Sunday, March 15, 2026
Flats for sale
Homeರಾಜ್ಯಶಿಗ್ಗಾವಿ : ಹಾವೇರಿ ಬೈಕ್ ಅಪಘಾತದಲ್ಲಿ ಗಾಯಗೊಂಡ ಪಾದಚಾರಿ ಚಿಕಿತ್ಸೆ ಫಲಿಸದೆ ಸಾವು.

ಶಿಗ್ಗಾವಿ : ಹಾವೇರಿ ಬೈಕ್ ಅಪಘಾತದಲ್ಲಿ ಗಾಯಗೊಂಡ ಪಾದಚಾರಿ ಚಿಕಿತ್ಸೆ ಫಲಿಸದೆ ಸಾವು.

ಶಿಗ್ಗಾವಿ : ಪಟ್ಟಣದ ರಂಭಾಪೂರಿ ಕಾಲೇಜು ಎದುರಿಗೆ ರಾಷ್ಟೀಯ ಹೆದ್ದಾರಿ ೪೮ ರಲ್ಲಿ ಶುಕ್ರವಾರ ಮಧ್ಯಾಹ್ನ ಪಾದಚಾರಿಯ ಮೇಲೆ ಬೈಕ ಸವಾರ ವಾಹನ ಚಲಾಯಿಸಿದ್ದು ಆಸ್ಪತ್ರೆಗೆ ಸೇರಿದ್ದ ಟೆಲಿಕಾಂ ಉದ್ಯೋಗಿ ಚಿಕಿತ್ಸೆ ಫಲಿಸದೆ ರವಿವಾರ ಮೃತಪಟ್ಟ ಘಟನೆ ಪಟ್ಟಣದಲ್ಲಿ ಜರುಗಿದೆ.

ಹಾನಗಲ್ಲ ತಾಲೂಕಿ ಶಿವಪುರ ಗ್ರಾಮದ ಕಿರಣ ಅಶೋಕಗೌಡಾ ಪಾಟೀಲ ಎಂಬ ೨೩ ವರ್ಷದ ಟೆಲಿಕಾಂ ಉದ್ಯೋಗಿ ಮಧ್ಯಾಹ್ನ ೧ ಗಂಟೆಯ ಆಸುಪಾಸಿನಲ್ಲಿ ತನ್ನ ಕಂಪನಿಯ ವಾಹನದಿಂದ ಕೆಳಗಿಳಿದು ರಸ್ತೆ ದಾಟುತ್ತಿರುವಾಗ, ಸವಣೂರಿನ ಅಲ್ತಾಫ ನಜೀರ ಬಾಗವಾಲೆ ಎಂಬ ಬೈಕಸವಾರ ಹುಬ್ಬಳ್ಳಿ ಕಡೆಯಿಂದ ಹಾವೇರಿಕಡೆಗೆ ಬರುವ ಮಾರ್ಗದಲ್ಲಿ ರಾಂಗಸೈಡಿನಿಂದ ವೇಗವಾಗಿ ತನ್ನ ಬೈಕನ್ನು ಚಲಾಯಿಸಿಕೊಂಡುಬಂದು ನಿಯಂತ್ರಣ ತಪ್ಪಿ ಅಪಘಾತ ವೆಸಗಿದ್ದು, ದುರ್ದೈವಿ ಕಿರಣ ತೆಲೆಗೆ ಪೆಟ್ಟಾಗಿ ಆಸ್ಪತ್ರೆ ಸೇರಿದ್ದು, ಚಿಕಿತ್ಸೆ ಫಲಿಸದೆ ರವಿವಾರ ಮೃತಪಟ್ಟಿದ್ದಾನೆ.

ಶಿಗ್ಗಾವಿ ಪೊಲೀಸ್ ಠಾಣೆಯಲ್ಲಿ ಪ್ರಕರ್ಣ ದಾಖಲಾಗಿದ್ದು, ಪೊಲೀಸರು ಹಚ್ಚಿನ ತನಿಕೆ ಕೈಗೊಂಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular