Monday, March 31, 2025
Flats for sale
Homeಜಿಲ್ಲೆಸುಬ್ರಹ್ಮಣ್ಯ : ರೌಡಿ ಶೀಟರ್, ಮರಳು‌ ಮಾಫಿಯಾ, ಮರಗಳ್ಳರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ...

ಸುಬ್ರಹ್ಮಣ್ಯ : ರೌಡಿ ಶೀಟರ್, ಮರಳು‌ ಮಾಫಿಯಾ, ಮರಗಳ್ಳರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯಲ್ಲಿ ಸ್ಥಾನ,ಸುಬ್ರಹ್ಮಣ್ಯ ಗ್ರಾಮಸ್ಥರಿಂದ ಭಾರೀ ವಿರೋಧ..!

ಸುಬ್ರಹ್ಮಣ್ಯ : ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ನಂತರ ಅಲ್ಲಲ್ಲಿ ಬದಲಾವಣೆ ತಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಶ್ರೇಷ್ಠ ದೇವಾಲಯ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷಗಾದಿಗೆ ಭಾರೀ ಫೈಟ್ ನಡೆದಿದೆ. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷಸದಸ್ಯ ಗಾದಿಗೆ ಭಾರೀ ರಾಜಕೀಯ ಲಾಬಿ ನಡೆದಿದ್ದು ಸ್ಥಳೀಯ ಕಾಂಗ್ರೆಸ್ ನಾಯಕರು ರಾಜಕೀಯ ಪ್ರಭಾವ ಬಳಸಿದ್ದಾರೆ.

ಮಾಜಿ ರೌಡಿಶೀಟರ್ ಗೆ ಅಧ್ಯಕ್ಷಗಾದಿ ಹುದ್ದೆಗೆ ಸ್ವತಃ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಶಿಫಾರಸ್ಸು ಮಾಡಿದ್ದು ಕಾಂಗ್ರೆಸ್ ಮುಖಂಡ ಕಂ ಗ್ರಾ.ಪಂ. ಸದಸ್ಯ ಹರೀಶ್ ಇಂಜಾಡಿಗೆ ಗುಂಡುರಾವ್ ಶಿಫಾರಸ್ಸು ಪತ್ರ ರವಾನಿಸಿದ್ದಾರೆಂದು ಮಾಹಿತಿ ದೊರೆತಿದೆ.

ಕುಕ್ಕೆ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ/ಸದಸ್ಯ ಸ್ಥಾನ ಆಡಳಿತ ಮಂಡಳಿ ಸದಸ್ಯರಾಗಲು ಸಂಸ್ಥೆಯ ಹಿತಾಸಕ್ತಿಗೆ ವಿರುದ್ಧ ಇದ್ದವರು ಆಗಬಾರದು ಅನ್ನೋ ನಿಯಮ ಇದ್ರೂ ಶಿಫಾರಸ್ಸು ಮಾಡಿದ್ದು ಅಕ್ರೋಶ ಕ್ಕೆ ಕಾರಣವಾಗಿದೆ. ನಕಲಿ ಚೆಕ್ ನೀಡಿ ಹಣ್ಣು ಕಾಯಿ ಟೆಂಡರ್ ಮಾಡಿ ದೇವಸ್ಥಾನಕ್ಕೆ ವಂಚನೆ ಆರೋಪ ಹೊತ್ತಿದ್ದ ಹರೀಶ್ ರವರು ಈ ವಿಚಾರದಲ್ಲಿ ಪ್ರಕರಣ ಠಾಣೆ ಮೆಟ್ಟಿಲೇರಿ ಬಂಧನವಾಗಿದ್ದರು ಹರೀಶ್ ಗೆ ಸದಸ್ಯ ಸ್ಥಾನ ನೀಡಲು ಸುಬ್ರಹ್ಮಣ್ಯ ಗ್ರಾಮಸ್ಥರಿಂದಲೂ ವಿರೋಧ ವ್ಯಕ್ತವಾಗಿದ್ದು ಸ್ಥಳೀಯರು ಧಾರ್ಮಿಕದತ್ತಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿಗೂ ಪತ್ರ‌ ಬರೆದಿದ್ದಾರೆ.

ರೌಡಿಶೀಟರ್ ಆಗಿದ್ದ ಹರೀಶ್ ಇಂಜಾಡಿಯನ್ನು ಅಧ್ಯಕ್ಷನನ್ನಾಗಿ ಮಾಡಬೇಡಿ ಎಂದು ಪತ್ರ ಬರೆದಿದ್ದು ಮರಳು‌ ಮಾಫಿಯಾ ಮತ್ತು ಮರ ಕಳ್ಳ ಸಾಗಾಣೆ ಆರೋಪಿ ಎಂದು ಬಣ್ಣಿಸಿದ್ದಾರೆ.

ದಾಖಲೆ ಸಮೇತ ಪತ್ರವನ್ನು ಮುಜುರಾಯಿ ಸಚಿವ ರಾಮಲಿಂಗಾರೆಡ್ಡಿಗೆ ರವಾನಿಸಿದ್ದು ಈ ನಡುವೆ ಮತ್ತೆ ಹರೀಶ್ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬಲೆಬಿಸಿದ್ದಾರೆ. ಒಟ್ಟಿನಲ್ಲಿ ರಾಜ್ಯದಲ್ಲಿ ಆಳುವ ಕಾಂಗ್ರೆಸ್ ಸರಕಾರ ಎಲ್ಲಾ ವಿಚಾರದಲ್ಲಿ ಹಸ್ತಕ್ಷೇಪ ನಡೆಸಿ ಖದೀಮರು,ಕಳ್ಳ ರನ್ನು ನೇಮಿಸಿ ದೇವಸ್ಥಾನದ ಮಾರ್ಯಾದೆಯನ್ನು ಹರಾಜು ಹಾಕುವುದೇ ಖೇದಕರ..

RELATED ARTICLES

LEAVE A REPLY

Please enter your comment!
Please enter your name here

Most Popular