Monday, February 3, 2025
Flats for sale
Homeಕ್ರೀಡೆಸಿಡ್ನಿ : ಚಾಂಪಿಯನ್ಸ್ ಟ್ರೋಫಿ 2025 ರ ಟೂರ್ನಿಗೆ ಆಸ್ಟ್ರೇಲಿಯಾ ತಂಡ ಪ್ರಕಟ ..!

ಸಿಡ್ನಿ : ಚಾಂಪಿಯನ್ಸ್ ಟ್ರೋಫಿ 2025 ರ ಟೂರ್ನಿಗೆ ಆಸ್ಟ್ರೇಲಿಯಾ ತಂಡ ಪ್ರಕಟ ..!

ಸಿಡ್ನಿ : ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ೨೦೨೫ರ ಟೂರ್ನಿಗೆ ೧೫ ಸದಸ್ಯರ ತಾಲ್ಕಾಲಿಕ ಆಸ್ಟ್ರೇಲಿಯಾ ತಂಡವನ್ನು ಆಸ್ಟೆçÃಲಿಯಾ ಕ್ರಿಕೆಟ್ ಮಂಡಳಿ ಪ್ರಕಟಿಸಿದೆ.

ಪ್ರಕಟಿತ ತಂಡದಲ್ಲಿ ಮ್ಯಾಟ್ ಶಾರ್ಟ್ ಮತ್ತು ಆರನ್ ಹಾರ್ಡಿ ಹೊಸ ಮುಖಗಳಾಗಿದ್ದು, ಈ ಇಬ್ಬರು ಯುವ ಆಟಗಾರರು ತಮ್ಮಲ್ಲಿನ ಪ್ರತಿಭೆ ಪ್ರದರ್ಶಿಸಲು ಉತ್ತಮ ಅವಕಾಶವನ್ನು ಪಡೆದುಕೊಂಡಿದ್ದಾರೆ.

ಇನ್ನೊಂದೆಡೆ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದ ಸ್ಪೋಟಕ ಬ್ಯಾಟರ್ ಜೇಕ್ ಫ್ರೇಸರ್‌ಮೆಕ್‌ಗುರ್ಕ್ ಸ್ಥಾನದಿಂದ ವಂಚಿತರಾಗಿದ್ದಾರೆ.ಆಸ್ಟ್ರೇಲಿಯಾ ತಂಡದ ನಾಯಕತ್ವವನ್ನು ಪ್ಯಾಟ್ ಕಮಿನ್ಸ್ಗೆ ವಹಿಸಲಿದ್ದು, ಅನುಭವಿ ಬ್ಯಾಟ್ಸ್ಮನ್ ಸ್ಟೀವ್ ಸ್ಮಿತ್ ಅವರನ್ನು ಉಪನಾಯಕರನ್ನಾಗಿ ಮಾಡಲಾಗಿದೆ.

ಮ್ಯಾಟ್ ಶಾರ್ಟ್ ಮತ್ತು ಆರನ್ ಹಾರ್ಡಿ ಜೊತೆಗೆ ವೇಗದ ಬೌಲರ್ ನಾಥನ್ ಎಲ್ಲಿಸ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಈ ಮೂವರು ಏಕದಿನ ವಿಶ್ವಕಪ್ ೨೦೨೩ ಗೆದ್ದ ತಂಡದಲ್ಲಿದ್ದ ಡೇವಿಡ್ ವಾರ್ನರ್,ಕ್ಯಾಮೆರಾನ್ ಗ್ರೀನ್ ಮತ್ತು ಸೀನ್ ಅಬಾಟ್ ಅವರ ಬದಲಿಗೆ ತಂಡದಲ್ಲಿ ಸ್ಥಾನ ಗಳಿಸಿದ್ದಾರೆ.

ಚಾಂಪಿಯನ್ ಟ್ರೋಫಿ ೨೦೨೫ಕ್ಕಾಗಿ ಪ್ರಕಟಿಸಲಾಗಿರುವ ಆಸ್ಟ್ರೇಲಿಯಾ ತಂಡ ಇಂತಿದೆ. ಪ್ಯಾಟ್ ಕಮ್ಮಿನ್ಸ್ (ನಾಯಕ), ಅಲೆಕ್ಸ್ ಕ್ಯಾರಿ (ವಿಕೆಟ್‌ಕೀಪರ್), ನಾಥನ್ ಎಲ್ಲಿಸ್, ಆರನ್ ಹಾರ್ಡಿ, ಜೋಶ್ ಹ್ಯಾಜಲ್‌ವುಡ್, ಟ್ರಾವಿಸ್ ಹೆಡ್,ಜೋಶ್ ಇಂಗ್ಲಿಸ್ (ವಿಕೆಟ್‌ಕೀಪರ್), ಮಾರ್ನಸ್ ಲ್ಯಾಬುಸ್‌ಚಾಗ್ನೆ, ಮಿಚೆಲ್ ಮಾರ್ಷ್, ಗ್ಲೆನ್ ಮ್ಯಾಕ್ಸ್ವೆಲ್, ಮ್ಯಾಟ್ ಶಾರ್ಟ್, ಮಿಚೆಲ್ ಸ್ಟಾರ್ಕ್,ಸ್ಟೀವ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್ , ಆಡಮ್ ಜಂಪಾ.

ಆಸ್ಟ್ರೇಲಿಯಾ ಪಂದ್ಯಗಳ ವೇಳಾಪಟ್ಟಿ.

ದಿನಾಂಕ- ವಿರುದ್ಧ -ಸ್ಥಳ
ಫೆ ೨೨ -ಇಂಗ್ಲೆAಡ್ – ಲಾಹೋರ್
ಫೆ ೨೫ – ದ.ಆಫ್ರಿಕಾ – ರಾವಲ್ಪಿಂಡಿ
ಫೆ ೨೮ – ಅಫ್ಘಾನಿಸ್ತಾನ – ಲಾಹೋರ್

RELATED ARTICLES

LEAVE A REPLY

Please enter your comment!
Please enter your name here

Most Popular