ವಿಜಯಪುರ : ಇತ್ತಿಚ್ಚಿನ ದಿನಗಳಲ್ಲಿ ಇಲೆಕ್ಟ್ರಿಕ್ ಬೈಕ್ ಗಳು ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿಯುವ ಘಟನೆಗಳು ಆಗಾಗ್ಗ ಬೆಳಕಿಗೆ ಬರುತ್ತಿವೆ. ಈ ನಡುವೆ ವಿಜಯಪುರದ ನಗರದ ಇಟ್ಟಂಗಿಹಾಳ ರಸ್ತೆಯಲ್ಲಿ ಓಲಾ ಬೈಕ್ ಸುಟ್ಟು ಕರಕಲಾದ ಘಟನೆ ನಡೆದಿದೆ.
ಇಟ್ಟಿಂಗಿಹಾಳ ನಿವಾಸಿ ಊಗೆಪ್ಪ ಮುಚ್ಚಂಡಿ ಎಂಬುವರಿಗೆ ಸೇರಿದ ಓಲಾ ಬೈಕ್ ಇದಾಗಿದ್ದು ಬೈಕ್ ಹೊತ್ತಿ ಉರಿಯೋ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇತ್ತೀಚೆಗಷ್ಟೆ ಊಗೆಪ್ಪ ಓಲಾ ಎಲೆಕ್ಟ್ರಿಕ್ ಬೈಕ್ ಖರೀದಿಸಿದ್ದರು. ಇಂದು ಬೈಕ್ ನ ಬ್ಯಾಟರಿ ಭಾಗದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಬೈಕ್ ಹೊತ್ತಿ ಉರಿದು ಹೋಗಿದೆ.ಮಾರುಕಟ್ಟೆಗೆ ಬರುವ ಓಲಾ ಹಾಗೂ ಇನ್ನಿತರ ಕಳಪೆ ಮಟ್ಟದ ಸ್ಕೂಟರ್ ಗಳ ಸರ್ವಿಸ್ ನಲ್ಲಿ ಸರಿಯಾಗದೆ ಇರುವುದು ಹಾಗೂ ಶೋ ರೂಮ್ ಮಾಲೀಕರು ಸರಿಯಾಗಿ ಸ್ಪಂದನೆ ನೀಡದೆ ಇರುವುದು ಇದಕ್ಕೆ ಕಾರಣವೆಂದು ವಾಹನ ಸವಾರರೊಬ್ಬಬರು ತಿಳಿಸಿದ್ದಾರೆ ಅದರಿಂದ ಇಂತಹ ವಾಹನಗಳು ಮಾರುಕಟ್ಟೆಗೆ ಬರದಂತೆ ಕಡಿವಾಣ ಹಾಕಬೇಕೆಂದು ಅನೇಕ ಎಲೆಕ್ಟ್ರಿಕ್ ಸ್ಕೂಟರ್ ಮಾಲೀಕರು ಸರಕಾರಕ್ಕೆ ಮನವಿಮಾಡಿದ್ದಾರೆ.