Tuesday, October 21, 2025
Flats for sale
Homeದೇಶಶಿಮ್ಲಾ : ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ಪ್ರವಾಹ: ೧೦ ಜಿಲ್ಲೆಗಳಲ್ಲಿ ರೆಡ್ ಅಲರ್ಟ್..!

ಶಿಮ್ಲಾ : ಭಾರೀ ಮಳೆಯಿಂದಾಗಿ ಹಿಮಾಚಲ ಪ್ರದೇಶದಲ್ಲಿ ಪ್ರವಾಹ: ೧೦ ಜಿಲ್ಲೆಗಳಲ್ಲಿ ರೆಡ್ ಅಲರ್ಟ್..!

ಶಿಮ್ಲಾ : ಹಿಮಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ಮುಂದುವರೆದಿದ್ದು, ಇದರ ನಡುವೆ ರಾಜ್ಯದ 1೦ ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.

ನಿನ್ನೆ ಮುಂಜಾನೆ ರಾತ್ರಿಯಿಂದ ಸುರಿದ ಧಾರಾಕಾರ ಮಳೆಯಿಂದ ಬಿಯಾಸ್ ನದಿ ಉಕ್ಕಿ ಹರಿಯುತ್ತಿದ್ದು, ಕರ್ಸೋಗ್, ಧರಂಪುರ, ಪಾAಡೋಹ್, ಮತ್ತು ತುನಾಗ್ ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ. ಮAಡಿ ಜಿಲ್ಲೆಯು ಈ ದುರಂತಕ್ಕೆ ತೀವ್ರವಾಗಿ ತುತ್ತಾಗಿದ್ದು, ಉಕ್ಕಿ ಹರಿಯುವ ಹೊಳೆಗಳು ಮತ್ತು ನದಿಗಳು ಮನೆಗಳು, ರಸ್ತೆಗಳು, ಮತ್ತು ಮೂಲಸೌಕರ್ಯಗಳಿಗೆ ಭಾರೀ ಹಾನಿಯನ್ನುಂಟುಮಾಡಿವೆ. ಧರAಪುರ್‌ನಲ್ಲಿ ಬಿಯಾಸ್ ನದಿಯು ಸಾಮಾನ್ಯ ಮಟ್ಟಕ್ಕಿಂತ 2೦ ಅಡಿಗಳಷ್ಟು ಏರಿಕೆಯಾಗಿದೆ, ಇದರಿಂದ ಸ್ಥಳೀಯ ಪ್ರದೇಶಗಳಲ್ಲಿ ಭಾರೀ ಜಲಾವೃತವಾಗಿದೆ. ಶಿಮ್ಲಾ ಬಳಿಯ ಭಟ್ಟಾಕುಫರ್‌ನಲ್ಲಿ ಐದು ಅಂತಸ್ತಿನ ಕಟ್ಟಡವೊಂದು ಕುಸಿದಿದೆ.

ಇನ್ನೊಂದೆಡೆ, ರಾಜ್ಯದ ಮಂಡಿ, ಶಿಮ್ಲಾ, ಕಾಂಗ್ರಾ, ಬಿಲಾಸ್ಪುರ್, ಸೋಲನ್, ಸಿರ್ಮೌರ್, ಹಮೀರ್ಪುರ್, ಉನಾ, ಕುಲ್ಲು, ಮತ್ತು ಚಂಬಾ ಜಿಲ್ಲೆಗಳಿಗೆ ರೆಡ್ ಅಲರ್ಟ್ ಜಾರಿಯಲ್ಲಿದೆ. ಧರ್ಮಶಾಲಾ, ಕುಲ್ಲು, ಮತ್ತು ಸೋಲನ್‌ನಲ್ಲಿ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಐಎಂಡಿ ಮುನ್ಸೂಚನೆಯ ಪ್ರಕಾರ, ಮುಂದಿನ 24 ರಿಂದ 48 ಗಂಟೆಗಳಲ್ಲಿ ಈ ಪ್ರದೇಶಗಳಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಇದರಿಂದ ಹಠಾತ್ ಪ್ರವಾಹ, ಭೂಕುಸಿತ, ಮತ್ತು ಮೂಲಸೌಕರ್ಯ ಕುಸಿತದ ಅಪಾಯವು ಗಣನೀಯವಾಗಿ ಹೆಚ್ಚಿದೆ.

ರಾಜ್ಯದ ಹಲವು ರಸ್ತೆಗಳು ಮತ್ತು ಸೇತುವೆಗಳು ಜಲಾವೃತವಾಗಿವೆಮ ಮತ್ತು ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತಗೊAಡಿದೆ. ಸ್ಥಳೀಯ ಆಡಳಿತವು ಜನರಿಗೆ ಕಡಿಮೆ ಎತ್ತರದ ಪ್ರದೇಶಗಳಿಂದ ದೂರವಿರಲು ಮತ್ತು ಸುರಕ್ಷಿತ ಸ್ಥಳಗಳಿಗೆ ತೆರಳಲು ಸೂಚನೆ ನೀಡಿದೆ. ಹಾಗೇ, ರಾಷ್ಟಿçÃಯ ವಿಪತ್ತು ನಿರ್ವಹಣಾದಳ ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳ ತಂಡಗಳು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. ಮಂಡಿ ಜಿಲ್ಲೆಯ ಕರ್ಸೋಗ್ ಮತ್ತು ಧರಂಪುರ್‌ನಲ್ಲಿ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಶಿಮ್ಲಾ ಮತ್ತು ಕುಲ್ಲುವಿನಲ್ಲಿ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ಪ್ರವಾಸಿಗರಿಗೆ ಎಚ್ಚರಿಕೆಯಿಂದ ಇರಲು ಸೂಚನೆ ನೀಡಲಾಗಿದೆ. ನದಿಗಳು ಮತ್ತು ಹೊಳೆಗಳ ಬಳಿ ವಾಸಿಸುವ ಜನರಿಗೆ ತಕ್ಷಣವೇ ಖಾಲಿಮಾಡಲು ಆದೇಶಿಸಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular