ಸುಳ್ಯ : ರಾಜ್ಯ ಸರಕಾರದಿಂದ ರಾಜ್ಯದ ಅತ್ಯುತ್ತಮ ಸಹಕಾರಿ ಸಂಘದ ಪ್ರಶಸ್ತಿ ಪುರಸ್ಕೃತ ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘ (ರಿ) ಪುತ್ತೂರು ವತಿಯಿಂದ ಸುಳ್ಯದಲ್ಲಿ ಇಂದು ನೂತನ ಕಟ್ಟಡ ಮತ್ತು ಆಧುನಿಕ ಸಂಸ್ಕರಣಾ ಘಟಕ ಹಾಗೂ ಜೇನು ಚಾಕ್ಲೆಟ್ ನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು ಉದ್ಘಾಟಿಸಿದರು.


1938ರಲ್ಲಿ ಸುಳ್ಯ ತಾಲೂಕಿನ ಚೊಕ್ಕಾಡಿಯಲ್ಲಿ ಸ್ಥಾಪನೆಗೊಂಡ ದಕ್ಷಿಣ ಕನ್ನಡ ಜೇನು ವ್ಯವಸಾಯಗಾರರ ಸಹಕಾರಿ ಸಂಘವು ಜೇನು ಕೃಷಿಕರ ಅಭ್ಯುದಯಕ್ಕಾಗಿ ಕಳೆದ 81 ವರ್ಷಗಳಿಂದ ಜೇನು ಕೃಷಿಯಲ್ಲಿ ನಿರತವಾಗಿದ್ದು ಮಹತ್ತರ ಪ್ರಗತಿಯನ್ನು ಸಾಧಿಸಿದೆ. ಉಡುಪಿ ಮತ್ತು ದ.ಕ ಎರಡು ಜಿಲ್ಲೆಗಳ ಕಾರ್ಯಕ್ಷೇತ್ರ ಹೊಂದಿದ್ದು, ಈಗ 3ಸಾವಿರದಷ್ಟು ಮಂದಿ ಜೇನು ಕೃಷಿಕರು ಸಂಘದ ಸದಸ್ಯರಾಗಿದ್ದು ವ್ಯವಹರಿಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ದ.ಕ. ಜಿಲ್ಲೆಯ ಪುತ್ತೂರಿನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದ್ದು, ಸುಳ್ಯ, ಉಡುಪಿ ಮತ್ತು ಧರ್ಮಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿರುತ್ತದೆ. ಪ್ರಸ್ತುತ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಪುತ್ತೂರು, ಸುಳ್ಯ ,ಬೆಳ್ತಂಗಡಿದಂತಹ ದಟ್ಟಕಾಡುಗಳಿರುವ ಪ್ರಕೃತಿದತ್ತ ನೈಸರ್ಗಿಕ ವಾಗಿ ದೊರೆಯುವ ಜೇನುಗಳು ಸಂಗ್ರಹಿಸಿದ ಹನಿಯನ್ನು ಸಂಸ್ಕರಿಸಿ ಬ್ಯಾಕ್ಟೀರಿಯಾ ಮುಕ್ತ, ಶುದ್ದವಾದ ‘ಮಾಧುರಿ’ ಹನಿಯನ್ನು ನೇರವಾಗಿ ಸಂಘವು ಖರೀದಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ.ಸಂಘವು ಸದಸ್ಯರಿಗೆ ಸಂದರ್ಭಕ್ಕನುಗುಣವಾಗಿ ಜೇನು ಕೃಷಿಗೆ ಸಾಲ ಸೌಲಭ್ಯಗಳನ್ನು ಒದಗಿಸಲಾಗುತ್ತದೆ.ಪರಿಕರಗಳನ್ನುನೀಡಿ, ತರಬೇತಿಯನ್ನು ನೀಡಿ ಜೇನು ವ್ಯವಸಾಯ ವನ್ನು ಉಭಯಜಿಲ್ಲೆಗಳಲ್ಲಿ ಉತ್ತೇಜಿಸುತ್ತದೆ.
ಉದ್ಘಾಟನೆ ಬಳಿಕ ಅಧ್ಯಕ್ಷರಾದ ರಾಜೇಂದ್ರ ಕುಮಾರ್ ಮಾತನಾಡಿದ್ದು ಶುದ್ದ ಜೇನು ತುಪ್ಪ ಮಾರಟ ಮಾಡುವುದು ಇವತ್ತಿನ ಕಾಲದಲ್ಲಿ ಬಹಳ ವಿರಳ ಆದರೆ ಸುಳ್ಳದಲ್ಲಿ ಶುದ್ಧ ಜೇನುತುಪ್ಪ ಮಾರಾಟ ಮಾಡುವುದು ಸಂತೋಷ ದ ವಿಚಾರ,ಮಾರುಕಟ್ಟೆಯಲ್ಲಿ ಪ್ರಚಾರ ಪಡೆದರೆ ಕಂಡಿತವಾಗಿ ಯಶಸ್ವಿಯಾಗುತ್ತದೆ,ಜೇನು ತುಪ್ಪದ ಚಾಕ್ಲೇಟ್ ಕೂಡ ಉತ್ತಮ ವಾಗಿದ್ದು ಮುಂದಿನ ದಿನಗಳಲ್ಲಿ ಉತ್ತಮ ಮಾರುಕಟ್ಟೆ ಸಿಗುತ್ತದೆಂದು ಆಶಿಸಿದರು. ಸರಕಾರದಿಂದ ಜೇನು ವ್ಯವಸಾಯಕ್ಕೆ ನಿಗದಿದ ಬೆಲೆಸಿಗುವಂತೆ ಸರಕಾರದ ಜನಪ್ರತಿಧಿಗಳಿಗೆ ಕೋರಿದರು ಹಾಗೂ ಸರಕಾರಿ ಸಂಘದ ಅಧ್ಯಕ್ಷ ರಾಜೇಂದ್ರ ಕುಮಾರ್ ರವರು ಕಟ್ಟಡಕ್ಕೆ ತಮ್ಮ ವತಿಯಿಂದ 5 ಲಕ್ಷ ರೂಪಾಯಿ ದೇಣಿಗೆ ನೀಡಿದರು.
ಸುಳ್ಯ ಶಾಸಕ ಭಾಗೀರಥಿ ಮುರುಳ್ಯ ರವರು ಮಾತನಾಡಿ ಜೇನು ಕೃಷಿಕರ ಮಾರುಕಟ್ಟೆಗೆ ಚಿಂತನೆ ನಡೆದಿದ್ದು ಇದೊಂದು ಉತ್ತಮ ಕಾರ್ಯವೆಂದು ಹೇಳಿದರು,ಕೇಂದ್ರ ಸರಕಾರದಿಂದಲೂ ಜೇನು ಕೃಷಿಕರಿಗೆ ಪ್ರೋತ್ಸಾಹ ಸಿಗಲೆಂದು ಈ ಕಾರ್ಯಕ್ಕೆ ಸಹಕಾರ ಸಂಘದ ಪಾತ್ರನೂ ಮುಖ್ಯವೆಂದರು.
ಬಳಿಕ ಜೇನು ಚಾಕಲೇಟ್ ತಯಾರಿಸದಿದ್ದ ಬೆಂಗಳೂರಿನ ಮೂಲದ ಪ್ರಶಾಂತ್ ಹಾಗೂ ಭವನ ದಂಪತಿಗಳಿಗೆ ವೇದಿಕೆಯಲ್ಲಿ ಸನ್ಮಾನಿಸಿದರು.
ಶೋಭಾ ಕರಂದ್ಲಜೆ ಯವರು ಮಾತನಾಡಿ ರೈತಾಪಿ ಕೆಲಸದಿಂದ ಸುಳ್ಯದ ಜನರು ಅವಲಂಬಿಸಿರುತ್ತದೆ, ದೇಶದಲ್ಲಿ ಅತ್ಯಂತ ಹೆಚ್ಚು ಉದ್ಯೋಗ ಕೊಡುವ ಕ್ಷೇತ್ರ ಎಂದರೆ ಅದು ಕೃಪಿ,ಕೃಷಿಯ ನಂತರ ಜನರಿಗೆ ಹೆಚ್ಚಿನ ಪ್ರಾಸ್ತವ್ಯತೆ ಕೊಡುವುದು ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆ,ಅಡಿಕೆ ಅನ್ನುವಂತಹದು ವಿಷವಲ್ಲ,ನಮ್ಮ ಹಿರಿಯರು ಹಿಂದಿನಿಂದಲೂ ಅಡಿಕೆ ತಿಂದು ನೂರಾರು ವರ್ಷ ಬದುಕಿದ್ದಾರೆ,ಆದರೆ ಇಂದಿನ ಕಾಲದಲ್ಲಿ ಅಡಿಕೆಗೆ ವಿಷಕಾರಿಕ ಬೆರೆಸಿ ಕ್ಯಾನ್ಸರ್ ನಂತಹ ಮಾರಕ ಕಾಯಿಲೆ ಬಂದಿರುವಂತದು ನೈಜ ವರದಿ ,ಆದರೆ ನೈಜ ಅಡಿಕೆಯಿಂದ ಯಾವತ್ತೂ ಕ್ಯಾನ್ಸರ್ ಬರಲಿಲ್ಲ ವೆಂಬುದನ್ನು ವಿವರಿಸಿದರು. ಪೂರಕ ಕೃಷಿ ಮಾಡುವವರು ಆತ್ಮಹತ್ಯೆ ಗೆ ಯತ್ನಿಸಿಲ್ಲ,ಯಾರು ತೋಟಗಾರಿಕೆಯಲ್ಲಿ ಒಂದೇ ಕೃಷಿ ಯನ್ನು ನಂಬಿರುತ್ತಾರೆ ಅಂತಹವರು ಆತ್ಮಹತ್ಯೆ ಗೆ ಬಲಿಯಾಗಿರುವುದು ಹೆಚ್ಚು , ನಮ್ಮ ರಫ್ತು ಮಾಡುವ ವಸ್ತುಗಳಿಗೆ ಒಂದು ಗುಣಮಟ್ಟ,ದೇಶದಲ್ಲಿ ಉಪಯೋಗಿಸುವ ವಸ್ತುಗಳಿಗೆ ಇನ್ನೊಂದು ಗುಣಮಟ್ಟ ವಿರುವುದು ನಮ್ಮ ದುರದೃಷ್ಟಕರ ಸಂಗತಿ .ಒಂದು ಸಕ್ಕರೆ ಫ್ಯಾಕ್ಟರಿಗೆ ೧೦೦ ಕ್ವಿಂಟಾಲ್ ಸಲ್ಫೆಟ್ ಬರುತ್ತೆ,ಬೆಲ್ಲಕ್ಕೂ ಸಲ್ಪೈಟ್ ಬೆರಕೆ ಮಾಡುತ್ತಾರೆ ಈ ಬಗ್ಗೆ ಯಾರು ತಲೆಕೆಡಿಸಿಕೊಳ್ಳಲ್ಲ ಆದರೆ ಮುಂದಿನ ದಿನಗಳಲ್ಲಿ ನೈಜ ಗುಣಮಟ್ಟದ ಜೇನುಹನಿ ಗಳನ್ನು ಬಳಸುವುದು ಉತ್ತಮವೆಂದರು. ಅಡಿಕೆ, ತೆಂಗುಗಳಿಗೆ ವಿದೇಶಗಳಲ್ಲಿ ಬೇಡಿಕೆವಿದೆ,ಆದರೆ ಹೆಚ್ಚು ತಮಿಳುನಾಡು ಹಾಗೂ ಕೇರಳದಿಂದ ರಫ್ತಾಗುತ್ತಿದ್ದು ಹೋಗುತ್ತಿದ್ದು ಕರ್ನಾಟಕದಲ್ಲಿ ಮತ್ತಷ್ಟು ತೆಂಗು ಬೆಲೆಗೆ ಪ್ರೋತ್ಸಾಹ ನೀಡಬೇಕೆಂದು ಆಗ್ರಹಿಸಿದ್ದಾರೆ.
ವೇದಿಕೆಯಲ್ಲಿ ದ.ಕ ಜೇನು ವ್ಯವಸಾಯಗಾರರ ಸಹಕಾರಿ ಸಂಘ (ರಿ ) ಪುತ್ತೂರು ಅಧ್ಯಕ್ಷರಾದ ಚಂದ್ರ ಕೋಲ್ಚಾರು,ಪ್ರಸಾದ್ ರೆಡ್ಡಿ,ನಗರ ಪಂಚಾಯತ್ ಅಧ್ಯಕ್ಷರು ಶಶಿಕಲಾ ನೀರಬಿದರೆ ,ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರು ಮುಸ್ತಾಫಾ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.


