ವಿಜಯಪುರ : ಸರಕಾರ ಪೊಲೀಸರಿಗೆ ಇಂತಿಷ್ಟು ಕೇಸ್ ಹಾಕುವ ಹಾಗೆ ಟಾರ್ಗೆಟ್ ನೀಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರ. ಇತ್ತೀಚಿನ ದಿನಗಳಲ್ಲಿ ಅಲ್ಲಲ್ಲಿ ಟ್ರಾಫಿಕ್ ಪೊಲೀಸರು ಜನಸಾಮಾನ್ಯರಿಗೆ ಉಪಟಳ ನೀಡುತ್ತಿರುವುದು ಕಂಡುಬರುತ್ತಿದೆ. ಓವರ್ ಸ್ಪೀಡ್ ಡ್ರೈವಿಂಗ್ ವಿಚಾರದಲ್ಲಿ ಟ್ರಾಫಿಕ್ ಪಿಎಸ್‌ಐ ನಿಖಿಲ್ ಕಾಂಬ್ಳೆ ಹಾಗೂ ಕಾರು ಚಾಲಕನ ನಡುವೆ ಗಲಾಟೆ ಆದ ಘಟನೆ ವಿಜಯಪುರ ನಗರದ ಬೇಗಂ ತಲಾಬ್ ರಸ್ತೆಯಲ್ಲಿ ನಡೆದಿದೆ.
ಜನಸಾಮಾನ್ಯರು ಅವರವರ ಜೀವನದ ಬಗ್ಗೆ ತಲೆಕೆಡಿಸಿಕೊಂಡು ಹೋಗುತ್ತಿರುವ ಸಂದರ್ಭದಲ್ಲಿ ಹೆಚ್ಚಾಗಿ ಈ ಟ್ರಾಫಿಕ್ ಪೊಲೀಸರು ಪ್ರತ್ಯಕ್ಷವಾಗುತ್ತಿರುವುದು ಕಾಣುತ್ತಿದೆ. ಕಾರನ್ನೋ ಬೈಕನ್ನೋ ಅಡ್ಡಹಾಕಿ
ನಿಲ್ಲಿಸುದಲ್ಲದೆ ಹೆಚ್ಚಿನ ಹಣ ನೀಡುವಂತೆ ಇಲ್ಲದಿದ್ದರೆ ಕೇಸ್ ಹಾಗ್ತೇನೆ ಎಂದು ಬ್ಲಾಕ್ಮೇಲ್ ಮಾಡುವುದು ಅಂತೂ ನಿಜ. ಒಪ್ಪೊತ್ತಿಗೆ ಊಟ ಇಲ್ಲದ ಸಮಯದಲ್ಲಿ ಇಂತಹ ಹಣದ ಬೇಡಿಕೆಗೆ ಸಾಮಾನ್ಯವಾಗಿ ಜನಸಾಮನ್ಯರು ಹೊಚ್ಚಿಗೇಳುವುದಂತೂ ಸಹಜ. ಇದೀಗ ಚಾಲಕನಿಗೆ ಸಿನಿಮಾ ಸ್ಡೈಲ್ನಲ್ಲಿ ಪಂಚ್ ಮಾಡಿ ಗೂಂಡಾ ವರ್ತನೆ ತೋರಿಸಿದ್ದಾರೆ. ಗೂಂಡಾಗಿರಿ ಯಾಕೆ ಮಾಡ್ತಿರಾ? ಎಂದು ಪ್ರಶ್ನೆ ಮಾಡಿದ ಕಾರ್ ಚಾಲಕನಿಗೆ ಪಿಎಸ್ಐ ಗೂಸಾ ನೀಡಿದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಒಂದು ಸಾವಿರ ದಂಡ ಕಟ್ಟುವಂತೆ ಪಿಎಸ್ಐ ನಿಖಿಲ್ ಬೆದರಿಕೆ ಹಾಕಿದ ಹಿನ್ನೆಲೆ ಇವರಿಬ್ಬರ ನಡುವೆ ವಾಗ್ವಾದ ನಡೆದು ಕಾರು ಚಾಲಕನ ಮೇಲೆ ಟ್ರಾಫಿಕ್ ಪಿಎಸ್ಐನಿಂದ ಹಲ್ಲೆ ನಡೆದಿದ್ದುಸಾಮಾಜಿಕಜಾಲತಾಣದಲ್ಲಿ ಪೊಲೀಸ್ ಪಿಎಸ್ಐ ವಿರುದ್ಧಆಕ್ರೋಶಹೊರಹಾಕಿದ್ದಾರೆ.