ಶಿಲೊಂಗ್ : ಮೇಘಾಲಯದಲ್ಲಿ ಮಧುಚಂದ್ರದ ಸಮಯದಲ್ಲಿ ರಾಜಾ ರಘುವಂಶಿ ಹತ್ಯೆ ಪ್ರಕರಣದಲ್ಲಿ ಆಘಾತಕಾರಿ ಸಂಗತಿಗಳು ಹೊರ ಬಿದ್ದಿದ್ದು ರಾಜಾ ಅವರ ಪತ್ನಿ ಸೋನಮ್ ಮದುವೆಗೆ ಮೊದಲೇ ಅವರ ಕೊಲೆಗೆ ಯೋಜನೆ ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಸೋನಮ್ ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆ ಸೇರಿ ಈ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಪೊಲೀಸರು ಸೋನಮ್, ರಾಜ್ ಮತ್ತು ಇತರ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮದುವೆಗೆ ಮೊದಲೇ ಕೊಲೆ ಸಂಚು ರೂಪಿಸಲಾಗಿತ್ತು ಎಂದು ತನಿಖೆಯಿಂದ ತಿಳಿದುಬAದಿದೆ.
ಈ ಸಂವೇದನಾಶೀಲ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸೋನಮ್ ರಘುವಂಶಿ ಈಗ ಶಿಲ್ಲಾಂಗ್‌ಗೆ ಮರಳಿದ್ದುಸೋಮವಾರ ರಾತ್ರಿ ತಡವಾಗಿ ಗುವಾಹಟಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ನಂತರ, ಭಾರೀ ಭದ್ರತೆಯ ನಡುವೆ ಶಿಲ್ಲಾಂಗ್‌ಗೆ ಕರೆತರಲಾಗಿದೆ, ಅಲ್ಲಿ ಸೋನಮ್‌ಳನ್ನು ಇಂದು ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಪೊಲೀಸರ ಪ್ರಕಾರ, ಸೋನಮ್ ತನ್ನ ಪತಿ ರಾಜಾ ರಘುವಂಶಿಯ ಕೊಲೆಯನ್ನು ಮೂವರು ವೃತ್ತಿಪರ ಕೊಲೆಗಾರರ ಸಹಾಯದಿಂದ ಯೋಜಿಸಿ ಕಾರ್ಯಗತಗೊಳಿಸಿದ್ದಾಳೆ.ಕೊಲೆಯ ನಂತರ, ಸೋನಮ್ ಗುವಾಹಟಿಮೂಲಕ ಇಂದೋರ್ ತಲುಪಿ ಅಲ್ಲಿಂದ ಉತ್ತರ ಪ್ರದೇಶಕ್ಕೆ ಹೋಗಿ ಕೊನೆಗೆ ಘಾಜಿಪುರದಲ್ಲಿ ಶರಣಾಗಿದ್ದಾಳೆ.
ಪೊಲೀಸರ ಪ್ರಕಾರ, ಸೋನಮ್ ತನ್ನ ಪ್ರಿಯಕರ ರಾಜ್ ಕುಶ್ವಾಹ ಜೊತೆ ಸೇರಿ ರಾಜಾನನ್ನು ಹತ್ಯೆ ಮಾಡಿದ್ದಾರೆ. ಪೊಲೀಸರು ಸೋನಮ್ ರಘುವಂಶಿ, ರಾಜ್ ಕುಶ್ವಾಹ, ಆಕಾಶ್ ರಜಪೂತ್ ಮತ್ತು ಆನಂದ್ ಕುರ್ಮಿಯನ್ನು ಬಂಧಿಸಿದ್ದಾರೆ. ಆಕಾಶ್ ರಜಪೂತ್ ಉತ್ತರ ಪ್ರದೇಶದ ಲಲಿತ ಪುರದವರಾಗಿದ್ದರೆ, ಆನಂದ್ ಕುರ್ಮಿ ಮಧ್ಯ ಪ್ರದೇಶದ ಸಾಗರ್ ಮೂಲದವರು. ಹೆಸರು ಬಹಿರಂಗಪಡಿಸಲು ಇಚ್ಛಿಸದ ಪೊಲೀಸ್ ಅಧಿಕಾರಿಯೊಬ್ಬರು, ರಾಜಾನನ್ನು ಕೊಲೆ ಮಾಡುವ ಯೋಜನೆಯನ್ನು ಅವರ ಮದುವೆಗೆ ಮೊದಲೇ ರೂಪಿಸಲಾಗಿತ್ತು ಎಂದು ಹೇಳಿದ್ದಾರೆ. ರಾಜಾ ಇಂದೋರ್ ನಿವಾಸಿಯಾಗಿದ್ದು, ಮೇ 11 ರಂದು ಸೋನಮ್ ಅವರನ್ನು ವಿವಾಹವಾಗಿದ್ದಾರೆ. ಕುಶ್ವಾಹ ಕೆಲವು ವಾರಗಳ ಕಾಲ ಹಂತಕರ ಸAಪರ್ಕದಲ್ಲಿದ್ದರು ಎಂದು ಇಂದೋರ್ ಪೊಲೀಸ್ ಅಧಿಕಾರಿಗಳುತಿಳಿಸಿದ್ದಾರೆ.
ಮೂವರು ಆರೋಪಿಗಳು ಮೇ 17 ರಂದು 50,೦೦೦ ರೂ. ಮತ್ತು ಮೊಬೈಲ್ ನೊಂದಿಗೆ ಮೇಘಾಲಯಕ್ಕೆ ತೆರಳಿದ್ದಾರೆ. ಈ ಹಣ ಮತ್ತು ಫೋನ್ ಕುಶ್ವಾಹ ನೀಡಿದ್ದಾರೆ ಎನ್ನಲಾಗಿದೆ. ರಾಜಾ ಅವರ ತಾಯಿ ಉಮಾ ರಘುವಂಶಿ ಅವರು, ಹನಿಮೂನ್‌ಗೆ ಹೋಗುವ ಮೊದಲು ಸೋನಮ್ 9 ಲಕ್ಷ ರೂ. ಮತ್ತು ಕೆಲವು ಆಭರಣಗಳನ್ನು ತೆಗೆದುಕೊಂಡಿದ್ದಾರೆ ಸೋನಮ್ ಇಬ್ಬರಿಗೂ ರಿಟರ್ನ್ ಟಿಕೆಟ್‌ಗಳನ್ನು ಬುಕ್ ಮಾಡಿರಲಿಲ್ಲ ಎಂದು ಅವರು ಹೇಳಿದ್ದಾಳೆ.