ಶಿಯೋಪುರ್ : ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ಮದುವೆ ಮೆರವಣಿಗೆ ವೇಳೆ ಕುದುರೆಯಿಂದ ಬಿದ್ದು 26 ವರ್ಷದ ವರನೊಬ್ಬ ಸಾವನ್ನಪ್ಪಿದ್ದಾನೆ. ವೈರಲ್ ಆದ ವೀಡಿಯೊದಲ್ಲಿ ಕುದುರೆಯ ಮೇಲೆ ಒರಗಿದಾಗ ವರ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬಿದ್ದಿರುವ ದೃಶ್ಯಗಳಿವೆ.
ಈ ದುರಂತ ಘಟನೆ ಶುಕ್ರವಾರ ರಾತ್ರಿ ನಡೆದಿದ್ದು ಸಾಮಾಜಿಕ ಜಾಲತಾಣ ಗಳಲ್ಲಿ ಇದರ ವಿಡಿಯೋ ವೈರಲ್ ಆಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ವರ ಪ್ರದೀಪ್ ಸಾಂಪ್ರದಾಯಿಕ ಉಡುಪಿನಲ್ಲಿ ಕುದುರೆ ಸವಾರಿ ಮಾಡಿ ಮಂಟಪದ ಕಡೆಗೆ ಹೋಗುತ್ತಿರುವುದನ್ನು ಕಾಣಬಹುದು. ಇದ್ದಕ್ಕಿದ್ದಂತೆ ಅವನು ಮುಂದಕ್ಕೆ ಬಾಗಿ ಪ್ರಜ್ಞೆ ತಪ್ಪಿ ಬೀಳುವಾಗ ಸಂಬAಧಿಯೊಬ್ಬ ವರನನ್ನು ಹಿಡಿಯಪ್ರಯತ್ನಿಸಿದ್ದಾನೆ ಆದರೆ ಅಷ್ಟರಲ್ಲಿ ವರ ಕೆಳಗೆ ಬಿದ್ದಿದ್ದಾನೆ.
ಮದುವೆ ಮೆರವಣಿಗೆಯಲ್ಲಿದ್ದ ಜನರಿಗೆ ಏನಾಯಿತು ಎಂದು ಅರ್ಥವಾಗಲಿಲ್ಲ, ಆದರೆ ವರ ಪ್ರದೀಪ ಯಾವುದೇ ಪ್ರತಿಕ್ರಿಯೆ ತೋರಿದೆ ಇರುವಾಗ ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಪರೀಕ್ಷೆಯ ನಂತರ, ಮೃತಪಟ್ಟಿದ್ದಾರೆಂದು ಘೋಷಿಸಲಾಗಿದೆ. ವೈದ್ಯರು ಅವರ ಸಾವು ಬಹುಶಃ ಹೃದಯಾಘಾತದಿಂದಾಗಿರಬಹುದು ಎಂದು ಹೇಳಿದ್ದಾರೆ.