ಶಿಮ್ಲಾ : ಬಿಟ್ಟಿ ಗ್ಯಾರಂಟಿ ಯೋಜನೆಗಳಿಂದ ಹಿಮಾಚಲ ಪ್ರದೇಶ ದಿವಾಳಿಯಾಗಿದೆ. ಹಾಲಿ ಹಿಮಾಚಲ ಸರಕಾರ 96000 ಕೋಟಿ ರೂಪಾಯಿ ಸಾಲದಲ್ಲಿದೆ ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿ ಹಣಕಾಸಿನ ಕೊರತೆಯಿಂದ ಸರಕಾರಿ ನೌಕರರ ವೇತನ ಮತ್ತು ಪಿಂಚಣಿ ಪಾವತಿಸಲು ಪರದಾಡುತ್ತಿದೆ.ಸಚಿವರ ವೇತನ ನೀಡದೆ ಇನ್ನೇನು ಎರಡು ತಿಂಗಳುಗಳಾಗಿವೆ ಇದರ ನಡುವೆ ಆರ್ಥಿಕ ಸಂಪನ್ಮೂಲ ಸಂಗ್ರಹಿಸಲು ಹೊರಡಿಸಿದ ಆದೇಶ ರಾಜ್ಯ ಸರಕಾರಕ್ಕೆ ತೀವ್ರ ಮುಜುಗರ ಉಂಟಾಗಿದೆ .
ಹಿಮಾಚಲ ಪ್ರದೇಶ ಸರ್ಕಾರವು ನಗರ ಪ್ರದೇಶಗಳಲ್ಲಿ ‘ಶೌಚಾಲಯ ತೆರಿಗೆ’ಯನ್ನು ಪ್ರಸ್ತಾಪಿಸಿ ಹೊರಡಿಸಿದ ಅಧಿಸೂಚನೆಯನ್ನು ಸಂಜೆಯ ವೇಳೆಗೆ ತ್ವರಿತವಾಗಿ ಮಾರ್ಪಡಿಸಿದ್ದಾರೆ , ಸರಕಾರದ ಆದೇಶವನ್ನು ಬಿಜೆಪಿ ಮತ್ತು ಸಾಮಾಜಿಕ ಜಾಲತಾಣದ ಬಳಕೆದಾರರು ಬಹುವಾಗಿ ವ್ಯಂಗ್ಯವಾಡಿದ್ದು ಈ ಗೊಂದಲದ ನಡುವೆ ಇಂಥಹ ಆದೇಶವನ್ನು ಹಿಮಡೆದಿದೆ. ಆದರೆ ಗೊಂದಲ ಮತ್ತು ವಿವಾದದ ಬಿರುಗಾಳಿಯನ್ನು ಹುಟ್ಟುಹಾಕುವ ಈ ವಿಷಯವನ್ನು ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಅವರು ಶುಕ್ರವಾರ ಹೊಸದಿಲ್ಲಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಇದನ್ನು ತಳ್ಳಿಹಾಕಿದ್ದಾರೆ. ಕೊನೆಗೆ ರಾಜಕೀಯ ವಿರೋಧಿಗಳು ಚುನಾವಣಾ ಲಾಭಕ್ಕಾಗಿ ವಿಷಯವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿಮಾಚಲ ಪ್ರದೇಶ ಸರ್ಕಾರವು ವಾಸಸ್ಥಳಗಳಲ್ಲಿನ ಶೌಚಾಲಯದ ಆಸನಗಳ ಸಂಖ್ಯೆಯ ಮೇಲೆ ‘ಶೌಚಾಲಯ ತೆರಿಗೆ’ ವಿಧಿಸುವ ವರದಿಗಳ ನಡುವೆ, ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ: “ನಂಬಲಾಗದ, ನಿಜವಾಗಿದ್ದರೆ! ಪ್ರಧಾನಿ ನರೇಂದ್ರ ಮೋದಿ ಜೀ, ಸ್ವಚ್ಛತಾವನ್ನು ಜನಾಂದೋಲನವಾಗಿ ನಿರ್ಮಿಸುತ್ತಿರುವಾಗ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಶೌಚಾಲಯಕ್ಕಾಗಿ ಜನರಿಗೆ ತೆರಿಗೆ ವಿಧಿಸುತ್ತಿದೆ! ಅವರ ಕಾಲದಲ್ಲಿ ಉತ್ತಮ ನೈರ್ಮಲ್ಯವನ್ನು ಒದಗಿಸದಿರುವುದು ನಾಚಿಕೆಗೇಡಿನ ಸಂಗತಿ, ಆದರೆ ಈ ಕ್ರಮವು ದೇಶವನ್ನು ನಾಚಿಕೆಪಡಿಸುತ್ತದೆ! ಎಂದು ಹೇಳಿದ್ದಾರೆ.
ಏನಿದು ಆದೇಶ ?
ಸರಕಾರದಿಂದ ನೀರು ಒಳಚರಂಡಿ ವ್ಯವಸ್ಥೆ ಪಡೆದಿದ್ದರೆ ಮಾಸಿಕ ದರದ 30% ರಷ್ಟು ಒಳಚರಂಡಿ ಶುಲ್ಕ ಪಾವತಿಸಬೇಕು.ಒಳಚರಂಡಿ ಸಂಪರ್ಕ ಮಾತ್ರ ಪಡೆದಿದ್ದರೆ ಮನೆ/ಕಚೇರಿಯಲ್ಲಿರುವ ಪ್ರತಿ ಟಾಯ್ಲೆಟ್ ಗೆ 25 ರೂಪಾಯಿ ಶುಲ್ಕ ಕೊಡಬೇಕೆಂದು ಕಾಂಗ್ರೆಸ್ ಸರಕಾರದಿಂದ ಹೊಸ ಆದೇಶ ಹೊರಡಿಸಿತ್ತು.ಮಾಧ್ಯಮಗಳಿಗೆ ಅಧಿಸೂಚನೆ ಸೋರಿಕೆಯಾದಾಗ ಈ ವಿಷಯ ವಿವಾದವನ್ನು ಹುಟ್ಟುಹಾಕಿದ್ದು ಇದು ವ್ಯಾಪಕ ಊಹಾಪೋಹ ಮತ್ತು ರಾಜಕೀಯ ಟೀಕೆಗೆ ಕಾರಣವಾದ ಬಳಿಕ ಆದೇಶ ಹಿಮಪಡೆಯಲಾಯಿತೆಂದು ತಿಳಿದುಬಂದಿದೆ.