Friday, March 13, 2026
Flats for sale
Homeರಾಜ್ಯಶಿವಮೊಗ್ಗ ; ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳನ್ನು ಬಾಕಿ ಉಳಿಸಿಕೊಂಡ ಪೊಲೀಸರಿಗೆ ಶಿಕ್ಷೆ ಕೊಟ್ಟ ಶಿವಮೊಗ್ಗ...

ಶಿವಮೊಗ್ಗ ; ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳನ್ನು ಬಾಕಿ ಉಳಿಸಿಕೊಂಡ ಪೊಲೀಸರಿಗೆ ಶಿಕ್ಷೆ ಕೊಟ್ಟ ಶಿವಮೊಗ್ಗ SP.

ಶಿವಮೊಗ್ಗ ; ಪೊಲೀಸ್ ಇಲಾಖೆಯಲ್ಲೂ ಗೊರಕೆ ಹೊಡೆಯುತ್ತ ಕೆಲಸ ಮಾಡುವ ಜನ ತುಂಬಾನೇ ಇದ್ದಾರೆ,ಇದೆಲ್ಲಾ ಎಲ್ಲಾ ಸರಕಾರಿ ಇಲಾಖೆಯಲ್ಲಿ ಇದ್ದದೇ ಬಿಡಿ ,ಇದರ ಕಷ್ಟ ದಿನವಿಡೀ ಹಳೆದು ಸಾಕಾಗಿರುವ ಜನಸಾಮನ್ಯರಿಗೆ ಗೊತ್ತು ಈ ಸರಕಾರಿ ಅಧಿಕಾರಿಗಳ ಕೆಲಸ ಕಾರ್ಯ. ಇಲ್ಲಿ ಮತ್ತೊಂದು ಸುದ್ದಿ ವರದಿಯಾಗಿದ್ದು ಕಡತವನ್ನು ಬಾಕಿ ಉಳಿಸಿಕೊಂಡಿರುವ ಪೊಲೀಸ್ ಅಧಿಕಾರಿಗಳಿಗೆ ಶಿಕ್ಷೆ ನೀಡುವ ಮೂಲಕ ಶಿವಮೊಗ್ಗ ಜಿಲ್ಲಾ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ರಾಜ್ಯಾದ್ಯಂತ ಹೈಲೈಟ್ ಹಾಗಿದ್ದರೆ.

ಶಿವಮೊಗ್ಗ ಜಿಲ್ಲೆಯಎಸ್ಪಿ ಜಿ.ಕೆ.ಮಿಥುನ್ ಕುಮಾರ್ ರವರು ವಿವಿಧ ಪ್ರಕರಣಗಳಿಗೆ ಸಂಬಂಧಿಸಿದ ಕಡತಗಳನ್ನು ಬಾಕಿ ಉಳಿಸಿಕೊಂಡಿರೋದಕ್ಕೆ ಪೊಲೀಸ್ ಅಧಿಕಾರಿಗಳಿಗೆ ಓಟದ ಶಿಕ್ಷೆ ನೀಡಿದ್ದಾರೆ. ಕೋಟೆ, ಜಯನಗರ, ಸೆನ್ ಮತ್ತು ಕುಂಸಿ ಠಾಣೆಯ ಪೊಲೀಸರಿಗೆ ನಗರದ ಡಿಎಆರ್ ಮೈದಾನದಲ್ಲಿ ಸಮವಸ್ತ್ರದಲ್ಲೇ ಪೊಲೀಸರನ್ನು ಓಡಿಸಿ ಶಿಕ್ಷೆ ನೀಡಿದ್ದಾರೆ.

ನಗರದ ಡಿಎಆರ್ ಮೈದಾನದಲ್ಲಿ 10 ರೌಂಡ್ ಓಡುವಂತೆ ಎಸ್​ಪಿ ತಾಕೀತು ಮಾಡಿದ್ದುಆರು ಮಂದಿ ಪುರುಷ ಹಾಗೂ ಐವರು ಮಹಿಳಾ ಪೊಲೀಸರು ಸೇರಿ 50 ವರ್ಷ ದಾಟಿದ ಪೊಲೀಸರಿಗೂ ಶಿಕ್ಷೆ ನೀಡಿದ್ದಾರೆ.ಕೇವಲ ಮೂರೇ ರೌಂಡ್​ಗೆ ಓಡಿ ಸುಸ್ತಾದ ಅಧಿಕಾರಿಗಳು ಡೊಳ್ಳೊಟ್ಟೆ ಹಿಡಿದು ಓಡಲಾಗದೆ ನಡೆಯಲು ಆರಂಭಿಸಿದ್ದಾರೆ.

ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ಪೊಲೀಸರು ಬಾಕಿ ಇರುವ ಕಡತಗಳು 2014ರ ನಂತರದ್ದು,10 ವರ್ಷಗಳ ಹಿಂದಿನ ಕಡತ ಬಾಕಿ ಉಳಿಯಲು ನಾವು ಕಾರಣರಲ್ಲ.ಹಿಂದಿನವರು ಮಾಡಿದ ತಪ್ಪಿಗೆ ನಮಗೆ ಶಿಕ್ಷೆ ವಿಧಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಕೆಲವು ಪೊಲೀಸರು ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular