ಶಿವಮೊಗ್ಗ : ತಮ್ಮ ಜಮೀನಿನಲ್ಲಿ ಮುಂಜಾನೆ ಮೋಟರ್ ಹಾಕಲು ಹೋಗಿದ್ದ ವೇಳೆ ರೈತನ ಮೇಲೆ ದಾಳಿ ಮಾಡಿ ಗಂಭೀರವಾಗಿ ಗಾಯಗೊಂಡ ಘಟನೆ ಶಿಕಾರಿಪುರ ತಾಲೂಕಿನ ಹಾರೋಗಪ್ಪ ಗ್ರಾಮದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಹಾರೋಗೊಪ್ಪ ಗ್ರಾಮದ ಸೋಮ್ಲಾ ನಾಯಕ್ ಗಂಭೀರವಾಗಿ ಗಾಯಗೊಂಡ ರೈತ.
ಜಮೀನಿಗೆ ನೀರಿನ ಮೋಟರ್ ಹಾಕಲು ಹೋದ ಸಂದರ್ಭದಲ್ಲಿ ಹಿಂದಿನಿಂದ ಕರಡಿ ಬಂದು ದಿಢೀರ್ ದಾಳಿ ನಡೆಸಿದೆ.ದಾಳಿಯಿಂದ ರೈತನ
ಕುತ್ತಿಗೆ, ಬೆನ್ನು, ಹೊಟ್ಟೆ ಭಾಗದಲ್ಲಿ ಗಂಭೀರ ಗಾಯಗಳಾಗಿವೆ. ದಾಳಿ ವೇಳೆ ರೈತ ಕಿರುಚಾಡಿದ್ದು ಕಿರುಚಾಟಕ್ಕೆ ಕರಡಿ ಹೆದರಿ ಓಡಿ ಹೋಗಿದೆ.
ಪ್ರಾಣಪಾಯದಿಂದ ಸೋಮ್ಲಾ ನಾಯ್ಕ್ ಪಾರಾಗಿದ್ದು ಸ್ಥಳದಿಂದ ಹಾರೊಗೊಪ್ಪದ ಬಸ್ ನಿಲ್ದಾಣಕ್ಕೆ ಗಾಯಾಳು ಆಗಮಿಸಿದ್ದು ಸ್ಥಳಿಯರು ಶಿಕಾರಿಪುರದ ಸಾರ್ವಜನಿಕ ಪಟ್ಟಣದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ.


