Friday, March 13, 2026
Flats for sale
Homeಜಿಲ್ಲೆಶಿವಮೊಗ್ಗ : ಗಾಳಿ ಮಳೆಯಿಂದ ರಸ್ತೆಗೆ ಬಿದ್ದ ಬೃಹತ್ ಮರ, ಶಿವಮೊಗ್ಗ-ಮಂಗಳೂರು ಹೆದ್ದಾರಿ ರಸ್ತೆ...

ಶಿವಮೊಗ್ಗ : ಗಾಳಿ ಮಳೆಯಿಂದ ರಸ್ತೆಗೆ ಬಿದ್ದ ಬೃಹತ್ ಮರ, ಶಿವಮೊಗ್ಗ-ಮಂಗಳೂರು ಹೆದ್ದಾರಿ ರಸ್ತೆ 4 ಗಂಟೆಗಳ ಕಾಲ ಸಂಚಾರ ಬಂದ್.

ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ‌ ಮಲೆನಾಡು ಭಾಗದಲ್ಲಿ ಮುಂದುವರೆದ ಭಾರೀ ಮಳೆಯಿಂದಾಗಿ ಹೊಸನಗರ ತಾಲೂಕಿನ ಮೂಲೆಗದ್ದೆ ಮಠದ ಬಳಿ ಗಾಳಿ ಮಳೆಯಿಂದ ರಸ್ತೆಗೆ ಬೃಹತ್ ಗಾತ್ರದ ಮರ ಅಡ್ಡಲಾಗಿ ಬಿದ್ದ ಪರಿಣಾಮ ರಾಷ್ಟ್ರೀಯ ಹೆದ್ದಾರಿ 766ಸಿ ಯಲ್ಲಿ ಬೆಳಗಿನ ಜಾವಾ ಟ್ರಾಫಿಕ್ ಜಾಮ್ ಉಂಟಾಗಿ ಜನಸಾಮನ್ಯರು ಪರದಾಡುವಂತಹ ಘಟನೆ ನಡೆದಿದೆ.

ಸಾಗರ ಮಾಸ್ತಿಕಟ್ಟೆ ಕುಂದಾಪುರ ರಸ್ತೆ ಕೆಲಕಾಲ ಸ್ಥಗಿತಗೊಂಡಿದ್ದು ಮಂಗಳೂರು, ಉಡುಪಿ, ಕುಂದಾಪುರ ತೆರಳಲು ವಾಹನ ಸವಾರರ ಪರದಾಟಪಡುತ್ತಿದ್ದರು. ಬೆಳಗಿನ ಜಾವದಿಂದಲೇ ವಾಹನಗಳು ಗಂಟೆಗಟ್ಟಲೇ ನಿಂತ ಪರಿಣಾಮ ಸಂಚಾರ ದಟ್ಟಣೆ ಉಂಟಾಯಿತು.ಬಳಿಕ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮರ ತೆರವು ಕಾರ್ಯ ಆರಂಭಿಸಿದ್ದಾರೆ ವಾಹನಗಳು ಬೆಳಗಿನ ನಾಲ್ಕು ಗಂಟೆಯಿಂದ ನಿಂತಲೇ ನಿಂತಿದ್ದು,ರಸ್ತೆ ಸಂಚಾರ ಸ್ಥಗಿತ ಹಿನ್ನಲೆ ವಾಹನ ಚಾಲಕರು ಬದಲಿ ರಸ್ತೆ ಮೊರೆಹೋಗಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular