ವಿದಿಶಾ : ಮಧ್ಯಪ್ರದೇಶದ ವಿದಿಶಾ ಜಿಲ್ಲೆಯ ಮದುವೆ ಮಂಟಪದಲ್ಲಿ ನಡೆದ ಮಹಿಳಾ ಸಂಗೀತ ಕಾರ್ಯಕ್ರಮದ ಸಂದರ್ಭದಲ್ಲಿ ವೇದಿಕೆಯಲ್ಲಿ ನೃತ್ಯ ಮಾಡುತ್ತಿದ್ದ 23 ವರ್ಷದ ಯುವತಿಯೊಬ್ಬಳು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ತಕ್ಷಣವೇ ಮದುವೆಯಲ್ಲಿ ಹಾಜರಿದ್ದ ವೈದ್ಯರು ಆಕೆಗೆ ಸಿಪಿಆರ್ ನೀಡಲು ಪ್ರಯತ್ನಿಸಿದ್ದಾರೆ.ಆದರೆ ಅದು ಫಲಕಾರಿಯಾಗದೆ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ, ಆದರೆ ಯುವತಿಯ ಪ್ರಾಣ ವೇದಿಕೆಯಲ್ಲಿ ಹೃದಯಾಘಾತವಾಗಿ ಬಿದ್ದಾಗಲೇ ಸಾವಾಗಿದೆ ಎಂದು ವೈದ್ಯರು ಖಚಿತಪಡಿಸಿದ್ದಾರೆ.
ಮೃತಪಟ್ಟ ಯುವತಿಯನ್ನು ಇಂದೋರ್ ನಿವಾಸಿ ಪರಿಣಿತಾ ಎಂದು ಗುರುತಿಸಲಾಗಿದೆ. ಗುಣ ಜಿಲ್ಲೆಯ ರಾಘೋಗಢ ನಿವಾಸಿಯಾದ ಅವರು, ತಮ್ಮ ಮಾವನ ಮಗಳ ಮದುವೆಗೆ ಪಾಲ್ಗೊಳ್ಳಲು ವಧುವಿನ ಕಡೆಯವರೊಂದಿಗೆ ವಿದಿಶಾಗೆ ಬಂದಿದ್ದಾಳೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೇಗವಾಗಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದವರೆಲ್ಲರಿಗೂ ಆಶ್ಚರ್ಯವಾಗಿದೆ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಈ ವಿಡಿಯೋ ನಿನ್ನೆ ಬೆಳಕಿಗೆ ಬಂದಿದೆ.
ಪರಿಣಿತಾಗೆ ಒಬ್ಬ ತಮ್ಮನಿದ್ದ, ಅವನು ಸಹ 12 ನೇ ವಯಸ್ಸಿನಲ್ಲಿ ಸೈಕಲ್ ಸವಾರಿ ಮಾಡುವಾಗ ಹೃದಯಾಘಾತದಿಂದ ಮರಣ ಹೊಂದಿದ್ದಾಳೆ ಎನ್ನಲಾಗಿದೆ. ಈ ಘಟನೆಯಿಂದ ಪಾಠ ಕಲಿತ ನಂತರ, ಅನೇಕರು ನಮ್ಮ ಸ್ಥಳದಲ್ಲಿ ನಡೆಯುವ ಮದುವೆಗಳು ಮತ್ತು ಇತರ ಕಾರ್ಯಕ್ರಮಗಳಲ್ಲಿ ನಾವು ಇನ್ನು ಮುಂದೆ ಪೂರ್ಣ ಪ್ರಮಾಣದ ಡಿಜೆ ಸಂಗೀತ, ಹೊಗೆ ಮತ್ತು ಪಟಾಕಿಗಳನ್ನು ಬಳಸುವುದಿಲ್ಲ ಎಂದು ಹೇಳಿದ್ದಾರೆ.
ವೀಡಿಯೊದಲ್ಲಿ ಪರಿಣಿತಾ ವೇದಿಕೆಯ ಮೇಲೆ ಹಾಡಿಗೆ ನೃತ್ಯ ಮಾಡುವುದನ್ನು ತೋರಿಸಲಾಗಿದೆ. ಈ ಸಮಯದಲ್ಲಿ ಲಹರಾ ಕೆ ಬಾಲ್ಕಾ ಕೆ…ಹಾಡು ಪ್ಲೇ ಆಗುತ್ತದೆ. ಈ ಹಾಡಿಗೆ ಯುವತಿ ನೃತ್ಯ ಹೆಜ್ಜೆಗಳನ್ನು ಹಾಕುವಾಗ ಇದ್ದಕ್ಕಿದ್ದಂತೆ ನಿಂತಿರುವ ಹಾಗೆ ವೇದಿಕೆಯ ಮೇಲೆ ಮುಖ ಕೆಳಗೆ ಮಾಡಿ ಬಿದ್ದಿದ್ದಾಳೆ.ನೃತ್ಯ ಮಾಡುವಾಗ ಹೃದಯಾಘಾತವಾಗಿದೆ, ಇದರಿಂದಾಗಿ ಯುವತಿ ವೇದಿಕೆಯ ಮೇಲೆ ಬಿದ್ದು ಸಾವನ್ನಪ್ಪಿದ್ದಾಳೆ ಎಂದು ಶಂಕಿಸಲಾಗಿದೆ.
ಯುವತಿ ಸಾವಿನಿಂದಾಗಿ ಮದುವೆಯ ಸಂತೋಷ ಸಂಭ್ರಮ ಶೋಕಕ್ಕೆ ತಿರುಗಿದೆ. ನಿಗದಿಯಾಗಿದ್ದ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗಿದೆ. ಅವರ ಎಲ್ಲಾ ಸಂಬAಧಿಕರು ವಿದಿಶಾದಲ್ಲಿ ಇದ್ದುದರಿಂದ, ಪರಿಣಿತಾ ಅಂತ್ಯಕ್ರಿಯೆಯನ್ನು ಅಲ್ಲಿಯೇ ನಡೆಸಲಾಗಿದೆ.