ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನಲ್ಲಿರುವ ಶರವತಿ ಹಿನ್ನಿರಿನಲ್ಲಿ ನಿರ್ಮಾಣವಾದ ಸೇತುವೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಯವರು ಇಂದು ಉದ್ಘಾಟಿಸಿದರು.





ಕೇಂದ್ರ ಸಚಿವ ನಿತಿನ್ ಗಡ್ಕರಿ ಯಿಂದ ಲೋಕಾರ್ಪಣೆ ನಂತರ ಸಾಗರದ ನೆಹರು ಮೈದಾನದಲ್ಲಿ ವೇದಿಕೆಯಲ್ಲಿ ಕಾರ್ಯಕ್ರಮ ನಡೆಯಿತು ಈ ವೇಳೆ ವೇದಿಕೆಯಲ್ಲಿ 20 ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ. ಸೇತುವೆ ಲೋಕಾರ್ಪಣೆ ನಂತರ ವೇದಿಕೆಯ ಮೇಲೆ 2056 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ್ದಾರೆ.
ರಾಜ್ಯ ಹಾಗೂ ಕೇಂದ್ರ ನಾಯಕರ ವೇದಿಕೆ ಮೇಲೆ ಆಸನದ ವ್ಯವಸ್ಥೆಮಾಡಲಾಗಿದ್ದು ಸಾರ್ವಜನಿಕರಿಗೆ ಎರಡು ಸಾವಿರಕ್ಕೂ ಹೆಚ್ಚು ಅಸನದ ವ್ಯವಸ್ಥೆ ಮಾಡಲಾಗಿತ್ತು,ಜಿಲ್ಲೆಯ ಸಾಗರ ತಾಲೂಕಿನ ಶರಾವತಿ ಹಿನ್ನೀರಿನಲ್ಲಿ ಅಂಬಾರಗೋಡ್ಲು-ಕಳಸವಳ್ಳಿ ನಡುವೆ ನಿರ್ಮಾಣ ಮಾಡಲಾಗಿರುವ ಸೇತುವೆಯನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಸೋಮವಾರ ಲೋಕಾರ್ಪಣೆಗೊಳಿಸಿದರು. ಬಳಿಕ, ಉದ್ಘಾಟನೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಚಿವ ನಿತಿನ್ ಗಡ್ಕರಿ, ಸೇತುವೆಗೆ ಸಿಗಂದೂರು ಚೌಡೇಶ್ವರಿ ದೇವಿ ಸೇತುವೆ ಎಂದು ನಾಮಕರಣ ಮಾಡಲಾಗಿದೆ ಎಂದು ಘೋಷಿಸಿದರು.
ದೇಶದ ಎರಡನೇ ಅತಿ ಉದ್ದ ಕೇಬಲ್ ಸೇತುವೆ ಎನಿಸಿಕೊಂಡಿರುವ ಸಿಗಂದೂರು ಸೇತುವೆಯನ್ನು ಉದ್ಘಾಟಿಸಿ ಮಾತಾಡಿದ ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅದಕ್ಕೆ ಸಿಗಂದೂರು ಶ್ರೀ ಚೌಡೇಶ್ವರಿ ಸೇತುವೆ ಅಂತ ನಾಮಕರಣವನ್ನೂ ಮಾಡಿದರು. ಈ ಐತಿಹಾಸಿಕ ಸೇತುವೆಯ ಭೂಮಿ ಪೂಜೆ ಮತ್ತು ಉದ್ಘಾಟನೆ ಎರಡೂ ತನ್ನಿಂದಲೇ ನೆರವೇರಿದ್ದು ಸೌಭಾಗ್ಯವೆಂದು ಭಾವಿಸುತ್ತೇನೆ, ಸೇತುವೆ ನಿರ್ಮಾಣಕ್ಕೆ ಹಲವಾರು ಆಡಚಣೆಗಳಿದ್ದವು, ಸರ್ಕಾರಕ್ಕೆ ಸಮಸ್ಯೆಗಳು ಎದುರಾಗಿದ್ದವು, ಆದರೆ ತಾಯಿ ಸಿಗಂದೂರು ಚೌಡೇಶ್ವರಿ ತಾಯಿಯ ಕೃಪೆಯಿಂದ ಎಲ್ಲವೂ ನೀಗಿ ಇವತ್ತು ಅದರ ಲೋಕಾರ್ಪಣೆಯಾಗುತ್ತಿದೆ, ಈ ಭಾಗದ ಜನತೆಗೆ ಅಭಿನಂದನೆ ಸಲ್ಲಿಸುವುದಾಗಿ ಗಡ್ಕರಿ ಹೇಳಿದರು.
473 ಕೋಟಿ ರೂ ವೆಚ್ಚದಲ್ಲಿ ಸಿಗಂದೂರು ಸೇತುವೆ ನಿರ್ಮಾಣಗೊಂಡಿದ್ದು ಕಳಸವಳ್ಳಿ- ಅಂಬಾರಗೊಡ್ಲು ನಡುವೆ ನಿರ್ಮಾಣವಾಗಿರುವ ಬೃಹತ್ ಸೇತುವೆಯಾಗಿದೆ. ದೇಶದ 2ನೇ ಅತೀ ಉದ್ದದ ಕೇಬಲ್ ಸ್ಟ್ರೇ ಬ್ರಿಡ್ಜ್ ಇದಾಗಿದ್ದು 2.125 ಕಿ.ಮೀ ಉದ್ದ ಹಾಗೂ 16 ಮೀ ಅಗಲದ ಬೃಹತ್ ಸೇತುವೆಯಾಗಿದೆ. ಕೇಂದ್ರ ಸಚಿವ ನಿತೀನ್ ಗಡ್ಕರಿಗೆ ಸಾಥ್ ನೀಡಿದ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಯಡಿಯೂರಪ್ಪ, ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ,ಸಂಸದ ರಾಘವೇಂದ್ರ, ಬಿಜೆಪಿ ರಾಜಾಧ್ಯಕ್ಷ ಬಿವೈ ವಿಜಯೇಂದ್ರ ಸೇರಿದಂತೆ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.