ಶಿಗ್ಗಾಂವಿ : ಉಳವಿಯ ಬಸವಣ್ಣನ ಜಾತ್ರೆ ಮುಗಿಸಿ ಮರಳಿ ಊರಿಗೆ ಬರುತ್ತಿದ್ದ ಯುವಕ ಎತ್ತಿನ ಬಂಡಿಯಿಂದ ಬಿದ್ದು ಮೃತಪಟ್ಟ ಘಟನೆ ಪಟ್ಟಣದ ಹೊರವಲಯದಲ್ಲಿ ಸೋಮವಾರ ನಡೆದಿದೆ.
ತಾಲೂಕಿನ ಚಿಕ್ಕಮಲ್ಲೂರ ಗ್ರಾಮದ ವಿಜೇತಗೌಡ ಗಾಳಿಗೌಡ್ರ (೨೪) ಯುವಕ ಸಂಗಡಿಗರೊಂದಿಗೆ ತನ್ನದೇ ಎತ್ತಿನ ಬಂಡಿಯೊಂದಿಗೆ ಉಳಿವಿಯ ಬಸವಣ್ಣನ ಜಾತ್ರೆಗೆ ತೆರಳಿದ್ದ.
ಜಾತ್ರೆ ಮುಗಿಸಿ ಊರಿಗೆ ಮರಳುವಾಗ ಶಿಗ್ಗಾವಿಯ ವಿರಕ್ತಮಠದ ದರ್ಶನ ಪಡೆದು ನಂತರ ಗಂಜಿಗಟ್ಟಿಯ ಚರಮೂರ್ತೇಶ್ವರ ಮಠಕ್ಕೆ ಹೊರಡುವ ಸಂದರ್ಭದಲ್ಲಿ ಬಂಡಿಯಿಂದ ಮುಗುಚಿ ಬಿದ್ದು ಮೃತಪಟ್ಟಿದ್ದಾನೆ. ಶಿಗ್ಗಾಂವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


