Sunday, March 15, 2026
Flats for sale
Homeಜಿಲ್ಲೆಸುಳ್ಯ : ಪಾಂಡಿಚೇರಿಯಲ್ಲಿ ನೀರಿನಲ್ಲಿ ಮುಳುಗಿ ಸುಳ್ಯದ ಯುವಕ ಸಾವು.

ಸುಳ್ಯ : ಪಾಂಡಿಚೇರಿಯಲ್ಲಿ ನೀರಿನಲ್ಲಿ ಮುಳುಗಿ ಸುಳ್ಯದ ಯುವಕ ಸಾವು.

ಸುಳ್ಯ : ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದ ಸುಳ್ಯ ತಾಲೂಕಿನ ಪಂಜದ ಯುವಕನೊಬ್ಬ ತನ್ನ ಸ್ನೇಹಿತರೊಂದಿಗೆ ಮೋಜು ಮಸ್ತಿಯಲ್ಲಿದ್ದಾಗ ಪಾಂಡಿಚೇರಿಯಲ್ಲಿ ಸಮುದ್ರದಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.

ಪಂಜ ಕೂತ್ಕುಂಜದ ಚಿದ್ಗಲ್ಲು ನಿವಾಸಿ ಗೋಪಾಲ್ ಎಂಬವರ ಪುತ್ರ ಬಿಪಿನ್ ಮೃತರು. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಿಪಿನ್ ಶನಿವಾರ ಸ್ನೇಹಿತರ ಜತೆ ಪಾಂಡಿಚೇರಿಗೆ ಬಂದಿದ್ದರು. ಬಿಪಿನ್ ನೀರಿನಲ್ಲಿ ಮುಳುಗಿದಾಗ ಸ್ನೇಹಿತರು ಬೀಚ್‌ಗೆ ಹೋಗಿದ್ದರು.

ಭಾನುವಾರ ಮೃತದೇಹ ಪತ್ತೆಯಾಗಿದೆ. ಬಿಪಿನ್ ಅವರ ಪೋಷಕರು ಮತ್ತು ಸಹೋದರಿಯನ್ನು ಅಗಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular