ಸಿಯೋಲ್ : ಜೆಜು ಏರ್‌ನಿಂದ ನಿರ್ವಹಿಸಲ್ಪಡುತ್ತಿದ್ದ ಬೋಯಿಂಗ್ ವಿಮಾನವು ದಕ್ಷಿಣ ಕೊರಿಯಾದ ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಪತನಗೊಂಡಿದೆ. ಅವಳಿ-ಎಂಜಿನ್ ವಿಮಾನವು ರನ್‌ವೇಯಿಂದ ಸ್ಕಿಡ್ ಆಗಿ ಗೋಡೆಗೆ ಅಪ್ಪಳಿಸಿದ ಕ್ಷಣವನ್ನು ಭಯಾನಕ ವೀಡಿಯೊ ಭಯಾನಕವಾಗಿದೆ.
ಪತನಕ್ಕೊಳಗಾದ ವಿಮಾನದಲ್ಲಿ 175 ಪ್ರಯಾಣಿಕರು, ಮತ್ತು 6 ಸಿಬ್ಬಂದಿ ಇದ್ದರು ಎಂದು ಯೋನ್ಹಾಫ್ ವರದಿ ಮಾಡಿದೆ. ಸ್ಥಳೀಯ ಮಾಧ್ಯಮಗಳ ವರದಿ ಪ್ರಕಾರ, ವಿಮಾನ ಪತನ ಮತ್ತು ರನ್‌ವೇಯಿಂದ ಕೆಳಗೆ ಇಳಿದು ಕಾಕ್‌ಪಿಟ್ ಸ್ಪೋಟಗೊಂಡಿದೆ. ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಪ್ರಯಾಣಿಕನೋರ್ವ ಹೊರಗೆ ಬರುತ್ತಿರೋದನ್ನು ಗಮನಿಸಬಹುದು. ಮುವಾನ ಕಾಲಮಾನದ ಪ್ರಕಾರ ಬೆಳಗ್ಗೆ 9.0ಕ್ಕೆ ಈ ಘಟನೆ ಸಂಭವಿಸಿದೆ.
ಕೆಲವೇ ಸೆಕೆಂಡುಗಳಲ್ಲಿ, ದೊಡ್ಡ ಕಪ್ಪು ಹೊಗೆ ಆಕಾಶಕ್ಕೆ ಏರಿತು. ಜ್ವಾಲೆಗಳು ವಿಮಾನದ ಭಾಗಗಳನ್ನು ಆವರಿಸಿರುವ ದೃಶ್ಯಗಳು ಸಹ ಕಂಡುಬಂದಿವೆ. ವಿಮಾನದಲ್ಲಿ ಆರು ಸಿಬ್ಬಂದಿ ಸೇರಿದಂತೆ 181 ಪ್ರಯಾಣಿಕರಿದ್ದರು. ಇಲ್ಲಿಯವರೆಗೆ ಇಬ್ಬರು ಪ್ರಯಾಣಿಕರು ಮತ್ತು ಒಬ್ಬ ಫ್ಲೈಟ್ ಅಟೆಂಡೆಂಟ್ ಜೀವಂತವಾಗಿ ಪತ್ತೆಯಾಗಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ವಿಮಾನ Jeju Air Flight 2216 ಪತನವಾಗಿದ್ದು, ಸುಮಾರು 179 ಪ್ರಯಾಣಿಕರು ಮೃತರಾಗಿರುವ ಬಗ್ಗೆ ವರದಿಯಾಗಿದೆ. ದಕ್ಷಿಣ ಕೊರಿಯಾದ ಮುವಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುರಂತ ಸಂಭವಿಸಿದ್ದು, ಪ್ಲೇನ್ ರನ್‌ವೇಯಿಂದ ಕೆಳಗಿಳಿದು ಸ್ಫೋಟವಾಗುವ ಭಯಾನಕ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ನೋಡುಗರನ್ನು ಬೆಚ್ಚಿ ಬೀಳಿಸುತ್ತಿದೆ. ಈ ಸ್ಪೋಟದ ಪರಿಣಾಮ 179 ಪ್ರಯಾಣಿಕರು ಮೃತರಾಗಿದ್ದಾರೆ ಎಂದು ಹೇಳಲಾಗಿದೆ. ಆದರೆ ಕೆಲ ವರದಿಗಳ ಪ್ರಕಾರ 3 ಜನ ಮಾತ್ರ ಬದುಕಿ ಉಳಿದಿದ್ದಾರೆಂದು ಮಾಹಿತಿ ದೊರೆತಿದೆ.