Wednesday, March 11, 2026
Flats for sale
Homeರಾಜ್ಯಶಿವಮೊಗ್ಗ ; 3 ದಿನದ ನವಜಾತ ಶಿಶುವನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋದ ದುರುಳರು.

ಶಿವಮೊಗ್ಗ ; 3 ದಿನದ ನವಜಾತ ಶಿಶುವನ್ನು ರಸ್ತೆ ಬದಿಯಲ್ಲಿ ಬಿಟ್ಟು ಹೋದ ದುರುಳರು.

ಶಿವಮೊಗ್ಗ ; ರಸ್ತೆಯಲ್ಲಿ ಮಗು ಅಳುತ್ತಿದ್ದ ಶಬ್ಧ ಕೇಳಿದವರಿಗೆ ಶಾಕ್ ಹಾಗಿದ್ಸು ದುರುಳರು ರಸ್ತೆ ಪಕ್ಕ 2-3 ದಿನದ ನವಜಾತ ಶಿಶುಬಿಟ್ಟು ಹೋದ ಘಟನೆ ನಡೆದಿದೆ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲ್ಲೂಕಿನ ಹೊಳೆಹೊನ್ನೂರು ಗ್ರಾಮ ಸಮೀಪದ ಮಲ್ಲಾಪುರದ ಗ್ರಾಮದ ಬಳಿ ಸೋಮವಾರ ರಾತ್ರಿ 10.45ರ ಸುಮಾರಿಗೆ ನವಜಾತ ಗಂಡು ಶಿಶು ಪತ್ತೆಯಾಗಿದೆ.

ಸಾಸ್ವೆಹಳ್ಳಿ ಗ್ರಾಮದ ಕುಶ ಎಂಬುವವರಿಗೆ ನವಜಾತ ಶಿಶು ಸಿಕ್ಕಿದ್ದು ತಮ್ಮ ದೊಡ್ಡಪ್ಪನ ಮಗ ತಿಪ್ಪೇಶ ಅವರಿಗೆ ಅನಾರೋಗ್ಯಕ್ಕೆ ಚಿಕಿತ್ಸೆ ಕೊಡಿಸಿ ವಾಪಾಸ್ಸಾಗುವ ವೇಳೆ ಮಗು ಸಿಕ್ಕಿದೆ.

ಕುಶ ರವರು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹಿಂದಿರುವಾಗ ಘಟನೆ ನಡೆದಿದ್ದು ಮಲ್ಲಾಪುರ ಗ್ರಾಮದ ಬಳಿ ಮಗು ಅಳುವ ಶಬ್ದ ಕೇಳಿಸಿದೆ. ಬಳಿಕ ತಮ್ಮ ಅತ್ತಿಗೆ ಸಹಾಯದೊಂದಿಗೆ ಸ್ಥಳಕ್ಕೆ ಹೋಗಿ ನೋಡಿದಾಗ 2–3 ದಿನದ ಗಂಡು ಮಗು ಪತ್ತೆಯಾಗಿದೆ. ಸುತ್ತಮುತ್ತಲಿನ ಮನೆಗಳಲ್ಲಿ ವಿಚಾರಿಸಿದಾಗ ಆ ಮಗುವು ಯಾರಿಗೂ ಸಂಬಂಧಪಟ್ಟಿಲ್ಲ ಎಂಬುದನ್ನು ದೃಢಪಡಿಸಿದ್ದು, ಹೊಳೆಹೊನ್ನೂರು ಪಟ್ಟಣದ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular