ಸುಳ್ಯ : ಲ್ಯಾಂಡ್ ಮಾಫಿಯಾಕ್ಕಾಗಿ ರಾಮನಗರ ಜಿಲ್ಲೆಯ ಹೆಸರನ್ನು ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾವಣೆ ಮಾಡಿದ್ದಾರೆಂದು ಇದರಲ್ಲಿ ರಾಜಕೀಯ ಲಾಭಿ ಇದೆ ಸುಳ್ಯದಲ್ಲಿ ಕೇಂದ್ರ ಸಚಿವೆ ಶೋಭ ಕರಂದ್ಲಜೆ ಹೇಳಿದ್ದಾರೆ. ದಿಗ್ರೆಟರ್ ಬೆಂಗಳೂರು ಅಂತ ಹೇಳಿ ಒಂದು ಮಳೆಗೆ ಮುಳುಗಿಸಿಬಿಟ್ಟರು,ಬೆಂಗಳೂರು ಎಂದರೆ ಪದದಲ್ಲಿ ಲ್ಯಾಂಡ್ ಮಾಫಿಯಾ ಇದೆ. ರಾಮನಗರ ಹೆಸರು ತೆಗೆದು ಬೆಂಗಳೂರು ಸೇರಿಸುವಂತಹದು ಲ್ಯಾಂಡ್ ಮಾಫಿಯಾ ಕಾರಣಕ್ಕಾಗಿ. ಇವತ್ತು ಬೆಂಗಳೂರಿನ ಸುತ್ತುಮುತ್ತುನಲ್ಲಿರುವವರಿಗೆ ಬೆಂಗಳೂರು ಹೆಸರು ಬೇಕು,ಅದಕ್ಕಾಗಿ, ರಾಮನಗರ ಜಿಲ್ಲೆಯ ಹೆಸರನ್ನು ತೆಗೆದು ಬೆಂಗಳೂರು ದಕ್ಷಿಣ ಎಂದು ಬದಲಾಯಿದ್ದಾರೆ, ಇದರ ಹಿಂದೆ ರೈರತ ಜಮೀನನ್ನು ಕಿತ್ತುಕೊಂಡು ಬೆರೆಯವರಿಗೆ ಕೊಡುವಂತಹದು,ಲೇಹಹೌಟ್,ಬಿಲ್ಡರ್ ಗಳಿಗೆ ಕೊಡುವಂತಹದು ದೊಡ್ಡ ಷಡ್ಯಂತ್ರ ನಡೆಯುತ್ತಿದೆ ಈ ಬಗ್ಗೆ ಜಿಲ್ಲೆಯ ಜನ ಹೆಚ್ಚೆತ್ತು ಈ ಷಡ್ಯಂತ್ರದ ವಿರುದ್ದ ಹೋರಾಡಬೇಕಿದೆ. ಎಂದರು.
ಬಳಿಕ ಮಾತನಾಡಿದ ಅವರು ಅಸ್ಪತ್ರೆಯ ಆವರಣದಲ್ಲಿ ಇರುವಂತಹ ಜನೌಷಧಿ ಕೇಂದ್ರ ಗಳನ್ನು ಮುಚ್ಚುತ್ತಿರುವುದು ಮೆಡಿಕಲ್ ಮಾಫಿಯಾ ಎಂದರು. ಈ ಹಿಂದೆ ಶರಣಗೌಡ ಪಾಟೀಲ್ ರವರು ಮುಚ್ಚುತ್ತೆವೆಂದು ಹೇಳಿಕೆ ನೀಡಿದ್ದರು ಅದರಂತೆ ಮಚ್ಚಲು ನಿರ್ಧರಿಸಿದ್ದಾರೆ. ಈ ಔಷಧ ಕೇಂದ್ರ ಕೇವಲ ಆಸ್ಪತ್ರೆಯಲ್ಲಿರುವ ರೋಗಿಗಳು ಮಾತ್ರವಲ್ಲ ,ರೋಗಿಗಳ ಪರಿವಾರ,ಅಕ್ಕಪಕ್ಕದ ಊರಿನವರು ಅನುಪಾಸಿನ ವಾರ್ಡಿನ ಎಲ್ಲರೂ ಖರಿದಿ ಮಾಡುತ್ತಾರೆ. ಈ ಕೇಂದ್ರ ಇರುವುದೇ 100 ರೂ.ಔಷಧ ,3 ರೂಪಾಯಿಗೆ ಕೊಡಲಿಕ್ಕೆ,1000 ರೂ ಔಷಧ 100 ರೂ ಕೊಡಲಿಕ್ಕೆ. ಕೇಂದ್ರ ಸರಕಾರ ಇವತ್ತಿನ ವರೆಗೆ 15 ಸಾವಿರ ಜನೌಷಧಿ ಕೇಂದ್ರ ಸ್ಥಾಪಿಸಿದ್ದು ಇನ್ನೂ 10000 ಸಾವಿರ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಲು ಕಾರ್ಯಚರಣೆ ನಡೆಸುತ್ತಿದೆ.ಇಲ್ಲಿ ಕಾಂಗ್ರೆಸ್ ಸರಕಾರ ಇದು ಫಾರ್ಮಾಸಿ ಕಂಪೆನಿಯ ಜೊತೆ ಸಾಮಿಲಾಗಿ ಲೂಟಿ ಹೊಡೆಯುವ ಷಡ್ಯಂತ್ರ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಜೆ ಸುಳ್ಯದಲ್ಲಿ ಆಕ್ರೋಶ ಹೊರಹಾಕಿದ್ದಾರೆ.