ಕಲಬುರಗಿ : ಕೊಳವೆ ಬಾವಿ ತೊರೆದವರಿಗೆ ಮುಚ್ಚಿಡುವಷ್ಟು ಸಮಯವಿಲ್ಲವೆಂದರೆ ಇದು ನಮ್ಮ ಕಾನೂನಿನ ವೈಫಲ್ಯ ಎನ್ನಬಹುದು,ಕೊಳವೆ ಬಾವಿಯ ಒಳಗೆ ಬಿದ್ದ ನಂತರ ವ್ಯಥೆಪಡುವ ಬದಲು ಅರ್ಧಂಬರ್ಧ ತೋಡಿ ಹೋಗುವವರಿಗೆ ಕಠೀಣ ಶಿಕ್ಷೆ ವಿಧಿಸಿದರೆ ಇಂತಹ ರಕ್ಷಣಾ ಕಾರ್ಯಾಚರಣೆಯ ಅಗತ್ಯವಿರುವುದಿಲ್ಲ.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಎರಡು ವರ್ಷದ ಗಂಡು ಮಗು ಸಾತ್ವಿಕ್ ತೆರೆದ ಕೊಳವೆ ಬಾವಿಗೆ ಬಿದ್ದ ಘಟನೆ ವರದಿಯಾಗಿದೆ.ರಾಜ್ಯದಲ್ಲಿ ಮತ್ತೊಮ್ಮೆ ಕೊಳವೆ ಬಾವಿ ದುರಂತ ಸಂಭವಿಸಿದ್ದುವಿಜಯಪುರದ ಇಂಡಿಯಲ್ಲಿ ತಕ್ಷಣವೇ ಜೆಸಿಬಿ ಮೂಲಕ ರಕ್ಷಣಾ ಕಾರ್ಯಾಚರಣೆ ಆರಂಭವಾಗಿದೆ. 16 ಅಡಿ ಅಳದಲ್ಲಿ ಮಗು ಸಿಲುಕಿಕೊಂಡಿದ್ದು ಮಗುವಿನ ಆರೋಗ್ಯಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಇಂಡಿ ಗ್ರಾಮಾಂತರ ಠಾಣೆಯ ಪೊಲೀಸರು, ಅಗ್ನಿ ಶಾಮಕ ದಳ, ತಾಲೂಕು ಆಡಳಿತಾಧಿರಿಗಳು ದೌಡಾಯಿಸಿದ್ದು, ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿದ್ದಾರೆ.ನಿನ್ನೆ(ಏಪ್ರಿಲ್ -02) ಜಮೀನಿನಲ್ಲಿ ಶಂಕರಪ್ಪ ಮುಜಗೊಂಡ ಬೋರ್ವೆಲ್ ಕೊರೆಸಿದ್ದರು. ಸುಮಾರು 500 ಅಡಿ ಆಳ ಕೊರೆಸಲಾಗಿತ್ತು. ಆದ್ರೆ, ನೀರು ಬಾರದ ಕಾರಣ ಮುಚ್ಚದೆ ಹಾಗೆಯೇ ಬಿಟ್ಟಿದ್ದ. ಇದೀಗ ಶಂಕರಪ್ಪ ಮುಜಗೊಂಡ ಮೊಮ್ಮಗ ಸಾತ್ವಿಕ್ ಕೊಳವೆ ಬಾವಿಗೆ ಬಿದ್ದಿದ್ದಾನೆ. ಸುಮಾರು 15ರಿಂದ 20 ಅಡಿ ಆಳದಲ್ಲಿ ಸಿಲುಕಿರಬಹುದು ಎಂದು ಅಂದಾಜಿಸಲಾಗಿದ್ದು, ಇದೀಗ ಆ್ಯಕ್ಸಿಜನ್ ವ್ಯವಸ್ಥೆ ಮಾಡಲಾಗಿದ್ದು ಸಾತ್ವಿಕ್ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.


