Sunday, March 15, 2026
Flats for sale
Homeದೇಶವಿಶಾಖಪಟ್ಟಣಂ : ವಿಜಯನಗರಂ ರೈಲು ಅಪಘಾತದಲ್ಲಿ ಸತ್ತವರ ಸಂಖ್ಯೆ 15 ಕ್ಕೆ ಏರಿಕೆ.

ವಿಶಾಖಪಟ್ಟಣಂ : ವಿಜಯನಗರಂ ರೈಲು ಅಪಘಾತದಲ್ಲಿ ಸತ್ತವರ ಸಂಖ್ಯೆ 15 ಕ್ಕೆ ಏರಿಕೆ.

ವಿಶಾಖಪಟ್ಟಣಂ : ಭಾನುವಾರ ರಾತ್ರಿ ಆಂಧ್ರಪ್ರದೇಶದ ವಿಜಯನಗರಂ ಜಿಲ್ಲೆಯಲ್ಲಿ ಹೌರಾ-ಚೆನ್ನೈ ಮಾರ್ಗದಲ್ಲಿ ನಡೆದ ರೈಲು ಅಪಘಾತದಲ್ಲಿ ಸತ್ತವರ ಸಂಖ್ಯೆ 15ಕ್ಕೆ ಏರಿದೆ. ಹದಿಮೂರು ಜನ ಅಪಘಾತ ನಡೆದ ಸ್ಥಳದಲ್ಲೇ ಮೃತಪಟ್ಟಿದ್ದು, ಇನ್ನೊಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ಗಾಯಗೊಂಡ 50 ಜನರನ್ನು ವಿಶಾಖಪಟ್ಟಣಂ ಮತ್ತು ವಿಜಯನಗರಂಗಳಲ್ಲಿನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಈ ಪೈಕಿ ೨೯ ಜನ ಇನ್ನೂ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರು ಬಿಡುಗಡೆಯಾಗಿದ್ದಾರೆ.

ಪಲಾಸಾ ರೈಲಿನ ಗಾರ್ಡ್ ಮತ್ತು ರಾಯಗಢ ರೈಲಿನ ಲೋಕೋಪೈಲಟ್‌ಗಳು ಕೂಡ ದುರಂತದಲ್ಲಿ ಬಲಿಯಾಗಿದ್ದಾರೆ. ನಿಂತಿದ್ದ ಪಲಾಸಾ ಪ್ಯಾಸೆಂಜರ್‌ನ ಮೂರು ಬೋಗಿಗಳು ಮತ್ತು ಡಿಕ್ಕಿ ಹೊಡೆದ ರಾಯಗಢ ಪ್ಯಾಸೆಂಜರ್‌ನ ಎರಡು ಬೋಗಿಗಳು ಹಾಗೂ ಲೋಕೋಮೋಟಿವ್ ಹಳಿ ತಪ್ಪಿತ್ತು. ಮಾರ್ಗದಲ್ಲಿ ಮತ್ತೆ ರೈಲು ಸಂಚಾರ ಆರಂಭಿಸಲು ಸತತ ಪರಿಹಾರ ಕಾರ್ಯ ನಡೆಸಿದ್ದು, ಕೊಲ್ಕತಾ ಕಡೆಯ ಮಾರ್ಗವನ್ನು ಈಗಾಗಲೇ ಸುಸ್ಥಿತಿಗೆ ತರಲಾಗಿದೆ. ವಿಶಾಖಪಟ್ಟಣಂ ಕಡೆಯ ಮಾರ್ಗವನ್ನು ಸರಿಪಡಿಸಲಾಗುತ್ತಿದೆ.

ಘಟನೆಯಲ್ಲಿ ಮೃತಪಟ್ಟ ಆಂಧ್ರಪ್ರದೇಶದ ಪ್ರಯಾಣಿಕರ ಕುಟುಂಬಗಳಿಗೆ 10 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 2 ಲಕ್ಷ ರೂ. ಪರಿಹಾರವನ್ನು ಮುಖ್ಯಮಂತ್ರಿ ಜಗನ್ ಪ್ರಕಟಿಸಿದ್ದಾರೆ.

ಚಾಲಕ ಹೊಣೆ: ಸಿಗ್ನಲ್ ಇದ್ದರೂ ರಾಯಗಢ ಪ್ಯಾಸೆಂಜರ್ ರೈಲು ಅದನ್ನು ದಾಟಿಕೊಂಡು ಬಂದಿದೆ. ಅಪಘಾತಕ್ಕೆ ಇದೇ ಕಾರಣ ಎಂದು ಪ್ರಾಥಮಿಕ ವರದಿ ತಿಳಿಸಿದೆ. ಇದಕ್ಕೆ ಕಾರಣವಾದ ಲೋಕೋ ಪೈಲಟ್ ಮತ್ತು ಸಹಾಯಕ ಲೋಕೋ ಪೈಲಟ್ ಇಬ್ಬರೂ ಘಟನೆಯಲ್ಲಿ ಮೃತಪಟ್ಟಿದ್ದಾರೆ. –

ಅಪಘಾತ ಸ್ಥಳಕ್ಕೆ ಭೇಟಿ, ಲಭ್ಯವಿರುವ ಸಾಕ್ಷö್ಯ, ಸ್ಪೀಡೋಮೀಟರ್ಚಾ ರ್ಟ್, ಡೇಟಾ ಲಾಗರ್ ರಿಪೋರ್ಟ್ಗಳ ಆಧಾರದ ಮೇಲೆ ಪ್ರಾಥಮಿಕ ವರದಿ ಸಿದ್ಧಪಡಿಸಲಾಗಿದ್ದು, ಇದಕ್ಕೆ ಏಳು ಅಧಿಕಾರಿಗಳು ಸಹಿ ಹಾಕಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular