ವಿಟ್ಲ : ಜೂಜಾಟದ ಪ್ರಕರಣದ ಆರೋಪಿಯಿಂದ ನಗದು ಬೇಡಿಕೆ ಇಟ್ಟ ಆರೋಪದ ಮೇಲೆ ವಿಟ್ಲ ಎಸ್ಐ ಕೌಶಿಕ್ ಬಿ.ಸಿ. ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಾನತುಗೊಳಿಸಿದ್ದಾರೆ.
ಜೂಜಾಟ ಚಟುವಟಿಕೆ ನಡೆಯುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಎಸ್ಐ ದಾಳಿ ನಡೆಸಿದ್ದರು. ಆದರೆ ಜೂಜಾಟದಲ್ಲಿ ತೊಡಗಿದ್ದವರು ಪರಾರಿಯಾಗಿದ್ದರು. ಪೊಲೀಸರು ಸ್ಥಳದಿಂದ ಒಂದು ಬೈಕ್ ವಶಪಡಿಸಿಕೊಂಡಿದ್ದರು. ನಂತರ ಎಸ್ಐ ಬೈಕ್ ಮಾಲೀಕರನ್ನು ಠಾಣೆಗೆ ಕರೆಸಿ ಮೂರನೇ ವ್ಯಕ್ತಿಯ ಮೂಲಕ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎಂದು ವರದಿಯಾಗಿದೆ. ಎಸ್ಐ ಹಾಗೂ ಆರೋಪಿಯ ಸಂಭಾಷಣೆ ವೈರಲ್ ಆಗಿದ್ದು ಪೊಲೀಸರು ಈ ರೀತಿಯಲ್ಲೂ ಭ್ರಷ್ಟರಾಗಿದ್ದರೆಂಬುದು ಶೋಚನೀಯ. ಪ್ರತಿ ಎಫ್.ಐ .ಆರ್ ಗೆ 2000 ಪಡೆಯುತ್ತಿರುವುದು ತಿಳಿದ ವಿಚಾರ ಆದರೆ ಇತ್ತಿಚ್ಚೆಗೆ ಭ್ರಷ್ಟ ರಾಜಕಾರಣಿಗಳಿಗೆ ಹಣ ಕೊಟ್ಟು ಪೊಲೀಸರು ವರಾಗವನೇ ಮಾಡುತ್ತಿರುವುದರಿಂದ ರಾಜಕಾರಣಿಗಳಿಕೆ ಕೊಟ್ಟ ಹಣವನ್ನು ಮರಳಿ ಪಡೆಯಲು ಈ ರೀತಿ ಮಾಡುತ್ತಿದ್ದಾರೆಂದು ನಿವೃತ್ತಿ ಹೊಂದಿದ್ದ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.ಆದರೆ ಇಲಾಖಾ ಶಿಸ್ತು ಕ್ರಮ ಕೈಗೊಳ್ಳುವವರೆಗೆ ಎಸ್ಪಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆಂದು ಮಾಹಿತಿ ದೊರೆತಿದೆ.


