ಸಿಡ್ನಿ: ಆಸ್ಟ್ರೇಲಿಯಾದ ಅನುಭವಿ ಆರಂಭಿಕ ಆಟಗಾರ ಡೇವಿಡ್ ವಾರ್ನರ್, ಸೋಮವಾರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಆಡಲಿರುವ ವಿದಾಯದ ಟೆಸ್ಟ್ ಪಂದ್ಯಕ್ಕೆ ಕೆಲವೇ ದಿನಗಳ ಮುಂಚಿತವಾಗಿ, ಬಳಿ ಚೆಂಡಿನ ಕ್ರಿಕೆಟ್‌ಗೆ ವಿದಾಯ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಆಸ್ಟ್ರೇಲಿಯಾದ ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್ ಹೊಸ ವರ್ಷದ ಮೊದಲ ದಿನವೇ ದೊಡ್ಡ ಘೋಷಣೆ ಮಾಡಿದರು. ಸೋಮವಾರ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಇದೀಗ ಏಕದಿನ ಕ್ರಿಕೆಟ್‌ನಿಂದಲೂ ನಿವೃತ್ತಿಯಾಗುತ್ತಿರುವುದಾಗಿ ಪ್ರಕಟಿಸಿದ್ದಾರೆ.
ಪಾಕಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿ ತನ್ನ ವೃತ್ತಿಜೀವನದ ಕೊನೆಯ ಟೆಸ್ಟ್ ಸರಣಿ ಎಂದು ವಾರ್ನರ್ ಬಹಳ ಹಿಂದೆಯೇ ಘೋಷಿಸಿದ್ದರು. ಈ ಟೆಸ್ಟ್ ಸರಣಿಯ ಕೊನೆಯ ಪಂದ್ಯದಲ್ಲಿ ಅವರಿಗೆ ವಿಶೇಷ ವಿದಾಯ ನೀಡಲು ಕ್ರಿಕೆಟ್ಆ ಆಸ್ಟ್ರೇಲಿಯಾ ಕೂಡ ಸಿದ್ಧತೆ ನಡೆಸಿದೆ.
೨೦೦೯ ರಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ ಎಡಗೈ ಬ್ಯಾಟ್ಸಮನ್ ಡೇವಿಡ್ ವಾರ್ನರ್, ತಮ್ಮ ಆಕ್ರಮಣಕಾರಿ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಪ್ರೇಮಿಗಳ ಮನ ಗೆದ್ದಿದ್ದಾರೆ. ವಾರ್ನರ್ ಒಟ್ಟು ೧೬೧ ಏಕದಿನ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದು, ಅವರು ಆಸ್ಟ್ರೇಲಿಯಾ ಪರ ಗರಿಷ್ಠ ಏಕದಿನ ಕ್ರಿಕೆಟ್ ಪಂದ್ಯಗಳನ್ನ ಆಡಿದ ಆಟಗಾರರ ಪಟ್ಟಿಯಲ್ಲಿ ೧೮ ನೇ ಸ್ಥಾನದಲ್ಲಿದ್ದಾರೆ. ೩೭೪ ಏಕದಿನ ಪಂದ್ಯಗಳನ್ನು ಆಡಿದ ರಿಕಿ ಪಾಂಟಿAಗ್
ಅಗ್ರಸ್ಥಾನದಲ್ಲಿದ್ದಾರೆ.
ಆಡಿದ ೧೬೧ ಏಕದಿನ ಪಂದ್ಯಗಳಲ್ಲಿ ಸರಾಸರಿ ೪೫.೩೦ ರಂತೆ ಒಟ್ಟು ೬೯೩೨ ರನ್ ಗಳಿಸಿದ್ದು, ಇವುಗಳಲ್ಲಿ ೨೨ ಶತಕ ಹಾಗೂ ೩೩ ಅರ್ಧ ಶತಕಗಳು ಸೇರಿವೆ. ಏಕದಿನ ಕ್ರಿಕೆಟ್‌ನಲ್ಲಿ ಆಸ್ಟೆçÃಲಿಯಾ ಪರ ಆರನೇ ಗರಿಷ್ಠ ರನ್ ಗಳಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಡೇವಿಡ್ ವಾರ್ನರ್, ೨೨ ಶತಕಗಳನ್ನು ಸಿಡಿಸಿದ್ದಾರೆ. ಇದು ಆಸ್ಟೆçÃಲಿಯಾ ಪರ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ಶತಕ ಸಿಡಿಸಿದ ಎರಡನೇ ಬ್ಯಾಟ್ಸಮನ್ ಎನಿಸಿದ್ದಾರೆ. ೨೯ ಶತಕ ಸಿಡಿಸಿದ ಪಾಂಟಿAಗ್ ಅಗ್ರಸ್ಥಾನದಲ್ಲಿದ್ದಾರೆ.ವಾರ್ನರ್ ಸಾರ್ವಕಾಲಿಕ ಜಂಟಿ ಎಂಟನೇ ಅತಿ ಹೆಚ್ಚು ಏಕದಿನ ಶತಕಗಳನ್ನು ಹೊಂದಿದ್ದಾರೆ, ಭಾರತದ ವಿರಾಟ್ ಕೊಹ್ಲಿ (೫೦ ಶತಕ) ಅಗ್ರಸ್ಥಾನದಲ್ಲಿದ್ದಾರೆ