ಶಿವಮೊಗ್ಗ : ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ವಾಹನ ಸವಾರನಿಗೆ ಬಾರಿ ಮೊತ್ತದ ದಂಡ ವಿಧಿಸಿದ ಘಟನೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪೊಲೀಸ್ ಸಂಚಾರಿ ಠಾಣೆಯಲ್ಲಿ ನಡೆದಿದೆ.
ಇತ್ತೀಚಿನ ದಿನಗಳಲ್ಲಿ ಮದ್ಯ ಸೇವಿಸಿ ವಾಹನಸವರಾರು ಸವಾರಿ ಮಾಡುತ್ತಿರುವುದು ಅತಿಹೆಚ್ಚಾಗಿದ್ದು ಅನೇಕ ಅಪಘಾತಗಳು ಸಂಭವಿಸಿದ್ದ ಘಟನೆಗಳು ಕಂಡುಬಂದಿದೆ.ಇದರಿಂದ ಹೆಚ್ಚೆತ್ತ ಪೊಲೀಸ್ ಇಲಾಖೆ ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ವಿರುದ್ಧ ಬಾರಿ ದಂಡ ವಿಧಿಸಲು ತಯಾರಿನಡೆಸಿದೆ.
ಭದ್ರಾವತಿ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಗುವ ವೇಳೆ ವಾಹನ ನಿಲ್ಲಿಸಿ ಪರಿಶೀಲನೆ ನಡೆಸುತ್ತಿರುವ ಸಂದರ್ಭದಲ್ಲಿ ಚಾಲಕ ಮದ್ಯಪಾನ ಮಾಡಿರುವುದು ಸಾಬೀತಾಗಿದೆ.ಈ ಹಿನ್ನೆಲೆ ಭದ್ರಾವತಿ ಸಂಚಾರಿ ಠಾಣೆ ಇನ್ಸ್ ಪೆಕ್ಟರ್ ರವರು ಸ್ಥಳದಲ್ಲೇ 10 ಸಾವಿರ ರೂ. ದಂಡ ವಿಧಿಸಿದ್ದಾರೆ. ಈ ದಂಡದ ಮೊತ್ತ ನೋಡಿ ವಾಹನ ಸವಾರನಿಗೆ ದಿಗಿಲು ಬಡಿದಿದ್ದು ಯಾವುದೇ ಪ್ರಭಾವ ಬಳಸಿದರು ಉಪಯೋಗವಾಗದ ಹಿನ್ನೆಲೆ ಕೆಲಹೊತ್ತು ನಿಂತ ಬಳಿಕ ದಂಡ ಕಟ್ಟಿ ತೆರಳಿದ್ದಾನೆಂದು ಮಾಹಿತಿ ದೊರೆತಿದೆ.