ಶಿರಾ: ತಾಲ್ಲೂಕಿನ ಹಿಂದೂ-ಮುಸ್ಲಿಂ ಬಾಂಧವ್ಯದ ತಾಣವಾದ ಗಂಡಿಹಳ್ಳಿಯಲ್ಲಿ ಮೊಹರಂ ಅಂಗವಾಗಿ ಹಿಂದೂ-ಮುಸ್ಲಿಮರ ಭಾವೈಕ್ಯದ ಹಬ್ಬವಾಗಿ ಆಚರಿಸಿಕೊಂಡು ಬರಲಾಗುತ್ತಿದೆ.
ಹಬ್ಬ ಗ್ರಾಮೀಣ ಭಾಗದಲ್ಲಿ ಜನರನ್ನು ಒಂದೆಡೆ ಸೇರಿಸುವುದಲ್ಲದೆ, ವೇಷಭೂಷಣ ತೊಟ್ಟು ಊರೂರು ಸುತ್ತಿದ ಜನರು ಮೊಹರಂ ದಿನ ರಾತ್ರಿ ದೊಡ್ಡ ಪ್ರಮಾಣದಲ್ಲಿ ಸೌದೆ ಒಟ್ಟುಗೂಡಿಸಿ ಅದಕ್ಕೆ ಅಗ್ನಿಸ್ಪರ್ಶ ಮಾಡಿ ರಾತ್ರಿಯಲ್ಲ ಕುಣಿಯುವುದರ ಜೊತೆಗೆ ಬಾಬಯ್ಯನಿಗೆ ಎಡೆ ಅರ್ಪಿಸಿ, ಬಾಬಯ್ಯನನ್ನು ಹೊತ್ತುಕೊಂಡು ಕೆಂಡ ತುಳಿಯುವುದು ಈ ಭಾಗದಲ್ಲಿ ವಾಡಿಕೆ.
ಮೊಹರಂ ಹಬ್ಬದಂದು ಹರಕೆ ಹೊತ್ತವರು ಕೆಂಡ ಹಾಯ್ದ ಹರಕೆ ತೀರಿಸಿದ ಭಕ್ತರು ಇಡೀ ದಿನ ಅನುರನಿಸಿದ ಮೊಹರಂ ಎಲ್ಲ ಧರ್ಮಗಳ ಜನರಿಂದ ಒಗ್ಗಟ್ಟಿನಿಂದ ಹಬ್ಬ ಆಚರಣೆ ಮಾಡಿದರು.


