ಶಬರಿಮಲೆ : ವಾರ್ಷಿಕ ಮಂಡಲ ಮಕರವಿಳಕ್ಕು ಮಹೋತ್ಸವಕ್ಕೆ ತೆರೆಬಿದ್ದಿದ್ದು, ಈ ಹಿನ್ನೆಲೆಯಲ್ಲಿ ಅಯ್ಯಪ್ಪ ದೇಗುಲ ಇಂದಿನಿಂದ ಮುಚ್ಚಲಾಗಿದೆ.
ಈ ಕುರಿತು ಟ್ರಾವಂಕೂರ್ ದೇವಸಂ ಮಂಡಳಿ ಮಾಹಿತಿ ನೀಡಿದೆ. ಪಂದಳ ರಾಜಕುಟುಂಬ ಪ್ರತಿನಿಧಿ ತ್ರಿಕ್ಕೇಟನಲ್ ರಾಜಶರ್ಮ ಅಯ್ಯಪ್ಪನ ದರ್ಶನ ಪಡೆದ ಬಳಿಕ ಇಂದು ಬೆಳಿಗ್ಗೆ ದೇವಾಲಯದ ಬಾಗಿಲನ್ನು ಮುಚ್ಚಲಾಯಿತು. ಮುಂಜಾನೆ ಐದು ಗಂಟೆಯಲ್ಲಿ ಗಣಪತಿ ಹೋಮ ನಡೆಸಲಾಯಿತು. ಮೇಲ್ ಶಾಂತಿ ಅರುಣ್ ಕುಮಾರ್ ನಂಬೂದರಿಯವರು ರುದ್ರಾಕ್ಷಿ ಮಾಲೆ ಧರಿಸಿ ಯೋಗದಂಡ ಕೈಯಲ್ಲಿ ಹಿಡಿದು ವಿಭೂತಿ ಅಭಿಷೇಕ ನೆರವೇರಿಸಿದರು.
ಇದಾದ ನಂತರ ಹರಿವರಾಸನಮ್ ಪಠಿಸಿ ದೀಪವಾರಿಸಿ, ದೇವಾಲಯದ ಬಾಗಿಲನ್ನು ಮುಚ್ಚಲಾಯಿತು ಎಂದಿ ಪ್ರಕಟಣೆ ತಿಳಿಸಿದೆ. ಇದೇ ವೇಳೆ ಕೀಲಿ ಕೈಗಳನ್ನು ರಾಜಮನೆತನಕ್ಕೆ ಹಸ್ತಾಂತರಿಸಲಾಯಿತು. 2024-25 ನೇ ಸಾಲಿನಲ್ಲಿ ಶಬರಿಮಲೆಗೆ ಭಕ್ತರ ದಂಡೇ ಹರಿದುಬAದಿದೆ. ಈ ಬಾರಿ 53 ಲಕ್ಷ ಭಕ್ತರು ಅಯ್ಯಪ್ಪನ ಸನ್ನಿಧಿಗೆ ಭೇಟಿ ನೀಡಿದ್ದಾರೆ.