ಶಿಗ್ಗಾವಿ : ತಾಲೂಕಿನ ಎಲ್ಲ ರೈತರ ತಮ್ಮಲ್ಲಿ ಬೆಳೆಸಾಲ ತೆಗೆದುಕೊಂಡಿದ್ದು ಇರುತ್ತದೆ. ಕೆಲವೊಂದಿಷ್ಟು ರೈತರು ಸರಿಯಾಗಿ ಮರೆಯಾಗದೇ ಬೆಳೆ ಬಾರದೆ ಇರುವುದರಿಂದ ಸಾಲವನ್ನು ಹಿಂದಿರುಗುತ್ತಿಲ್ಲಾ. ಆದಾಗ್ಯೂ ಕೂಡ ಈ ವರ್ಷ ಮಳೆ ಕೂಡಾ ಆಗದೇ ಬರಗಾಲ ಬಿದಿರುತ್ತದೆ. ಹೀಗಾಗಿ ರೈತರಿಗೆ ಬರುವಂತಹ ಪಿ.ಎಮ್.ಕಿಸಾನ ಯೋಜನ, ಗೃಹ ಲಕ್ಷ್ಮೀ ಯೋಜನೆ ಇರಬಹುದು, ವೃದ್ಧಾಪ್ಯ ವೇತನ, ಬೆಳೆ ಹಾನಿ, ವಿಧವಾ ವೇತನ ಹಾಗೂ ಸರಕಾರದಿಂದ ಬಂದಂತಹ ಯೋಜನೆಗಳ ರೈತರಿಗೆ ಯಾವುದೇ ತೊಂದರೆ ಮಾಡದಂತೆ ಅವರಿಗೆ ಬಂದಂತಹ ಹಣವನ್ನು ಅವರ ಖಾತೆಗೆ ತಂಟೆ ತಕರಾರು ಮಾಡಂತೆ ಜಮೆ ಮಾಡಬೇಕು. ಇಲಾಖೆಯಿಂದ ಸಾಲ ರೈತರು ಬೆಳೆ ಸಾಲ ತಾಳಲಾರದೆ ಮತ್ತು ಅವರಿಗೆ ಪಡೆ ಪಡೆ ಸಾಲ ಕೇಳುತ್ತಿದ್ದರಿಂದ ಈಗಾಗಲೆ ತಾಲೂಕಿನಲ್ಲಿ 2 ಜನರು ಆತ್ಮ ಹತ್ಯೆ ಮಾಡಿಕೊಂಡಿರುತ್ತಾರೆ ಎಂದು ತಿಳಿಸಿದ್ದಾರೆ.
ವಿ ಜಿ ಬ್ಯಾಂಕ್.ಎಸ್ ಬಿ ಐ ಬ್ಯಾಂಕ್. ಕೆನರಾ ಬ್ಯಾಂಕ್. ರಾಷ್ಟ್ರೀಕೃತ ಬ್ಯಾಂಕ್ ಮ್ಯಾನೇಜರ್ ಗೆ ಆದ್ದರಿಂದ ತಾವುಗಳು ಯಾವುದೇ ರೈತರಿಗೆ ತೊಂದರೆ ಮಾಡದಂತೆ ಅವರಿಗೆ ಬಂದಂತಹ ಪರಿಹಾರ ಹಣವನ್ನು ಅವರ ಖಾತೆಗೆ ಜಮೆ ಮಾಡಬೇಕು ಅಂತಾ ತಮ್ಮಲ್ಲಿ ಈ ಮೂಲಕ ವಿನಂತಿಸಿಕೊಳ್ಳುತ್ತೇವೆ ಅಂತಾ ಅವರಿಗೆ ಬೆಳೆ ಬಾರದೇ ಕಾರಣ ಅವರಿಗೆ ಬೆಳೆ ಸಾಲವನ್ನು ಸಹ ಕೊಡಿರಿ ಅಂತಾ ಅವರ ಮನೆಗೆ ಹೋಗಿ ತೊಂದರೆ ಕೊಡಬಾರದು ಅಂತಾ ತಮ್ಮಲ್ಲಿ ರೈತ ಸಂಘಟನೆಯ ಮುಖಂಡರು ವಿನಂತಿ ಮಾಡಿದ್ದಾರೆ .
ಈ ಸಂದರ್ಭದಲ್ಲಿ ಆನಂದ್ ಕೆಳಗಿನಮನಿ, ಶಂಕರ್ ಗೌಡ ಪಾಟೀಲ್, ಗಿರಿಧರ್ ಗೌಡ ಪಾಟೀಲ್. ಮಂಜುನಾಥ್ ಕಂಕನವಾಡ, ಅಶೋಕ್ ಮಡ್ಲಿ, ಹರೀಶ್ ಮೇಟಿ. ದಯಾನಂದ ಮೆಣಸಿನಕಾಯಿ. ಶೇಖಪ್ಪ ದಾಸಣ್ಣವರ. ಗಡಿಗೆಪ್ಪ ಗೌಡ ಪಾಟೀಲ್. ನಿಂಗನಗೌಡ ರಾಯನಗೌಡ. ಉಮೇಶ್ ಗಾಳಿಗೌಡ್ರ್ ಅನೇಕರು ಉಪಸ್ಥಿತರಿದ್ದರು.
ಈ ವರ್ಷ ಮಳೆ ಕೂಡಾ ಆಗದೇ ಬರಗಾಲ ಬಿದಿರುತ್ತದೆ ಹೀಗಾಗಿ ರೈತರಿಗೆ ಬರುವಂತಹ ಪಿ.ಎಮ್.ಕಿಸಾನ ಯೋಜನ, ಗೃಹ ಲಕ್ಷ್ಮೀ ಯೋಜನೆ ಇರಬಹುದು, ವೃದ್ಧಾಪ್ಯ ವೇತನ, ಬೆಳೆ ಹಾನಿ, ವಿಧವಾ ವೇತನ ಹಾಗೂ ಸರಕಾರದಿಂದ ಬಂದಂತಹ ಯೋಜನೆಗಳ ರೈತರಿಗೆ ಯಾವುದೇ ತೊಂದರೆ ಮಾಡದಂತೆ ಅವರಿಗೆ ಬಂದಂತಹ ಹಣವನ್ನು ಅವರ ಖಾತೆಗೆ ತಂಟೆ ತಕರಾರು ಮಾಡಂತೆ ಜಮೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ .