ವಿಟ್ಲ ; ಸಾಮಾಜಿಕಜಾಲತಾಣದಲ್ಲಿ ವೈರಲ್ ಆದ ವಿಡಿಯೋ ಇದೀಗ ಪ್ರಕರಣ ದಾಖಲಿಸುವ ಮೂಲಕ ವಿಕೃತಿ ಮೆರೆದ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮೇಲೆ ಪ್ರಕರಣ ದಾಖಲಾಗಿದೆ. ತೋಟದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ತನ್ನ ಮನೆಗೆ ಬರುವ ದಾರಿಯಲ್ಲಿ ಯಾರೋ ಕೆಲಸ ಮಾಡುವ ಶಬ್ದ ಕೇಳಿದ ಹಿನ್ನೆಲೆ ಸ್ಥಳಕ್ಕೆ ತೆರಳಿ ವಿಡಿಯೋ ಮಾಡಿದ್ದಾರೆ. ಇದನ್ನು ನೋಡಿದ ಆರೋಪಿ ಪದ್ಮನಾಭ ತಾನು ಧರಿಸಿದ್ದ ಚಡ್ಡಿ ಜಾರಿಸಿ ಗುಪ್ತಾಂಗ ತೋರಿಸುವ ವಿಕೃತಿ ಮೆರೆದಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಇಡ್ಕಿದು ಗ್ರಾಮದ ಕೊಪ್ಪ ಎಂಬಲ್ಲಿ ಮನೆಗೆ ಹೋಗುವ ರಸ್ತೆಯಲ್ಲಿ ಗೇಟ್‌ಗೆ ಬೀಗ ಹಾಕುವ ಸಂದರ್ಭ ವಿಚಾರಿಸಲು ಬಂದ ಮಹಿಳೆಗೆ ಅಸಭ್ಯ ವರ್ತನೆ ತೋರಿಸಿ ವಿಕೃತಿ ಮೆರೆದ ಘಟನೆ ನಡೆದಿದೆ.
ಆರೋಪಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪದ್ಮನಾಭ ಸಪಲ್ಯ ಎಂದು ತಿಳಿದಿದ್ದು . ಈತ ಮಹಿಳೆಗೆ ಚಡ್ಡಿ ಜಾರಿಸಿ ಗುಪ್ತಾಂಗ ತೋರಿಸಿರುವ ಘಟನೆ ನಡೆದ ಪ್ರಕರಣಕ್ಕೆ ಪೊಲೀಸರು ದೂರು ದಾಖಲಿಸಿದ್ದಾರೆ.ಈ ಕುರಿತು ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆ BNS 2023 u/s 79 ರಂತೆ ಪ್ರಕರಣ ದಾಖಲಾಗಿದ್ದು ಪ್ರಕರಣದ ತನಿಖೆ ನಡೆಯುತ್ತಿದೆ.