ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಚಿಂತನೆ ಮೌನೇಶ್ವರ ದೇವಸ್ಥಾನದ ಬಳಿಯ ಅಂಗಡಿಯವೊಂದರ ಮೇಲ್ಭಾಗದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಹುಲಿ ಚರ್ಮ ಪತ್ತೆಯಾಗಿದೆ
ಮೌನೇಶ್ವರ ದೇವಸ್ಥಾನ ಪಕ್ಕದಲ್ಲಿಯ ಈಶ್ವರ ದೇವಸ್ಥಾನದಲ್ಲಿ ಸಾಧು ಇರುತ್ತಿದು ಅವರ ಬಳಿಯಲ್ಲಿಯೇ ಇದು ಇದ್ದಿರಬಹುದು ಎಂದು ಅನುಮಾನಿಸಲಾಗುತ್ತಿದೆ.
ಕಳೆದ ಕೆಲವು ದಿನಗಳಿಂದ ಸಾಧು ಸಂಗಯ್ಯ ಎನ್ನುವಂತವರು ಎಲ್ಲಿಗೊ ಹೋಗಿದ್ದು, ಅವರು ವಾಸಿಸುತ್ತಿದ್ದ ಕೊಠಡಿ ಬೀಗವನ್ನು ಮುರಿಯಲಾಗಿದೆ, ಅವರ ಕೊಠಡಿಯಲ್ಲಿಯೇ ಈ ಹುಲಿಯ ಚರ್ಮ ಇದ್ದೀರಾ ಎಂದು ಜನ ಅನುಮಾನಿಸುತ್ತಿದ್ದಾರೆ.
ಇದೇ ಈಶ್ವರ ದೇವಸ್ಥಾನದ ಮುಂಭಾಗದಲ್ಲಿನ ಪಾನ್ ಡಬ್ಬ ಒಂದರ ಮೇಲೆ ಹುಲಿ ಚರ್ಮವನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟು ಅಂಗಡಿ ಮೇಲೆ ಇಡಲಾಗಿದೆ. ಇದನ್ನು ನೋಡಿದ ಸ್ಥಳೀಯರು ಸುರ್ಪುರ ಪೊಲೀಸರಿಗೆ ಮತ್ತು ಅರಣ್ಯ ಇಲಾಖೆಯವರಿಗೆ ಮಾಹಿತಿಯನ್ನು ನೀಡಿದ್ದಾರೆ.
ಶನಿವಾರ ತಡರಾತ್ರಿ ಸುರ್ಪುರ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಕೃಷ್ಣ ಸುಬೇದಾರ್ ಮತ್ತು ತಂಡ ಆಗಮಿಸಿ ಪ್ಲಾಸ್ಟಿಕ್ ಚೀಲದಲ್ಲಿ ಹುಲಿ ಚರ್ಮ ಇರುವುದನ್ನ ನೋಡಿ ಅದನ್ನು ಪೊಲೀಸ್ ಠಾಣೆಗೆ ತರಲಾಗಿದೆ.
ಹುಲಿ ಚರ್ಮ ಅಸಲಿಯೋ ಅಥವಾ ನಕಲಿಯೋ ಎನ್ನುವುದು ಪರೀಕ್ಷೆಯಿಂದ ತಿಳಿದು ಬರಬೇಕಿದೆ. ಹುಲಿ ಚರ್ಮ ಕಾಣೆಯಾಗಿರುವ ಸಾಧು ಬಳಿಯಲ್ಲಿಯೇ ಇತ್ತ ಅಥವಾ ಬೇರೆ ಇನ್ನು ಯಾರಾದರೂ ತಂದು ಇಟ್ಟಿದ್ದಾರೆ ಎನ್ನುವಂತ ಅನುಮಾನವೂ ಕೂಡ ವ್ಯಕ್ತವಾಗುತ್ತಿದೆ. ಪೊಲೀಸರು ಹಾಗೂ ಅರಣ್ಯ ಇಲಾಖೆ ತನಿಖೆಯಿಂದ ಮಾತ್ರ ಹುಲಿಯ ಚರ್ಮ ಅಸಲಿಯೊ ನಕಲಿಯೊ, ಅಸಲಿಯಾಗಿದ್ದರೆ ಇದರ ಹಿಂದೆ ಯಾರು ಇದ್ದಾರೆ ಎನ್ನುವುದು ತಿಳಿದು ಬರಲಿದೆ
ಘಟನೆ ಕುರಿತು ತಿಂಥಣಿ ಗ್ರಾಮ ಪಂಚಾಯಿತಿ ಸದಸ್ಯ ಬೈರಣ್ಣ ಡಿ.ಅಂಬಿಗೇರ ಎನ್ನುವವರು ಮಾತನಾಡಿ,ಇದರ ಸಮಗ್ರ ತನಿಖೆಯಾಗಬೇಕು ಎಂದು ಆಗ್ರಹಿಸಿದ್ದಾರೆ.


