Saturday, March 14, 2026
Flats for sale
Homeರಾಜ್ಯಶಿರಾ : ಭಾರಿ ಗಾಳಿ-ಮಳೆ : ಧರೆಗುರುಳಿದ ಮರ-ವಿದ್ಯುತ್‌ ಕಂಬ.

ಶಿರಾ : ಭಾರಿ ಗಾಳಿ-ಮಳೆ : ಧರೆಗುರುಳಿದ ಮರ-ವಿದ್ಯುತ್‌ ಕಂಬ.

ಶಿರಾ : ತಾಲ್ಲೂಕಿನಲ್ಲಿ ಬುಧವಾರ ಸಂಜೆ ಮಳೆ ಅಬ್ಬರಿಸಿದೆ. ಭಾರೀ ಗುಡುಗು, ಗಾಳಿ ಸಹಿತ ತುರಿಸಿನ ಮಳೆಯಾಗಿದೆ.ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಹಲವೆಡೆ ಮರ, ವಿದ್ಯುತ್‌ ಕಂಬಗಳು ಧರೆಗುರುಳಿದ್ದು, ಕೆಲ ಗಂಟೆಗಳ ಕಾಲ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು.ಶಿರಾ ತಾಲೂಕಿನ ದ್ವಾರನ ಕುಂಟೆ ಗ್ರಾಮದಲ್ಲಿ ಬಿಸಿದ ಗಾಳಿ ಮಳೆಗೆ 1. ವಿದ್ಯುತ್ ಕಂಬ ಹಾಗೂ ಮರ ಬಿದ್ದಿದೆ.

ದ್ವಾರನ ಕುಂಟೆ ಗ್ರಾಮ ದಿಂದ ವಾಜರಹಳ್ಳಿ ಗೆ ಹೋಗುವ ರಸ್ತೆಯಲ್ಲಿ ಸಂಭವಿಸಿದ್ದು ಯಾವುದೇ ಪ್ರಾಣಾಪಯ ಆಗಿರುವುದಿಲ್ಲ.ಸಂಜೆ 5 ಗಂಟೆ ಸುಮಾರಿಗೆ ಗುಡುಗು, ಸಿಡಿಲು ಸಹಿತ ಗಾಳಿಯೊಂದಿಗೆ ಬಿರುಸಿನ ಮಳೆ ಆರಂಭವಾಯಿತು. ನೋಡನೋಡುತ್ತಿದ್ದಂತೆ ಮರ ಧರೆಗುರುಳಿದ್ದು, ಮತ್ತು ವಿದ್ಯುತ್‌ ಕಂಬಗಳು ನೆಲಕ್ಕುರುಳಿವೆ. ಪರಿಣಾಮ ಹಲವು ಕಡೆ ವಿದ್ಯುತ್‌ ಪೂರೈಕೆ ಸ್ಥಗಿತಗೊಂಡಿದ್ದು, ಸಾರ್ವಜನಿಕರು ಕತ್ತಲೆಯಲ್ಲೇ ಕಾಲ ಕಳೆಯುವಂತಾಯಿತು.

RELATED ARTICLES

LEAVE A REPLY

Please enter your comment!
Please enter your name here

Most Popular