ಶಿರಾ : ಸರ್ಕಾರಿ ಶಾಲೆ ಎಂದರೇ ಮೂಗು ಮುರಿಯುವ ಪೋಷಕರೇ ಜಾಸ್ತಿ,ಅಂತದರಲ್ಲಿ ಇಲ್ಲೊಂದು ಶಾಲೆಗೆ ಸುತ್ತಮುತ್ತಲ ನಿವಾಸಿಗಳೇ ಕಂಟಕವಾಗಿದ್ದಾರೆ. ಸಂಜೆ ಶಾಲೆ ಮುಗಿಯುತ್ತಿದ್ದಂತೆ ಅನೈತಿಕ ಚಟುವಟಿಕೆಗಳ ಅಡ್ಡವಾಗಿ ಮಾರ್ಪಟ್ಟಿದ್ದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.ಇದರ ಬಗ್ಗೆ ಟಿ .ಜಯಚಂದ್ರ ರವರು ಗಮನ ಹರಿಸಿದ್ದಾರೆ ಒಳ್ಳೆಯದು ಎಂದು ಪೋಷಕರ ಮಾತು .
1ನೇ ತರಗತಿಯಿಂದ 7ನೇ ತರಗತಿವರೆಗೂ ಮತ್ತು ಪಕ್ಕದಲ್ಲಿ ಪ್ರೌಢ ಶಾಲೆಯ ಹಲವಾರು ಮಕ್ಕಳು ಶಿಕ್ಷಣಪಡೆದುಕೊಳ್ಳುತ್ತಿದ್ದಾರೆ.ಇದರ ಆವರಣದಲ್ಲಿ ಅಂಗನವಾಡಿ ಕೇಂದ್ರ ಸೇರಿದಂತೆ ಮತ್ತು ಶಾಲೆಯ ಪಕ್ಕಕ್ಕೆ ಹೊಂದಿಕೊಂಡಿರುವ ಲೋಕೋಪಯೋಗಿ ಇಲಾಖೆ, ಪಶುಪಾಲನೆ ಇಲಾಖೆ ಸ್ವಲ್ಪ ದೂರದಲ್ಲಿ ಸರ್ಕಾರಿ ಆಸ್ಪತ್ರೆ,ಮತ್ತೊಂದು ರಸ್ತೆ ದಾಟಿದರೆ ನಗರಸಭೆ ಇವುಗಳ ಇದರು ಬೆಳಿಗ್ಗೆಯಿಂದ ಸಂಜೆವರೆಗೂ ಮಕ್ಕಳ ಆಟ, ಪಾಠದಲ್ಲಿ ತಲ್ಲೀನವಾಗುವ ಈ ಶಾಲಾ ಆವರಣ ಸಂಜೆಯಾಗುತ್ತಿದ್ದಂತೆ ಕುಡುಕರ ಅಡ್ಡವಾಗಿ ಮಾರ್ಪಡುತ್ತಿದೆ.
ಪ್ರತಿನಿತ್ಯ ಬೆಳಿಗ್ಗೆ ಶಿಕ್ಷಕರು ಶಾಲಾ ಆವರಣ ಪ್ರವೇಶಿಸುತ್ತಿದ್ದಂತೆ ಕುಡುಕರು ಕುಡಿದು ಎಸೆದ ಬಾಟಲಿಗಳನ್ನು ಹೊರಹಾಕುವುದೇ ಕಾಯಕವಾಗಿದೆ. ಜೊತೆಗೆ ಶಾಲಾ ಆವರಣ ಮಲಮೂತ್ರ ವಿಸರ್ಜನೆ ಯಿಂದ ಮೂಗು ಮುಚ್ಚುವ ವಾತಾವರಣ ಉಂಟಾಗಿದೆ .ಶಾಲೆ ಅಕ್ಷರ ಕಲಿಕೆಯ ಕೇಂದ್ರ ಜೊತೆಗೆ ಮಕ್ಕಳಿಗೆ ಜ್ಞಾನ ಎರೆಯುವ ಶಾಲಾ ಆವರಣ ಶುಚಿಯಾಗಿಡುವುದು ಎಲ್ಲರ ಕರ್ತವ್ಯವೂ ಹೌದು. ಆದರೆ ಇದಕ್ಕೆ ವಿರುದ್ಧ ಈ ಸರಕಾರಿ ಪಾಠಶಾಲೆಯ ಆವರಣ ಅನೈತಿಕ ಚಟುವಟಿಕೆ ಹಾಗೂ ಮಲಮೂತ್ರ ವಿಸರ್ಜನೆಯ ತಾಣವಾಗಿ ಪರಿಣಮಿಸಿದೆ.
ಪ್ರತಿ ದಿನ ಇದೇ ಪರಿಸ್ಥಿತಿ ಉದ್ಬವಾಗುವುದರಿಂದ ಶಿಕ್ಷಕರು ಬೇಸತ್ತು ಹೋಗಿದ್ದಾರೆ. ಈ ಪುಂಡರು ಇಷ್ಟಕ್ಕೇ ಸುಮ್ಮನಿರುವುದಿಲ್ಲ. ಕುಡಿದ ಅಮಲಿನಲ್ಲಿ ಶಾಲೆಯ ಮೇಲ್ಚಾವಣಿ ಹೆಂಚುಗಳನ್ನು ಓಡೆದು ಹಾಕುತ್ತಾರೆ. ಶಾಲೆಯ ಸುತ್ತಲು ಕಂಪೌಂಡ್ ನಿರ್ಮಿಸಲು ಹಲವಾರು ವರ್ಷಗಳ ಬೇಡಿಕೆ ಮಾತ್ರ ಇನ್ನೂ ಕೈಗೊಡಿಲ್ಲ ಎಂಬುದು ಬೇಸರದ ಸಂಗತಿ.
ಈ ಬಗ್ಗೆ ನಗರಸಭೆ,ಪೊಲೀಸರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಜ್ಞಾನ ದೇಗುಲ ಕುಡುಕರ ಅಡ್ಡವಾಗಿರುವುದು ಅತ್ಯಂತ ಶೋಚನೀಯ ಎಂದು ಕೆಲ ಇಲ್ಲಿನ ವಿದ್ಯಾರ್ಥಿಗಳು ಬೇಸರ ವ್ಯಕ್ತಪಡಿಸುತ್ತಾರೆ.ಅತ್ಯಂತ ಹಳೇ ಕಟ್ಟಡ: 1923ರಲ್ಲಿ ಪ್ರಾರಂಭವಾದ ಈ ಉರ್ದ ಶಾಲೆ ನಗರದ ಹೃದಯ ಭಾಗದಲ್ಲಿ ಇದ್ದುಹಲವಾರ ಕೊಠಡಿಗಳನ್ನು ಒಳಗೊಂಡಿದೆ. ಇಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಜ್ಞಾನಾರ್ಜನೆ ಮಾಡುತ್ತಿದ್ದಾರೆ.
ಶಾಲಾ ಕಟ್ಟಡದ ಮೇಲ್ಚಾವಣಿ ಹೆಂಚುಗಳು ಶಿಥಿಲಗೊಂಡ ಪರಿಣಾಮ ಮಳೆ ಬಂದರೇ ಎಲ್ಲ ಕಡೆಗಳಲ್ಲಿ ಸೋರುತ್ತದೆ. ದಾನಿಗಳ ನೆರೆವುನಿಂದ ಹೆಂಚುಗಳು ತೆಗೆಸಿ ಹೊಸ ತಗಡು ಸೀಟ್ ಹಾಕಿಸಿದ್ದು, ಬಿಸಿಯೂಟದ ಅಡುಗೆ ಕೋಣೆ ಶಿಥಿಲಗೊಂಡು ಚಿಂತಾಜನಕವಾಗಿದೆ. ಸರ್ಕಾರಿ ಶಾಲೆ ಎಂದರೇ ಅಸಡ್ಡೆ ತೋರುವ ಈ ದಿನಗಳಲ್ಲಿ ಇಲ್ಲಿನ ಸರ್ಕಾರಿ ಶಾಲೆಗೆ ಸೇರಿಸಲು ಪೋಷಕರು ಮುಂದೇ ಬಂದರೂ ಮೂಲಭೂತ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಮಾತ್ರವಲ್ಲದೇ ಸ್ಥಳೀಯ ಪುಂಡರ ಕಾಟವು ವಿಪರೀತವಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಎನ್ನುವುದು ಶಾಲೆಯ ವಿದ್ಯಾರ್ಥಿಗಳು ಮತ್ತು ಅಡುಗೆ ಸಿಬ್ಬಂದಿ ವರ್ಗದ ಆಗ್ರಹ ವಾಗಿದೆ.
.