ಸಿಯಾಟಲ್ : ಅಮೆರಿಕದಲ್ಲಿ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದು 2023ರ ಜನವರಿಯಲ್ಲಿ ದಾರುಣ ರೀತಿಯಲ್ಲಿ ಸಾವನ್ನಪ್ಪಿದ್ದ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಜಾಹ್ನವಿ(23)ಯ ಕುಟುಂಬಕ್ಕೆ ಈಗ ಸಿಯಾಟಲ್ ಆಡಳಿತ ಬರೋಬ್ಬರಿ 262 ಕೋಟಿ ರೂ. ಪರಿಹಾರ ನೀಡುತ್ತಿದೆ. ಸೌತ್ಲೇಕ್ ಯುನಿಯನ್ ಈಶಾನ್ಯ ವಿವಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿಯಾಗಿದ್ದ ಜಾಹ್ನವಿ ಅಂದು ರಸ್ತೆ ದಾಟುತ್ತಿದ್ದಾಗ ಪೊಲೀಸರ ನಿರ್ಲಕ್ಷ್ಯ ದಿಂದ ವಾಹನ ಡಿಕ್ಕಿ ಹೊಡೆದು ಸಾವನ್ನಪ್ಪಿದ್ದಳು. ಕಳೆದ ವಾರ ಜಾಹ್ನವಿ ಕುಟುಂಬಸ್ಥರು ಹಾಗೂ ಸಿಯಾಟಲ್ ಆಡಳಿತ ಇಬ್ಬರೂ ಪ್ರಕರಣ ಇತ್ಯರ್ಥಕ್ಕೆ ಒಪ್ಪಂದ ಮಾಡಿಕೊಳ್ಳಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಸಿಯಾಟಲ್ ಆಡಳಿತವು ಆಕೆಯ ಕುಟುಂಬಸ್ಥರಿಗೆ ೨೯ ಮಿಲಿಯನ್ ಡಾಲರ್(262 ಕೋಟಿ ರೂ.) ಪರಿಹಾರ ನೀಡಲು ಒಪ್ಪಿದೆ. ಪೊಲೀಸ್ ಅಧಿಕಾರಿ ಕೆವಿನ್ ಡೇನ್ ಅವರು ಮಿತಿಮೀರಿದ ಮಾದಕದ್ರವ್ಯ ಸೇವಿಸಿದವರನ್ನು ಸೆರೆಹಿಡಿಯಲು ತಾವೇ ವಾಹನ ಚಲಾಯಿಸುತ್ತಿದ್ದರು. ಅಪಘಾತದ ರಸ್ತೆಯಲ್ಲಿ ಸಾಮಾನ್ಯವಾಗಿ 40 ಕಿ.ಮೀ ವೇಗದಲ್ಲಿ ವಾಹನ ಓಡಿಸ ಬೇಕಾಗಿತ್ತು. ಆದರೆ 119ಕಿ.ಮಿ ವೇಗದಲ್ಲಿ ವಾಹನ ಚಲಾಯಿಸಿ ಜಾಹ್ನವಿ ಸಾವಿಗೆ ಕಾರಣರಾದರು. ಆರಂಭದಲ್ಲಿ ಜಾಹ್ನವಿ ಸಾವನ್ನು ಪೊಲೀಸರು ಬಹಳ ಹಗುರವಾಗಿ ಪರಿಗಣಿಸಿದ್ದರು


