Tuesday, October 21, 2025
Flats for sale
Homeಜಿಲ್ಲೆಸುರತ್ಕಲ್ ; ಪಡ್ರೆ ಧೂಮವತಿ ದೈವಸ್ಥಾನದ ವಿರುದ್ಧ ಅಪಪ್ರಚಾರ : ಆರೋಪದ ಬಗ್ಗೆ ಆಡಳಿತ ಸಮಿತಿಯಿಂದ...

ಸುರತ್ಕಲ್ ; ಪಡ್ರೆ ಧೂಮವತಿ ದೈವಸ್ಥಾನದ ವಿರುದ್ಧ ಅಪಪ್ರಚಾರ : ಆರೋಪದ ಬಗ್ಗೆ ಆಡಳಿತ ಸಮಿತಿಯಿಂದ ಸ್ಪಷ್ಟನೆ..!

ಸುರತ್ಕಲ್ : ಶ್ರೀ ಧೂಮಾವತಿ ದೈವಸ್ಥಾನಕ್ಕೆ ಸುಮಾರು 800 ವರ್ಷಕ್ಕೆ ಮೇಲ್ಪಟ್ಟ ಇತಿಹಾಸವಿದ್ದು ಇಲ್ಲಿ ವರ್ಷಪ್ರತಿ ಸುಮಾರು 1974 ರಿಂದ ದೈವಸ್ಥಾನಕ್ಕೆ ಸಂಬಂಧಪಟ್ಟ ಸುತ್ತಮುತ್ತಲಿನ ಗ್ರಾಮಸ್ಥರಿಂದ ಸಹಕಾರವನ್ನು ಪಡೆದು. ಮಹೋತ್ಸವವನ್ನು ಸುಲಲಿತವಾಗಿ ನಡೆಸಲು ತಮಗೆ ಸಹಕಾರಿಯಾಗಲೆಂದು ಪಡ್ರೆಯ ಭಂಡ್ರಿಯಾಲ್ ರವರು ಸುಮಾರು 1974 ರಿಂದ ಸಂಬಂಧಪಟ್ಟ ಸುತ್ತಮುತ್ತಲಿನ ಗ್ರಾಮಸ್ಥರಿಂದ ಸಹಕಾರವನ್ನು ಪಡೆದು ಖರ್ಚು, ವೆಚ್ಚಗಳನ್ನು ಭರಿಸುವ ಸಂಬಂಧ ಒಂದು ಸಮಿತಿಯನ್ನು ರಚನೆ ಮಾಡಿದ್ದು ಈ ಸಮಿತಿಗೆ ಯಾವುದೇ ರೀತಿಯ ನೋಂದಾವಣೆಯಾಗಲಿ, ನಿರ್ಧಿಷ್ಟವಾದ ಬೈಲಾ ಆಗಲಿ ಇಲ್ಲದೆ, ಕಾಲಕಾಲಕ್ಕೆ ಅನುಕೂಲಕ್ಕೆ ತಕ್ಕಂತೆ ಸಮಿತಿಯನ್ನು ರಚಿಸಿಕೊಂಡು ಪ್ರತಿ ವರ್ಷ ಗ್ರಾಮಸ್ಥರ ಸಭೆಯನ್ನು ನಡೆಸಿ ಅದರಲ್ಲಿ ಜಾತ್ರಾ ಮಹೋತ್ಸವದ ಚರ್ಚೆ ಮತ್ತು ಸಮಿತಿಯಲ್ಲಿ ಬದಲಾವಣೆ ಮಾಡುವ ಅವಶ್ಯಕತೆ ಇದ್ದಲ್ಲಿ ಭಂಡ್ರಿಯಾಲ್ ರವರ ನೇತೃತ್ವದಲ್ಲಿ ಮೌಖಿಕ ಚರ್ಚೆಯಲ್ಲಿಯೇ ಬಹಳಷ್ಟು ಕೆಲಸಗಳನ್ನು ಮಾಡಿಸಿಕೊಂಡು ಬಂದಿರುತ್ತದೆ. ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳುತ್ತಿದ್ದರು. ಇಲ್ಲಿಯ ಸಮಿತಿಗೆ ಯಾವುದೇ ನೋಂದಾಯಿತ ಪ್ರಕ್ರಿಯೆ ಇಲ್ಲದೆ ಮೌಖಿಕ ಚರ್ಚೆಯಲ್ಲಿಯೇ ಬಹಳಷ್ಟು ಕೆಲಸಗಳನ್ನು ಮಾಡಿಸಿಕೊಂಡು ಬಂದಿದೆ ಎಂದು ಸಮಿತಿ ಸದಸ್ಯ ರೂಪೇಶ್ ರೈ ಯವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಸುಮಾರು 12 ವರ್ಷಗಳಿಂದ ಗ್ರಾಮಸ್ಥರ ಸಭೆ ನಡೆಸದೇ ಇದ್ದುದರಿಂದ ಗಡಿ ಪ್ರಧಾನರಾದ ಶ್ರೀ ಬಾಬು ಭಂಡ್ರಿಯಾಲ್ ರವರು ಈ ವರ್ಷ ಗ್ರಾಮಸ್ಥರ ಸಭೆ ಕರೆದು ದೈವಸ್ಥಾನದ ಸುಗಮ ಆಡಳಿತಕ್ಕೆ ಸಮಿತಿಯನ್ನು ರಚಿಸಲಾಯಿತು. ಈ ಸಮಿತಿ ರಚಿಸುವ ಮುನ್ನ ಗ್ರಾಮದ ಸಭೆ ಕರೆಯದಂತೆ ಕೆಲವೊಂದು ವ್ಯಕ್ತಿಗಳು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯವು ಸಭೆ ನಡೆಸಲು ಅನುಮತಿ ಕೊಟ್ಟಿದ್ದರಿಂದ ಸಭೆ ನಡೆದಿರುತ್ತದೆ.

ಇತ್ತೀಚೆಗೆ ಗ್ರಾಮದ ಪದ್ಮನಾಭ ಶೆಟ್ಟಿ s/o ನರ್ಸು ಶೆಟ್ಟಿ ಪಡ್ರೆ ಮಾಜಿ ಯೂನಿಯನ್ ಬ್ಯಾಂಕ್ ಉದ್ಯೋಗಿ ಇವರು ನ್ಯಾಯಾಲಯದಲ್ಲಿ ಸುಮಾರು 13 ಜನರ ಮೇಲೆ ಖಾಸಗಿ ಎಂದು ದೂರು ನೀಡಿದ್ದು, ಅದರ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ಆಗಿರುತ್ತದೆ. ಆ ದೂರಿನಲ್ಲಿ ಜಾತ್ರೆಯ ಸಮಯ ಭಕ್ತಾದಿಗಳಿಂದ ಸಂಗ್ರಹವಾದ ಸುಮಾರು 6 ಲಕ್ಷ ರೂಪಾಯಿ ಹಣ ಮತ್ತು ಸುಮಾರು 14 -15 ಪವನ್ ಚಿನ್ನ, ಬೆಳ್ಳಿ, ಹಿತ್ತಾಳೆ ಸಹಿತ ಇದನ್ನು ಆಡಳಿತ ಸಮಿತಿಗೆ ಹಸ್ತಾಂತರಿಸದೆ ಕೊಂಡು ಹೋಗಿರುತ್ತಾರೆ ಎಂಬುದಾಗಿ ಕಳ್ಳತನ, ವಂಚನೆ ಪ್ರಕರಣ ದಾಖಲಿಸಿರುತ್ತಾರೆ.

ಆದರೆ ದೈವಸ್ಥಾನದ ಸಮಿತಿಯ ಸಭೆಯಲ್ಲಿ ಪಾರದರ್ಶಕವಾಗಿ ಗಡಿಪ್ರದಾನರು ಮತ್ತು ಸದಸ್ಯರ ಮುಂದೆ ಲೆಕ್ಕಪತ್ರವನ್ನು ನೀಡಲಾಗಿರುತ್ತದೆ. ದೈವಸ್ಥಾನಕ್ಕೆ ಹೊಸದಾಗಿ ಧೂಮಾವತಿ ಮತ್ತು ಬಂಟ ದೈವಗಳಿಗೆ ಪಾತ್ರಿಗಳನ್ನು ನೇಮಿಸಿದ್ದು ಸಂಪ್ರದಾಯದಂತೆ ಅವರಿಗೆ ಗಡಿಪ್ರದಾನರು ಮತ್ತು ಗ್ರಾಮಸ್ಥರ ನಿರ್ಣಯದಂತೆ ಚಿನ್ನದ ಬಳೆಗಳನ್ನು ಹಾಕಲಿರುತ್ತದೆ. ಸಮಿತಿಯ ಬಗ್ಗೆ ನ್ಯಾಯಾಲಯ ಮತ್ತು ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ಬಾಕಿ ಇರುವುದರಿಂದ ನಾವು ತನಿಖೆಗೆ ಸಂಪೂರ್ಣ ಸಹಕಾರ ನೀಡುವುದರೊಂದಿಗೆ ನ್ಯಾಯಾಲಯದ ಆದೇಶಕ್ಕೆ ಬದ್ಧವಾಗಿರುತ್ತೇವೆ. ತನಿಖೆಯಿಂದ ಯಾವುದೇ ರೀತಿಯ ಅಪರಾಧ ಸಾಬೀತಾಗದೆ ಸಾಮಾಜಿಕ ಮಾಧ್ಯಮಗಳಲ್ಲಿ ಅಪಪ್ರಚಾರ ಮಾಡುವ ಮೂಲಕ ಗ್ರಾಮಸ್ಥರ ತೇಜೋವಧೆ ಮಾಡಿರುವುದರಿಂದ ಈ ಸೃಷೀಕರಣವನ್ನು ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಈ ಆರೋಪದಿಂದ ದೈವಸ್ಥಾನ್ ಹೆಸರನ್ನು ಹಾಳುಗೆಡವಲು ಯತ್ನಿಸಿದ್ದು ಹಾಗೂ ಈ ಸಮಿತಿಯಲ್ಲಿರುವ ಗಣ್ಯವ್ಯಕ್ತಿಗಳ ಮಾನಹಾನಿಮಾಡಲಾಗಿದೆ ಎಂದು ಹೇಳಿದ್ದಾರೆ.ಈ ಹಿನ್ನೆಲೆ ಅರೋಪಿತ ವ್ಯಕ್ತಿಗೆ ಧೂಮಾವತಿ ಬುದ್ದಿಕೊಡಲಿ ಹಾಗೂ ಈ ಅರೋಪ ಹೊರಿಸಿದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುತ್ತೆವೆಂದು ಅಕ್ರೊಶ ಹೊರಹಾಕಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಶ್ರೀ ಬಾಬು ಭಂಡ್ರಿಯಾಲ್, ಗಡಿಪ್ರಧಾನರು,
ಜಗನ್ನಾಥ್ ಆತ್ತಾರ್, ಗಡಿಪ್ರಧಾನರು, ದೇವಣ್ಣ ಶೆಟ್ಟಿ ಗೌರವಾಧ್ಯಕ್ಷರು,
ಲೋಕಯ್ಯ ಶೆಟ್ಟಿ ಮುಂಚೂರು, ಉಪಾಧ್ಯಕ್ಷರು,ಸತೀಶ್ ಮುಂಚೂರು, ಉಪಾಧ್ಯಕ್ಷರು, ದೇವೇಂದ್ರ ಪೂಜಾರಿ, ಗಡಿಪ್ರಧಾನರು, ಯೋಗೀಶ್ ಕೊಂಕಣಬೈಲ್ ,ಗುತ್ತಿಗಾರ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

RELATED ARTICLES

LEAVE A REPLY

Please enter your comment!
Please enter your name here

Most Popular