ಶಿಮ್ಲಾ: ರಾಜ್ಯವು ಆರ್ಥಿಕ ಬಿಕ್ಕಟ್ಟಿಗೆ ಒಳಗಾಗಿರುವ ಕಾರಣ ಎಲ್ಲಾ ರಾಜ್ಯ ಸಚಿವರು, ಮುಖ್ಯ ಸಂಸದೀಯ ಕಾರ್ಯದರ್ಶಿಗಳು (ಸಿಪಿಎಸ್) ಮತ್ತು ಕ್ಯಾಬಿನೆಟ್ ದರ್ಜೆಯ ಸದಸ್ಯರು ಎರಡು ತಿಂಗಳವರೆಗೆ ಸಂಬಳ ಮತ್ತು ಭತ್ಯೆಗಳನ್ನು ಪಡೆಯುವುದಿಲ್ಲ ಎಂದು ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಸುಖವಿಂದರ್ ಸಿಂಗ್ ಸುಖು ಗುರುವಾರ ರಾಜ್ಯ ವಿಧಾನಸಭೆಗೆ ತಿಳಿಸಿದ್ದಾರೆ.
ಸಚಿವ ಸಂಪುಟದಲ್ಲಿ ಚರ್ಚಿಸಿದ ನಂತರ, ಮುಂದಿನ ದಿನಗಳಲ್ಲಿ ರಾಜ್ಯವು ಉತ್ತಮ ಸುಧಾರಣೆ ಕಾಣುವವರೆಗೆ ನಾವು ಎರಡು ತಿಂಗಳವರೆಗೆ ಯಾವುದೇ ಸಂಬಳ ಅಥವಾ ಟಿಎ ಅಥವಾ ಡಿಎ ತೆಗೆದುಕೊಳ್ಳುವುದಿಲ್ಲ ಎಂದು ಸಂಪುಟದ ಎಲ್ಲಾ ಸದಸ್ಯರು ನಿರ್ಧರಿಸಿದರು,” ಎಂದು ಮುಖ್ಯಮಂತ್ರಿ ಹೇಳಿದರು.
ಹಿಮಾಚಲ ಪ್ರದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ಭಾರೀ ಸಾಲಗಳು, ಹೆಚ್ಚುತ್ತಿರುವ ಸಂಬಳ ಮತ್ತು ಪಿಂಚಣಿ ಬಜೆಟ್‌ಗಳು, ಕಡಿಮೆಯಾದ ಕೇಂದ್ರ ನೆರವು ಮತ್ತು ಅಸಮರ್ಪಕ ಆದಾಯ ಉತ್ಪಾದನೆಗೆ ಕಾರಣವಾಗಿದ್ದು ಹಳೆಯ ಪಿಂಚಣಿ ಯೋಜನೆ (OPS) ಪುನರುಜ್ಜೀವನ, ಮಹಿಳೆಯರಿಗೆ 1,500 ರೂ ಪಾವತಿಸುವ ಭರವಸೆ ಮತ್ತು ಉಚಿತ ವಿದ್ಯುತ್ ಮುಂತಾದ ಉಚಿತಗಳು ಹಿಮಾಚಲದಲ್ಲಿ 86,589 ಕೋಟಿ ರೂಪಾಯಿಗಳ ಬೃಹತ್ ಸಾಲದ ಅಡಿಯಲ್ಲಿ ಆರ್ಥಿಕ ಅವ್ಯವಸ್ಥೆಗೆ ಕಾರಣವಾಗಿವೆ ಎಂದು ತಿಳಿದಿದೆ.
ರಾಜ್ಯ ಸರ್ಕಾರ ಐದು ಲಕ್ಷ ಮಹಿಳೆಯರಿಗೆ ಮಾಸಿಕ 1500 ರೂ. ಸೇರಿದಂತೆ ಐದು ಚುನಾವಣಾ ಭರವಸೆಗಳನ್ನು ಜಾರಿಗೆ ತಂದಿದ್ದು, ವಾರ್ಷಿಕ ಅಂದಾಜು 800 ಕೋಟಿ ರೂ. ಹಳೆಯ ಪಿಂಚಣಿ ಯೋಜನೆಯ ಮರುಸ್ಥಾಪನೆಯಿಂದ 1.36 ಲಕ್ಷ ಉದ್ಯೋಗಿಗಳಿಗೆ ಲಾಭವಾಗಲಿದೆ ಮತ್ತು ಪ್ರತಿ ವರ್ಷ ಬೊಕ್ಕಸಕ್ಕೆ 1,000 ಕೋಟಿ ರೂ.ನಷ್ಟವಾಗಲಿದೆ.
ರಾಜ್ಯ ಸರಕಾರ ವೇತನಕ್ಕಾಗಿ 20,639 ಕೋಟಿ ರೂ. ಪಾವತಿ, ಪಿಂಚಣಿ ಮತ್ತು ಬಡ್ಡಿ ಪಾವತಿಗಳು 2023-24ರ ಒಟ್ಟು ಖರ್ಚಿನ 46.3 ಪ್ರತಿಶತವನ್ನು ಬಳಸುತ್ತವೆ. ರಾಜ್ಯದಲ್ಲಿ 1,89,466 ಪಿಂಚಣಿದಾರರಿದ್ದು, 2030-31ರ ವೇಳೆಗೆ ಇದು 2,38,827ಕ್ಕೆ ಏರಿಕೆಯಾಗುವ ನಿರೀಕ್ಷೆಯಿದೆ. ಇದರಿಂದ ವಾರ್ಷಿಕ ಪಿಂಚಣಿ ಹೊರೆ ಸುಮಾರು 20,000 ಕೋಟಿ ರೂ.ಯಾಗಿದೆ .
18 ರಿಂದ 60 ವರ್ಷ ವಯಸ್ಸಿನ ಮಹಿಳೆಯರಿಗೆ ಮಾಸಿಕ 1,500 ರೂಪಾಯಿ ನೀಡಲು ರಾಜ್ಯ ಸರ್ಕಾರ ಈ ವರ್ಷದ ಮಾರ್ಚ್‌ನಲ್ಲಿ ನಿರ್ಧರಿಸಿದ್ದು, ಇದು ವಾರ್ಷಿಕ 800 ಕೋಟಿ ರೂಪಾಯಿ ವೆಚ್ಚವಾಗಲಿದೆ ಮತ್ತು 5 ಲಕ್ಷಕ್ಕೂ ಹೆಚ್ಚು ಮಹಿಳಾ ಫಲಾನುಭವಿಗಳಿಗೆ ಪ್ರಯೋಜನವನ್ನು ನೀಡುತ್ತದೆ.
ಇದರೊಂದಿಗೆ 680 ಕೋಟಿ ರೂ.ಗಳ ರಾಜೀವ್ ಗಾಂಧಿ ಸ್ವಯಂ ಉದ್ಯೋಗ ಪ್ರಾರಂಭ ಯೋಜನೆಯಡಿ ಇ-ಟ್ಯಾಕ್ಸಿ ಯೋಜನೆ ಆರಂಭಿಸಲಾಗಿದೆ. ಖಾಲಿಯಾದ ಬೊಕ್ಕಸವು ಕೆಲವು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ. ಎರಡು ತಿಂಗಳ ಕಾಲ ಸಚಿವರ ವೇತನವನ್ನು ಮುಂದೂಡುವುದರ ಜೊತೆಗೆ, ಸರ್ಕಾರವು ಈ ವರ್ಷದ ಜುಲೈನಲ್ಲಿ ತೆರಿಗೆದಾರರಿಗೆ ವಿದ್ಯುತ್ ಸಬ್ಸಿಡಿಯನ್ನು ಹಿಂಪಡೆದಿತ್ತು. ಹಾಗಾಗಿ, ಈಗ ಬಿಪಿಎಲ್, ಐಆರ್‌ಡಿಪಿ ಮತ್ತು ದುರ್ಬಲ ವರ್ಗದ ಜನರಿಗೆ ಮಾತ್ರ ಈ ಸಬ್ಸಿಡಿ ಸಿಗಲಿದೆ. ವಿದ್ಯುತ್ ಸಬ್ಸಿಡಿಯಿಂದ 2023-24ರಲ್ಲಿ ರಾಜ್ಯ ವಿದ್ಯುತ್ ಮಂಡಳಿಗೆ 18,00 ಕೋಟಿ ರೂ.ಹೊರೆಬೀಳಲಿದೆ ಎಂದು ತಿಳಿಸಿದೆ.
ಈ ವೇಳೆ ಮಾತನಾಡಿದ ಸುಖು, ‘ರಾಜ್ಯದ ಆದಾಯ 2023-24ರಲ್ಲಿ 8,058 ಕೋಟಿ ರು. ಇತ್ತು. ಈ ಆರ್ಥಿಕ ಸಾಲಿನಲ್ಲಿ 1800 ಕೋಟಿ ರು.ನಷ್ಟು ತಗ್ಗಿದೆ. ಅಂದರೆ 6,258 ಕೋಟಿ ರು.ಗೆ ತಗ್ಗಿದೆ. ಇದಕ್ಕೆ ಕೇಂದ್ರ ಸರ್ಕಾರ ಕಾರಣ. ಕೇಂದ್ರವು 9,042 ಕೋಟಿ ರು. ವಿಕೋಪ ಪರಿಹಾರ ಹಣ ನೀಡಿಲ್ಲ. ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ನೌಕರರಿಂದ ಕಡಿತ ಮಾಡಿಕೊಂಡ 9200 ಕೋಟಿ ರು. ನಮ್ಮ ಪಾಲಿನ ಹಣವನ್ನು ಕೇಂದ್ರ ಸರ್ಕಾರ ಮರುಪಾವತಿ ಮಾಡಿಲ್ಲ. 2022ರ ಜೂನ್‌ನಿಂದ ಜಿಎಸ್‌ಟಿ ಹಣ ಮರುಪಾವತಿ ಮಾಡಿಲ್ಲ’ ಎಂದರು.ಅಲ್ಲದೆ, ಹಳೇ ಪಿಂಚಣಿ ಯೋಜನೆ ಜಾರಿ ಮಾಡಿದ ನಂತರ ರಾಜ್ಯದ ಸಾಲ 2000 ಕೋಟಿ ರು.ಗೆ ಏರಿದೆ ಎಂದು ಹೇಳಿದ್ದಾರೆ.