ಶಿವಮೊಗ್ಗ : ಭದ್ರಾವತಿ ತಾಲೂಕಿನ ಕೆ.ಹೆಚ್. ನಗರದ ನಿವಾಸಿ ದೇವೇಂದ್ರ ಎಂಬ ವ್ಯಕ್ತಿಯ ಮೇಲೆ ತಾಲೂಕಿನ ಬಿಸಿಲುಮನೆ ಗ್ರಾಮದ ಬಳಿ ಕರಡಿ ದಾಳಿ ಮಾಡಿ ವ್ಯಕ್ತಿಯ ಮೈಯೆಲ್ಲಾ ಗಂಭೀರ ಗಾಯಗಳಾದ ಘಟನೆ ನಡೆದಿದೆ.
ದಾರಿಯಲ್ಲಿ ನಡೆದುಕೊಂಡು ಹೋಗುವ ವೇಳೆ ಕರಡಿ ದಾಳಿ ನಡೆಸಿದ್ದು ವ್ಯಕ್ತಿಯ ತಲೆ ಹಾಗೂ ಮುಖಭಾಗಕ್ಕೆ ಗಂಭೀರ ಗಾಯಗೊಂಡಿದ್ದು ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಗಾಯಾಳು ದಾಖಲಿಸಲಾಗಿದೆ.