Friday, March 13, 2026
Flats for sale
Homeರಾಜ್ಯಶಿರಾ : ಶಾಲೆಯ ಆವರಣದಲ್ಲಿ ಮಕ್ಕಳ ಮೇಲೆ ಜೇನು ದಾಳಿ: 16 ಮಂದಿ ಆಸ್ಪತ್ರೆಗೆ ದಾಖಲು.

ಶಿರಾ : ಶಾಲೆಯ ಆವರಣದಲ್ಲಿ ಮಕ್ಕಳ ಮೇಲೆ ಜೇನು ದಾಳಿ: 16 ಮಂದಿ ಆಸ್ಪತ್ರೆಗೆ ದಾಖಲು.

ಶಿರಾ : ಶಾಲೆಯ ಆವರಣದ ಆಟವಾಡುತ್ತಿದ್ದ ವೇಳೆ 16 ಕ್ಕೂ ಹೆಚ್ಚು ಮಕ್ಕಳಿಗೆ ಜೇನು ನೊಣ ದಾಳಿ ಮಾಡಿ ಕಡಿದ ಘಟನೆ ತಾಲೂಕಿನ ಚಿಕ್ಕನಹಳ್ಳಿ ಶಾಲೆಯ ಆವರಣದಲ್ಲಿ ವರದಿಯಾಗಿದೆ.

ಜೇನು ಕಡಿತದಿಂದ 16 ಮಕ್ಕಳಿಗೆ ಗಾಯವಾಗಿದ್ದು ಕೆಲ ಮಕ್ಕಳ ಬೆನ್ನು, ಕುತ್ತಿಗೆ, ಮುಖ, ತಲೆಗೆ ಗಾಯಗಳಾಗಿವೆ. ಗಾಯಗೊಂಡಿರುವ ಮಕ್ಕಳನ್ನು ಸ್ಥಳೀಯಸಹಾಯದಿಂದ ಶಿರಾ ಸಾರ್ವಜನಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.

ಗುರುವಾರ ಬೆಳಗ್ಗೆ ಶಾಲೆ ಆರಂಭಕ್ಕೆ ಮೊದಲು ಆವರಣದಲ್ಲಿ ಮಕ್ಕಳು ಇರುವಾಗ ಶಾಲೆ ಪಕ್ಕದಲ್ಲೇ ತೋಟದಲ್ಲಿ ಗೂಡುಕಟ್ಟಿದ್ದ ಜೇನುನೊಣ ಏಕಾಏಕಿ ದಾಳಿ ಮಾಡಿ 20ಕ್ಕೂ ಹೆಚ್ಚು ಮಕ್ಕಳಿಗೆ ಕಡಿದಿದೆ. ತಕ್ಷಣಕ್ಕೆ 16 ಜನರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಸ್ಥಳಕ್ಕೆ ಶಿರಾ ತಹಶಿಲ್ದಾರರ ದತ್ತಾತ್ರೇಯ, ಡಿವೈಎಸ್ಪಿ ಶೇಕರ್, ಗ್ರಾಮಾಂತರ ಪಿಐ ರಾಘವೇಂದ್ರ, ಮತ್ತಿತರ ಭೇಟಿ ನೀಡಿ ಆಸ್ಪತ್ರೆಗೆ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದ್ದಾರೆ. ಇದೇ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಕ್ಕಳ ಮೇಲೆ ಜೇನು ಕಚ್ಚಿ ಸೂಕ್ತ ಚಿಕಿತ್ಸೆ ನೀಡಿದೆ ಯಾವುದೆ ಹಾನಿಯಾಗಿಲ ಮತ್ತು ವೈದಯಸಲಹೆ ಮೇರೆಗೆ ಮನೆಗೆ ಕಳುಹಿಸಲಾಗಿದೆ ವಿವರಿಸಿದರು ಅರಣ್ಯ ಇಲಾಖೆಗೂ ಶಾಲಾ ಆವರಣದಲ್ಲಿ ಇರುವ ಜೇನನ್ನು ತೆರವುಗೊಳಿಸಲು ಸೂಚಿಸಲಾಗಿದೆ ಎಂದು ತಿಳಿದುಬರುತ್ತದೆ…

RELATED ARTICLES

LEAVE A REPLY

Please enter your comment!
Please enter your name here

Most Popular