Thursday, March 12, 2026
Flats for sale
Homeರಾಜ್ಯಶಿಗ್ಗಾವಿ : ನಿನ್ನ`ಡಾಬಾ ಬಂತು ನೋಡು ಊಟ ಮಾಡುತ್ತೀಯಾ' ಎಂದು ಸತ್ತ ವ್ಯಕ್ತಿಯನ್ನು ಪತ್ನಿ ಗೋಳಾಡಿ...

ಶಿಗ್ಗಾವಿ : ನಿನ್ನ`ಡಾಬಾ ಬಂತು ನೋಡು ಊಟ ಮಾಡುತ್ತೀಯಾ’ ಎಂದು ಸತ್ತ ವ್ಯಕ್ತಿಯನ್ನು ಪತ್ನಿ ಗೋಳಾಡಿ ಕಣ್ಣೀರಿಟ್ಟಾಗ ಅಚ್ಚರಿ ರೀತಿಯಲ್ಲಿ ಎದ್ದು ಕುಳಿತ ಮೃತಪಟ್ಟ ವ್ಯಕ್ತಿ ..!

ಶಿಗ್ಗಾವಿ : ಆತ ಅನಾರೋಗ್ಯದಿಂದ ಬಳಲಿ ನಾಲ್ಕೈದು ದಿನ ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ. ಮೃತಪಟ್ಟಿದ್ದಾನೆಂದು ಆತನನ್ನು ಊರಿಗೆ ಕರೆತರಲಾಗುತ್ತಿತ್ತು. ಊರು ಸಮೀಪ ಬಂದಾಗ ಪತ್ನಿ ಗೋಳಾಡಿ ಅಳುತ್ತಿದ್ದಾಗ ಆತ ಎದ್ದು ಕುಳಿತು ಅಚ್ಚರಿ ಮೂಡಿಸಿದ ಘಟನೆ ತಾಲೂಕಿನ ಬಂಕಾಪುರದಲ್ಲಿ ನಡೆದಿದೆ.

ಬಂಕಾಪುರದ ಮಂಜುನಾಥ ನಗರದ ಬಿಷ್ಠಪ್ಪ ಅಶೋಕ ಗುಡಿಮನಿ (ಮಾಸ್ತರ್) ಎಂಬ 45 ವರ್ಷದ ವ್ಯಕ್ತಿ ಸತ್ತು ಬದುಕಿ ವಿಸ್ಮಯ ಮೂಡಿಸಿದ್ದಾರೆ. ಇವರು ಈಗ ಕಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಿಷ್ಠಪ್ಪ ಧಾರವಾಡ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಭಾನುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ಉಸಿರಾಟ ಇಲ್ಲದಿದ್ದಾಗ ವೈದ್ಯರು ಮೃತಪಟ್ಟಿದ್ದಾನೆ ಎಂದು ಹೇಳಿದ್ದಾರೆ. ಬಳಿಕ ಆತನ ಪತ್ನಿ ಶೀಲಾ, ಸಂಬಂಧಿಕರ ಜೊತೆಗೆ ಆಂಬುಲೆನ್ಸ್ನಲ್ಲಿ ಬಂಕಾಪುರಕ್ಕೆ ಕರೆದುಕೊಂಡು ಬರುತ್ತಿದ್ದಾಗ, ನಿನ್ನ `ಡಾಬಾ ಬಂತು ನೋಡು ಊಟ ಮಾಡುತ್ತೀಯಾ’ ಎಂದು ಪತ್ನಿ ಗೋಳಾಡಿ ಕಣ್ಣೀರಿಟ್ಟಾಗ ಮೃತ ವ್ಯಕ್ತಿ ಉಸಿರು ಬಿಟ್ಟಿದ್ದಾನೆ.

ಆಗ ಗಾಬರಿಯಾಗಿ ವಾಪಸ್ ಶಿಗ್ಗಾವಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ತಪಾಸಣೆ ಮಾಡಿದ ವೈದ್ಯರು ಬದುಕಿರುವದನ್ನು ದೃಢಪಡಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಕಿಮ್ಸ್ಗೆ ಕಳುಹಿಸಿದ್ದಾರೆ. ಬಿಷ್ಠಪ್ಪ ಮೃತಪಟ್ಟಿದ್ದಾರೆಂಬ ಸುದ್ದಿ ಹರಡುತ್ತಲೇ ಬಂಕಾಪುರದಲ್ಲಿ ಗ್ರಾಮಸ್ಥರು ಬ್ಯಾನರ್‌ಗಳನ್ನು ಹಾಕಿದ್ದಾರೆ. ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿಯೂ ಭಾವಪೂರ್ಣ ಶ್ರದ್ಧಾಂಜಲಿ ಫೋಟೋ ಮತ್ತು ಬ್ಯಾನರ್‌ಗಳು ಹರಿದಾಡಿವೆ. ಅಲ್ಲದೇ ಮೃತನ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದರು. ಸತ್ತ ವ್ಯಕ್ತಿ ಬದುಕುಳಿದ ಸುದ್ದಿ ಕೇಳಿ
`ಆಯುಷ್ಯ ಕೊಟ್ಟು ದೇವರು ಕಾಪಾಡಲಿ’ ಎಂಬ ಹಾರೈಕೆಗಳನ್ನು ಹರಿಬಿಡುತ್ತಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular