ಶಿವಮೊಗ್ಗ : ಹಾವೇರಿ ಜಿಲ್ಲೆಯ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದ ಘೋರ ರಸ್ತೆ ಅಪಘಾತದಲ್ಲಿ ೧೩ ಮಂದಿ ಸಾವನಪ್ಪಿದ ಘಟನೆ ವರದಿಯಾಗಿದೆ. ಬೆಂಗಳೂರು ಮೂಲದವರಿಂದ ಟಿಟಿ ವಾಹನ ಖರೀದಿ ಮಾಡಿ ಕಳೆದ ಮೂರು ದಿನಗಳ ಹಿಂದೆ ಕುಟುಂಬಸ್ಥರೆಲ್ಲ ಸೇರಿ ಮನೆದೇವರ ಪೂಜೆಗೆ ಹೋಗಿದ್ದರು. ಅದರಲ್ಲೂ ಕಳೆದ ಒಂದು ತಿಂಗಳ ಹಿಂದೆ ಮೃತ ಚಾಲಕ ಆದರ್ಶ್ ಸಂಬಂಧಿಕರ ಹೆಸರಿನಲ್ಲಿ ಹೊಸದಾಗಿ ಟಿಟಿಯನ್ನು ಖರೀದಿಸಿದ್ದರು. ಇಂದು ಬೆಳಗ್ಗೆ 4 ಗಂಟೆ ಸುಮಾರಿಗೆ ನಡೆದ ಅಪಘಾತದಲ್ಲಿ 13 ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಟಿಟಿ ಮಾಲೀಕ ನಾಗೇಶ ರಾವ್ ಕುಟುಂಬದಲ್ಲಿ ಒಟ್ಟು ನಾಲ್ಕು ಜನ ಸೇರಿದಂತೆ ಅವರ ಮನೆಯ ಇತರೆ ಸಂಬಂಧಿಕರು ಸಾವನ್ನಪ್ಪಿದ್ದಾರೆ.
ಸುಭದ್ರಬಾಯಿ (65), ಮಾನಸ (29), ಮಂಜುಳಾ (50), ಆದರ್ಶ್ (21), ಆರ್ಯ (4), ವಿಶಾಲಾಕ್ಷಿ (50), ರೂಪಾ ಬಾಯಿ (35), ನಂದನ (3), ಅಂಜಲಿ (30), ನಾಗೇಶ ರಾವ್ (51), ಅರುಣಕುಮಾರ (27), ಮಂಜುಳಾ ಬಾಯಿ (55), ಭ್ಮಾಗ್ಯಾ ಬಾಯಿ (45) ಮೃತ ದುರ್ದೈವಿಗಳು ಎಮದು ಗುರುತಿಸಲಾಗಿದೆ. ಮೃತ ದುರ್ದೈವಿಗಳು ಮೂಲತಃ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಎಮ್ಮಿಹಟ್ಟಿ ಗ್ರಾಮದವರು.ವಾಹನದಲ್ಲಿದ್ದವರು ಒಂದೇ ಕುಟುಂಬದವರು ಮತ್ತು ಅವರ ಸಂಬಂಧಿಕರು. ದೇವರ ದರ್ಶನಕ್ಕಾಗಿ ಹೋಗಿ ಬರುವಾಗ ಗುಂಡೇನಹಳ್ಳಿ ಕ್ರಾಸ್ ಬಳಿ ಅಪಘಾರ ಸಂಭವಿಸಿರುವ ಸುದ್ದಿಯನ್ನು ಬೆಳಗ್ಗೆ ಟಿವಿಯಲ್ಲಿ ನೋಡಿದೆವು, ಬಹಳ ದೊಡ್ಡ ದುರಂತವಿದು ಎಂದು ಹೇಳುತ್ತಾರೆ.