ಸುರಪುರ: ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಕೆಂಭಾವಿ ಸಮೀಪದ ಯಕ್ತಾಪೂರ ಗ್ರಾಮದ ಕಸ್ತೂರಬಾ ಶಾಲೆಯಲ್ಲಿ ಕಲುಷಿತ ನೀರು ಸೇವಿಸಿ 29 ಮಕ್ಕಳು ಅಶ್ವಸ್ಥವಾಗಿರುವಂತ ಘಟನೆ ನಡೆದಿದೆ.
ವಾಂತಿಯಿಂದ ಅಸ್ವಸ್ಥಗೊಂಡ ಎಲ್ಲಾ ವಿದ್ಯಾರ್ಥಿಗಳನ್ನು ಕೆಂಭಾವಿ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ನೀಡಲಾಗುತ್ತಿದೆ.ಘಟನೆಯ ಸುದ್ದಿ ತಿಳಿದು ಆಸ್ಪತ್ರೆಗೆ ಹಾಗೂ ಶಾಲೆಗೆ ಜಿಲ್ಲಾಧಿಕಾರಿ ಡಾ:ಸುಶೀಲಾ ಬಿ ಜಿಲ್ಲಾ ಪಂಚಾಯಿತಿ ಸಿಇಓ ಗರೀಮಾ ಪನ್ವಾರ್ ಎಸ್ ಪಿ ಸಂಗೀತ ಜಿ ತಹಸಿಲ್ದಾರ್ ವಿಜಯಕುಮಾರ್ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ ಆರ್ ವಿ ನಾಯಕ್ ತಾಲೂಕು ಪಂಚಾಯಿತಿ ಇಓ ಬಸವರಾಜ ಸಜ್ಜನ್ ಬಿಇಓ ವಸಂತಕುಮಾರ್ ಶಾಬಾದಕರ್ ಭೇಟಿ ನೀಡಿದ್ದಾರೆ.
ಘಟನೆಗೆ ಕಾರಣ ಏನು ಎನ್ನುವುದನ್ನು ತಿಳಿಯಲು ಮಕ್ಕಳು ಸೇವಿಸಿರುವ ಬಿಸ್ಕತ್ತು ಚಹಾ ನೀರು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ತಿಳಿದುಬಂದಿದೆ.
ಶಾಲೆಗೆ ಭೇಟಿ ನೀಡಿರುವ ಜಿಲ್ಲಾಧಿಕಾರಿಗಳು ಅಲ್ಲಿರುವ ಅಡುಗೆ ಸಹಾಯಕಿಯರಿಂದ ಮಾಹಿತಿಯನ್ನು ಪಡೆದುಕೊಂಡಿದ್ದಾರೆ.