ಶಿವಮೊಗ್ಗ : ಕೆ ಎಸ್ ಆರ್ ಟಿ ಸಿ ಬಸ್ ಮತ್ತು ಶಾಲಾ ವಾಹನ ಮುಖಾಮುಖಿ ಡಿಕ್ಕಿಯಾದ ಘಟನೆ ಸಾಗರ ತಾಲ್ಲೂಕಿನ ಕಾರ್ಗಲ್ ಇಡುವಾಣಿ ತಿರುವಿನಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಮುಂಜಾನೆ ಈ ಘಟನೆ ನಡೆದಿದ್ದು ಅದೃಷ್ಟವಶಾತ್ ದೊಡ್ಡ ದುರಂತ ತಪ್ಪಿದೆ. ಸಾಗರದಿಂದ ಸಿಗಂದೂರಿಗೆ ತೆರಳುತಿದ್ದ ಸರ್ಕಾರಿ ಬಸ್ ಹಾಗೂ ಸಾಗರಕ್ಕೆ ಬರುತಿದ್ದ ಖಾಸಗಿ ಶಾಲಾ ವಾಹನ ನಡುವೆ ಅಪಘಾತ ಸಂಬಂಧಿಸಿದ್ದು ಅಪಘಾತದಲ್ಲಿ ಎರಡು ಬಸ್ ಚಾಲಕರು ಗಂಭೀರ ಗಾಯಗಳಾಗಿದೆ.
ಶಾಲಾ ಬಸ್ ನಲ್ಲಿ 15 ಕ್ಕೂ ಮಕ್ಕಳಿದ್ದು ಓರ್ವ ವಿದ್ಯಾರ್ಥಿಗೆ ಗಂಭೀರ ಗಾಯಗಳಾಗಿದೆ. ಉಳಿದ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿದ್ದು
ಗಾಯಾಳುಗಳನ್ನು ಶಿವಮೊಗ್ಗ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಕಾರ್ಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸ್ಥಳಕ್ಕೆ ಪೋಲಿಸರು ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.


