Wednesday, October 22, 2025
Flats for sale
Homeಜಿಲ್ಲೆಸುಳ್ಯ: ಕಾಂತಾರ ಸಿನಿಮಾ ನೋಡಿದಕ್ಕೆ ಮುಸ್ಲಿಂ ಯುವಜೋಡಿಯ ಮೇಲೆ ಹಲ್ಲೆ !

ಸುಳ್ಯ: ಕಾಂತಾರ ಸಿನಿಮಾ ನೋಡಿದಕ್ಕೆ ಮುಸ್ಲಿಂ ಯುವಜೋಡಿಯ ಮೇಲೆ ಹಲ್ಲೆ !

ಸುಳ್ಯ: ಸಂತೋಷ್ ಚಿತ್ರಮಂದಿರದ ಆವರಣದಲ್ಲಿ ‘ಕಾಂತಾರ’ ಸಿನಿಮಾ ವೀಕ್ಷಣೆಗೆಂದು ಬಂದ ಮುಸ್ಲಿಂ ಯುವಜೋಡಿಯ ಮೇಲೆ ಮುಸ್ಲಿಂ ಯುವಕರ ಗುಂಪೊಂದು ದಾಳಿ ನಡೆಸಿ ಥಳಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ.

ಬುಧವಾರ ಯುವಕ ಮತ್ತು ಯುವತಿ ಸುಳ್ಯದ ಸಂತೋಷ್ ಚಿತ್ರಮಂದಿರದ ಆವರಣದಲ್ಲಿ ಸಿನಿಮಾ ನೋಡಲು ಬಂದವರು ಮಾತನಾಡುತ್ತಾ ನಿಂತಿದ್ದರು ಎನ್ನಲಾಗಿದೆ.

ಸ್ಥಳೀಯ ಮುಸ್ಲಿಂ ಯುವಕರ ಗುಂಪೊಂದು ಯುವಕ ಮತ್ತು ಯುವತಿಯನ್ನು ಪ್ರಶ್ನಿಸಿದ್ದು, ಬಳಿಕ ಯುವಕನಿಗೆ ಥಳಿಸಿದರೆನ್ನಲಾಗಿದೆ. ಬಳಿಕ ‘ಕಾಂತಾರ’ ಸಿನಿಮಾ ನೋಡಬಾರದು ಎಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಇದರಿಂದ ಮುಸ್ಲಿಮರು ಕಾಂತಾರ ಸಿನಿಮಾ ನೋಡಬಾರದೇ? ಎಂಬ ಪ್ರಶ್ನೆ ಮೂಡಿದೆ.

ಈ ವೇಳೆ ಚಿತ್ರಮಂದಿರದ ಮಾಲೀಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಹಲ್ಲೆಗೊಳಗಾದ ಯುವಕ ಮತ್ತು ಹಲ್ಲೆಗೈದವರ ತಂಡವನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular