ನು ನಾವುಗಳು ಪಾಲಿಸಿದರೆ ಅಪರಾಧ ಮುಕ್ತ ಸಮಾಜ ನಿರ್ಮಾಣ ವಾಗುತ್ತದೆ ಎಂದರು. ರಾಜ್ಯ ಸರ್ಕಾರದ ಮಾಜಿ ಕ್ರೀಡಾ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ ಹಿಂದೆ ರಾಜ್ಯದ ಮುಖ್ಯ ಮಂತ್ರಿಗಳಾಗಿದ್ದ ಯಡಿಯೂರಪ್ಪನವರು ಬಸವ ಜಯಂತಿ ಗೆ ಸರ್ಕಾರಿ ರಜೆ ಘೋಷಣೆ ಮಾಡಿ ಸರ್ಕಾರದ ವತಿಯಿಂದಲೇ ಆಚರಿಸುವಂತೆ ಅನುದಾನವನ್ನು ಬಿಡುಗಡೆ ಮಾಡಿದ್ದರು ಎಂದು ಸ್ಮರಿಸಿಕೊಂಡರು.

ಬಸವಣ್ಣ ನವರು 12 ನೆ ಶತಮಾನದಲ್ಲಿಯೇ ಅನುಭವ ಮಂಟಪ ಸ್ಥಾಪಿಸಿ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದವರು ಎಂದು ಬಣ್ಣಿಸಿದರು. ತಾಲ್ಲೋಕು ದಂಢಾಧಿಕಾರಿ,ತಹಶೀಲ್ದಾರ್ ನವೀನ್ ಕುಮಾರ್ ಮಾತನಾಡಿ ಬಸವೇಶ್ವರರು ಸಮಾನತೆಯ ಹರಿಕಾರರು,ಕ್ರಾಂತಿಕಾರಿಗಳು ಅವರು ಅಂದು ಮಾಡಿದ ಹೋರಾಟದ ಪಲವೇ ಇಂದಿನ ಜನಾಂಗ ಅನುಭವಿಸುತ್ತಿವೆ ಎಂದರು,ಸ್ತ್ರೀ ಸಮಾನತೆಯ ಚಿಂತನೆ ಬಲಗೊಳಿಸಿ ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿದರು,ದೇಹವನ್ನು ದೇಗುಲಕ್ಕೆ ಹೋಲಿಸಿ ದೇವಾಲಯವನ್ನು ಮಾಡಿವದರು ಎಂದು ತಿಳಿಸಿದರು.

ಕಾರ್ಯಕ್ರಮದ ಸಂಯೋಜಕ ಹಿರಿಯ ಪತ್ರಕರ್ತ ಎಸ್.ಮಹೇಶ್ ಪ್ರಾಸ್ತಾವಿಕ ಮಾತನಾಡಿ ರಾಜ್ಯ ಸರ್ಕಾರ ಬಸವಣ್ಣ ನವರನ್ನು ಈ ರಾಜ್ಯದ ಸಾಂಸ್ಕೃತಿಕ ನಾಯಕನೆಂದು ಘೋಷಿಸಿದ ಬಳಿಕ ಮೊದಲ ಬಸವ ಜಯಂತಿ ಸರ್ವದರ್ಮೀಯರು ಸೇರಿ ಗೌರವಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದ ಅವರು ಮುಂದಿನ ವರ್ಷ 2025ಕೆ ಪಟ್ಟಣದಲ್ಲಿ ಬಸವೇಶ್ವರ ಪುತ್ಥಳಿ ನಿರ್ಮಿಸಿ 25 ವರ್ಷ ಪೂರೈಸಲಿದೆ,ಪುತ್ಥಳಿಯ ಬೆಳ್ಳಿ ಹಬ್ಬ ಆದ್ದರಿಂದ ಮುಂದಿನ ಬಸವ ಜಯಂತಿ ವಿಶೇಷ ಕಾರ್ಯಕ್ರಮ ವಾಗಲಿದೆ ಎಲ್ಲರ ಸಹಕಾರ ಅಗತ್ಯವೆಂದು ಕೋರಿದರು.

ಕಾರ್ಯಕ್ರಮದಲ್ಲಿ ಮುದ್ದಿನಕಟ್ಟೆ ಮಠದ ಶ್ರೀ.ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ,ಸೋಮವಾರಪೇಟೆ ವಿರಕ್ತ ಮಠದ ಶ್ರೀ.ನಿಶ್ಚಲನಿರಂಜನ ದೇಶಿಕೇಂದ್ರ ಸ್ವಾಮೀಜಿ,ಬೆಂಗಳೂರು ಸೋನೆನ ಹಳ್ಳಿ ಬೌದ್ಧ ಗುರುಪೀಠದ ಶ್ರೀ.ಮುನಿರಾಜಪ್ಪ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ಈ ಸಂದರ್ಭ ಪಟ್ಟಣ ಪಂಚಾಯ್ತಿ ಪ್ರಭಾರ ಮುಖ್ಯಾಧಿಕಾರಿ ರೂಪ ಮಹೇಂದ್ರ,ಆರೋಗ್ಯ ನಿರೀಕ್ಷಕ ಜಾಸೀಂಖಾನ್, ಸೋಮವಾರಪೇಟೆ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಕೆ. ಎ. ಆದಮ್,ಸದಸ್ಯ ಬಿ.ಎನ್.ಬಸವರಾಜು, ಕೊಡಗು ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ದೀಪಕ್,ಕರ್ನಾಟಕ ಪ್ರವಾಸಿ ವಾಹನ ಚಾಲಕರ ಸಂಘದ ತಾಲ್ಲೋಕು ಅಧ್ಯಕ್ಷ ರವಿ,ತಾಲ್ಲೋಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಜೇತ,ಸಾಹಿತಿ ಜಲಕಾಳಪ್ಪ,ಜೈಜವಾನ್ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಈರಪ್ಪ, ನಿವೃತ್ತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ.ಸಿ.ಕೆ.ಮಲ್ಲಪ್ಪ, ಗೌರವಾ ಧ್ಯಕ್ಷ ನಿರ್ವಾಣಿ ಶೆಟ್ಟಿ, ಮೋಟಾರು ಕೆಲಸಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್,ಬಿಜೇಪಿ ಮಂಡಲ ಮಹಿಳಾ ಮೋರ್ಚಾ ಅಧ್ಯಕ್ಷೆ ಕವಿತಾ ವಿರುಪಾಕ್ಷ, ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಕೆ. ಏ.ಯಾಕೂಬ್,ಪುಷ್ಪಗಿರಿ ಜೇಸಿ ಸಂಸ್ಥೆ ಅಧ್ಯಕ್ಷ ಎಸ್.ಆರ್.ವಸಂತ,ನಗರ ಬಿಜೆಪಿ ಅಧ್ಯಕ್ಷ ಸೋಮೇಶ್,ಬಹುಜನ ಸಮಾಜವಾದಿ ಪಕ್ಷದ ಜಿಲ್ಲಾ ಪದಾಧಿಕಾರಿ ಜಯಪ್ಪ ಹಾನಗಲ್ಲು,ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular