Wednesday, March 11, 2026
Flats for sale
Homeರಾಜ್ಯಸುರಪುರ : ಟ್ರಾಕ್ಟರ್ ‌ನಲ್ಲಿ ತುಂಬಿದ್ದ ಭತ್ತದ ಹುಲ್ಲಿಗೆ ಆಕಸ್ಮಿಕ ಬೆಂಕಿ,ಸುಟ್ಟು ಭಸ್ಮ.

ಸುರಪುರ : ಟ್ರಾಕ್ಟರ್ ‌ನಲ್ಲಿ ತುಂಬಿದ್ದ ಭತ್ತದ ಹುಲ್ಲಿಗೆ ಆಕಸ್ಮಿಕ ಬೆಂಕಿ,ಸುಟ್ಟು ಭಸ್ಮ.

ಸುರಪುರ : ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕಕ್ಕೇರಾ ಪುರಸಭೆ ವ್ಯಾಪ್ತಿಯ ಮಂದಲಾಪುರ ಗ್ರಾಮದಲ್ಲಿ ಟ್ರ್ಯಾಕ್ಟರ್ ನಲ್ಲಿ ಭತ್ತದ ಹುಲ್ಲು ತುಂಬಿದ್ದು ಆಕಸ್ಮಿಕ ಬೆಂಕಿ ಬಿದ್ದು ಹುಲ್ಲು ಸುಟ್ಟು ಭಸ್ಮವಾಗಿದೆ.

ಟ್ರ್ಯಾಕ್ಟರ್ ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹುಲ್ಲು ತುಂಬಿದ್ದರಿಂದ ಮೇಲ್ಗಡೆ ಇದ್ದ ವಿದ್ಯುತ್ ತಂತಿ ತಗುಲಿದ್ದರಿಂದ ಬೆಂಕಿ ಬಿದ್ದಿದೆ ಎಂದು ಹೇಳಲಾಗುತ್ತಿದೆ.ಕಾಮನಟಗಿ ಗ್ರಾಮದ ವ್ಯಕ್ತಿಗಳಿಗೆ ಸೇರಿದ ಟ್ರ್ಯಾಕ್ಟರ್ ನಲ್ಲಿ ಹುಲ್ಲು ತುಂಬಿಕೊಂಡು ಹೋಗಲಾಗುತ್ತಿತ್ತು ಬೆಂಕಿ ಹತ್ತಿರುವುದನ್ನು ನೋಡಿದ ಜನರು ತಕ್ಷಣಕ್ಕೆ ಚಾಲಕನ ಗಮನಕ್ಕೆ ತಂದಿದ್ದಾರೆ, ಚಾಲಕ ಎಲ್ಲಾ ಹುಲ್ಲು ಕೆಳಗೆ ಹಾಕುವ ಮುನ್ನವೇ ಹುಲ್ಲು ಸುಟ್ಟು ಕರಕಲಾಗಿದೆ.

ಪಕ್ಕದಲ್ಲಿಯೇ ವಿದ್ಯುತ್ ಪರಿವರ್ತಕ ಇದ್ದು ಸ್ವಲ್ಪದರಲ್ಲಿಯೇ ಭಾರಿ ಅನಾಹುತ ಸಂಭವಿಸುವುದು ಸ್ಥಳೀಯರ ನೆರವಿನಿಂದ ತಪ್ಪಿದಂತಾಗಿದೆ.

ಕಕ್ಕೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular