ಶಿವಮೊಗ್ಗ : ಶಿವಮೊಗ್ಗ ಜೈಲಿನಿಂದ ಚಿನ್ನಯ್ಯ ಬಿಡುಗಡೆಯಾಗಿದ್ದಾನೆ ಚಿನ್ನಯ್ಯ ನನ್ನು ಕರೆದುಕೊಂಡು ಹೋಗಲು ಚಿನ್ನಯ್ಯ ಪತ್ನಿ ಮಲ್ಲಿಕಾ, ಸಹೋದರಿ ರತ್ನಾ ಹಾಗೂ ವಕೀಲರು ಬಂದಿದ್ದರು . ನಿನ್ನೆ ಜಾಮೀನಿನ ಅನ್ವಯ 1 ಲಕ್ಷ ರೂ. ಷರತ್ತು ಪೂರೈಸಿ ದಾಖಲೆ ನೀಡಿ ಚಿನ್ನಯ್ಯ ಕಡೆಯವರು ಕರೆದುಕೊಂಡು ಹೋಗಿದ್ದಾರೆ.

ಬೇಲ್ ಸಿಕ್ಕರೂ ಜೈಲಿನಿಂದ ಹೊರಬರಲಾರದೆ ಪರಿತಪಿಸುತ್ತಿದ್ದ ಚಿನ್ನಯ್ಯ ನಿನ್ನೆ ಸಂಜೆ 1 ಲಕ್ಷ ರೂ. ಷರತ್ತು ಬದ್ಧ ಜಾಮೀನು ಪ್ರಕ್ರಿಯೆ ಪೂರೈಸಿದ ಬಳಿಕ ಬಿಡುಗಡೆಯಾಗಿದ್ದಾನೆ. ನ್ಯಾಯಾಲಯಕ್ಕೆ ಷರತ್ತುಬದ್ಧ ಜಾಮೀನು ಸಲ್ಲಿಸದ ಹಿನ್ನೆಲೆಯಲ್ಲಿ ಕಳೆದ ಮೂರ್ನಾಲ್ಕು ವಾರಗಳಿಂದ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲೇ ಬುರುಡೆ ಚಿನ್ನಯ್ಯ ಉಳಿದಿದ್ದನು. ಈಗಾಗಲೇ ಬೇಲ್ ಸಿಕ್ಕಿ ಮೂರ್ನಾಲ್ಕು ವಾರ ಕಳೆದರೂ ಬಿಡುಗಡೆ ಭಾಗ್ಯ ಸಿಗಲಿರಲಿಲ್ಲ.
ಧರ್ಮಸ್ಥಳ ಕ್ಷೇತ್ರಕ್ಕೆ ಅಪಪ್ರಚಾರ ವಿಚಾರಕ್ಕೆ ಸಂಬಂಧಿಸಿದಂತೆ ಚಿನ್ನಯ್ಯ ವಿಚಾರಣೆ ಹಿನ್ನೆಲೆಯಲ್ಲಿ ಶಿವಮೊಗ್ಗ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿತ್ತು
ಬೆಳ್ತಂಗಡಿಯಿಂದ ಶಿವಮೊಗ್ಗ ಜೈಲಿಗೆ ಆರೋಪಿ ಚಿನ್ನಯ್ಯನನ್ನ ಶಿಫ್ಟ್ ಮಾಡಲಾಗಿತ್ತು ಬೆಳ್ತಂಗಡಿ JMFC ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಭದ್ರತೆ ದೃಷ್ಟಿಯಿಂದ ಶಿವಮೊಗ್ಗಕ್ಕೆ ರವಾನೆ ಮಾಡಲಾಗಿತ್ತು.ಕೊನೆಗೂ ಇದೀಗ ಬಿಡುಗಡೆಯ ಭಾಗ್ಯ ದೊರೆತಿದೆ.


