Saturday, March 7, 2026
Flats for sale
Homeಜಿಲ್ಲೆವಿಟ್ಲ : ಅಪ್ರಾಪ್ತೆಯ ಮೇಲೆ ಐವರು ಯುವಕರಿಂದ ಅತ್ಯಾಚಾರ. ಕೇರಳ ಮೂಲದ ಐವರು ಯುವಕರ ಮೇಲೆ...

ವಿಟ್ಲ : ಅಪ್ರಾಪ್ತೆಯ ಮೇಲೆ ಐವರು ಯುವಕರಿಂದ ಅತ್ಯಾಚಾರ. ಕೇರಳ ಮೂಲದ ಐವರು ಯುವಕರ ಮೇಲೆ ಪೊಕ್ಸೋ ಪ್ರಕರಣ ದಾಖಲು.

ವಿಟ್ಲ : ಎಸ್.ಟಿ ಸಮುದಾಯದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಆಕೆಯ ಮೇಲೆ ಬೇರೆ ಬೇರೆ ಸಮಯಗಳಲ್ಲಿ ಐವರು ಅತ್ಯಾಚಾರ ನಡೆಸಿದ ಬಗ್ಗೆ ಬಂಟ್ವಾಳ ತಾಲೂಕಿನ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಂಟ್ವಾಳ ತಾಲೂಕಿನ ವಿಟ್ಲ ಸಮೀಪದ ಪೆರುವಾಯಿ ಗ್ರಾಮದ ೧೬ ವರ್ಷ ಪ್ರಾಯದ ಎಸ್. ಟಿ. ಸಮೂದಾಯದ ಬಾಲಕಿ ಮೇಲೆ ಕೇರಳ ಭಾಗದ ಐದು ಯುವಕರಿಂದ ಹಲವು ಸಮಯದಿಂದ ನಿರಂತರ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಹೇಳಲಾಗಿದೆ. ಪೆರುವಾಯಿ ಕರ್ನಾಟಕ ಹಾಗೂ ಕೇರಳದ ಗಡಿ ಗ್ರಾಮವಾಗಿದ್ದು, ಕೇರಳದ ಹಿಂದೂ ಸಂಘಟನೆಯಲ್ಲಿ ಗುರುತಿಸಿಕೊಂಡ ಯುವಕರು ಈ ಕೃತ್ಯ ಎಸೆಗಿದ್ದಾರೆ. ಆಗಾಗೆ ಪೆರುವಾಯಿ ಗ್ರಾಮಕ್ಕೆ ಬರುತ್ತಿದ್ದ ಆರೋಪಿಗಳು ಸ್ಥಳಿಯ ಅಪ್ರಾಪ್ತ ಯುವತಿಯ ಸ್ನೇಹ ಬೆಳೆಸಿದ್ದರು. ಸ್ನೇಹದ ಸಲುಗೆಯಿಂದ ಯುವತಿಯನ್ನು ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿದ್ದರು. ಶನಿವಾರ ಈಕೆಯ ನಡುವಳಿಕೆ ಬಗ್ಗೆ ಪೋಷಕರು ಗಮನಿಸಿ ವಿಚಾರಿಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.

ಶನಿವಾರ ವಿಟ್ಲ ಠಾಣೆಗೆ ಆಗಮಿಸಿದ ಪೋಷಕರು ಕೇರಳ ಮೂಲದ ಐವರು ಯುವಕರ ಮೇಲೆ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ವಿಟ್ಲ ಠಾಣೆಯಲ್ಲಿ ಪೊಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

Most Popular