ಶಿರಾ : ಶಾಲೆಗೆ ಹೋಗಿದ ವಿದ್ಯಾರ್ಥಿ ಊಟದ ಸಮಯದಲ್ಲಿ ಶಾಲೆಯ ಪಕ್ಕದಲ್ಲಿ ಇರುವ ದೇವಾಲಯದಲ್ಲಿ ದೇವರಿಗೆ ದೀಪ ಹಚ್ಚುವ ಸಮಯದಲ್ಲಿ ತನ್ನ ಬಟ್ಟೆಗೆ ದೀಪದ ಬೆಂಕಿ ಕಿಡಿ ಬಟ್ಟೆಗೆ ತಗುಲಿದ ಪರಿಣಾಮ 1ನೇ ತರಗತಿ ವಿದ್ಯಾರ್ಥಿನಿ ಪ್ರಾಣ ಕಳೆದುಕೊಂಡ ಘಟನೆ ದಿನಾಂಕ ೧೩ ರಂದು ತಾಲ್ಲೂಕಿನ ಮಳೆಕೋಟೆ ಸರಕಾರಿ ಶಾಲೆಯ ನಡೆದಿದೆ.
ಶಾಲೆಯ ವಿದ್ಯಾರ್ಥಿನಿ ದೀಕ್ಷಾ ಶಾಲೆಯ ಪಕ್ಕ ಪಕ್ಕದಲ್ಲಿ ಇರುವ ದೇವಾಲಯ ಒಂದರಲ್ಲಿ ದೀಕ್ಷಾ ಮಧ್ಯಾಹ್ನ ಊಟದ ನಂತರ ಶಾಲೆಯಿಂದ ಸ್ವಲ್ಪ ದೂರದ ಕಾಟಮ್ಮ ದೇವಸ್ಥಾನದ ಬಳಿಗೆ ತೆರಳಿ ತನ್ನ ಇತರೆ ನಾಲ್ಕು ಸಹಪಾಠಿಗಳೊಂದಿಗೆ ಅಲ್ಲಿ ದೇವಸ್ಥಾನದ ದೀಪ ಹಚ್ಚಲೆಂದು ಹೋಗಿ ತನ್ನ ಮೈ ಸುಟ್ಟುಕೊಂಡ ಗಂಭೀರವಾಗಿ ಗಾಯಗೊಂಡ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಾವನ್ನಪ್ಪಿದ್ದಾರೆ.
ವಿಷಯ ತಿಳಿದ ನಂತರ ಶಾಲೆಗೆ ಭೇಟಿ ನೀಡಿ ಹಾಗೂ ಬಿಇಒ.
ಕೃಷ್ಣಪ್ಪ ಭೇಟಿ ನೀಡಿ ಕುಲಂಕುಶ ಪರಿಶೀಲನೆ ನಡೆಸಿದರು ಈ ಸಮಯದಲ್ಲಿ ನಾಲ್ಕು ವಿದ್ಯಾರ್ಥಿಗಳು ಅವರ ಬಗ್ಗೆ ಶಿಕ್ಷಕರಿಗೆ ಜವಾಬ್ದಾರಿ ಇಲ್ಲದಿರುವುದು ಕೂಡಲೇ ಅವರ ವಿರುದ್ಧ ಕ್ರಮಕ್ಕೆ ಕೈಗೊಂಡ ಸದರಿ ಶಾಲೆಯು ಒಂದರಿಂದ ಏಳನೇ ತರಗತಿಯ ವರೆಗೆ ಸುಮಾರು ಎಪ್ಪತ್ತೈದು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಇದರಲ್ಲಿ ಒಟ್ಟು ನಾಲ್ಕು ಜನ ಶಿಕ್ಷಕರು ಇದ್ದು ಇಬ್ಬರು ಗುತ್ತಿಗೆಯ ಆಧಾರದ ಮೇಲೆ ಮತ್ತು ಇಬ್ಬರು ಸರಕಾರದ ಸೇವೆಯಲ್ಲಿ ಒಟ್ಟು ನಾಲ್ಕು ಜನ ಸದ್ಯ ಸರಕಾರಿ ಸೇವೆ ಶಿಕ್ಷಕರು ಅಮಾನತು ಮಾಡಲಾಗಿದೆ ಹಾಗೂ ಗುತ್ತಿಗೆ ಅಧಾರದ ಶಿಕ್ಷಣರನ್ನು ವಜಾ ಮಾಡಲಾಗಿದೆ ಎಂದು ತಿಳಿದ ಬಂದಿರುತ್ತದೆ.


